BREAKING NEWS | ಗೋಪಾಳದಲ್ಲಿ ಲಂಚ ಸ್ವೀಕರಿಸುತ್ತಿದ್ದ ಪೊಲೀಸ್ ಮೇಲೆ ಎಸಿಬಿ ರೇಡ್, ಹಣ ಸೀಜ್, ಪೊಲೀಸ್ ಅರೆಸ್ಟ್

Corruption-ACB-Raid-1.jpg

ಶಿವಮೊಗ್ಗ ಲೈವ್.ಕಾಂ | SHIMOGA | 16 ಡಿಸೆಂಬರ್ 2019 ಲಂಚ ಸ್ವೀಕರಿಸುತ್ತಿದ್ದ ಪೊಲೀಸ್ ಕಾನ್ಸ್’ಟೇಬಲ್ ಒಬ್ಬರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ. ಗೋಪಾಳ ಬಸ್ ಸ್ಟಾಂಡ್’ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ತುಂಗಾನಗರ ಪೊಲೀಸ್ ಠಾಣೆ ಕಾನ್ಸ್’ಟೇಬಲ್ ನಾರಾಯಣ ಸ್ವಾಮಿ ಎಸಿಬಿ ಬಲೆಗೆ ಬಿದ್ದವರು. ಬೆಳಗ್ಗೆ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ನಾರಾಯಣಸ್ವಾಮಿ ಅವರನ್ನು ಬಂಧಿದ್ದಾರೆ. ಲಂಚಕ್ಕೆ ಡಿಮಾಂಡ್ ಮಾಡಿದ್ದೇಕೆ? ಹಳ್ಳದಿಂದ ಅಕ್ರಮವಾಗಿ ಮರಳು ಸಾಗಣೆ ಮಾಡಲು ಸಹಕರಿಸಲು ನಾರಾಯಣಸ್ವಾಮಿ ಲಂಚಕ್ಕೆ ಬೇಡಿಕೆ … Read more

SHIMOGA | ಅಂದುಕೊಂಡಂತೆ ಆದರೆ ಇನ್ನೊಂದು ವರ್ಷದಲ್ಲಿ ಶಿವಮೊಗ್ಗ ರಿಂಗ್ ರೋಡ್ ರೆಡಿ

161219 Railway Station Road in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 16 ಡಿಸೆಂಬರ್ 2019 ಮೂರೂವರೆ ದಶಕಗಳಿಂದ ಗ್ರಹಣ ಹಿಡಿದಿದ್ದ ಶಿವಮೊಗ್ಗ ರಿಂಗ್ ರಸ್ತೆಯನ್ನು ಪೂರ್ಣಗೊಳಿಸುವ ಸಮಯ ಈಗ ಬಂದಿದೆ. 1980ರ ದಶಕದ ಕಡೆಯಲ್ಲಿಚಾಲನೆಗೊಂಡ ಹೊರ ವರ್ತುಲ ರಸ್ತೆ ನಗರದ ಜನತೆ ಪಾಲಿಗೆ ಕನಸಾಗಿಯೆ ಉಳಿದಿತ್ತು. ಬೆಂಗಳೂರು ಬಳಿಕ ರಾಜ್ಯದಲ್ಲಿ ಶರವೇಗದಲ್ಲಿಬೆಳೆಯುತ್ತಿರುವ ಶಿವಮೊಗ್ಗಕ್ಕೆ ಮತ್ತೊಂದು ರಿಂಗ್ ರಸ್ತೆ ನಿರ್ಮಿಸುವ ಪ್ರಕ್ರಿಯೆಗಳು ಚಾಲನೆಗೊಂಡ ಬಳಿಕ ಹಳೆ ವರ್ತುಲಕ್ಕೆ ಗ್ರಹಣ ಮೋಕ್ಷದ ಸುಯೋಗ ಬಂದಿದೆ. ರೈಲು ನಿಲ್ದಾಣದ ಬಳಿ ಜಾಗ ಬಿಟ್ಟುಕೊಡಲು ಒಪ್ಪದ ರೈಲ್ವೆ ಇಲಾಖೆಯನ್ನು ಕಳೆದ … Read more

ಹಣಗೆರೆಕಟ್ಟೆಯಿಂದ ಬೆಜ್ಜವಳ್ಳಿ ಕಡೆಗೆ ಸ್ಕೂಟಿಯಲ್ಲಿ ಗಾಂಜಾ ಸಾಗಣೆ, ಸಿಕ್ಕಿಬಿದ್ದರು ಮೂವರು

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | THIRTHAHALLI | 16 ಡಿಸೆಂಬರ್ 2019 ಹಣಗೆರೆಕಟ್ಟೆ – ಬೆಜ್ಜವಳ್ಳಿ ಮಾರ್ಗವಾಗಿ ಗಾಂಜಾ ಸಾಗಿಸುತ್ತಿದ್ದ ಮೂವರನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇವರಿಂದ 20 ಸಾವಿರ ರೂ. ಮೌಲ್ಯದ ಗಾಂಜಾ ಮತ್ತು ಸ್ಕೂಟಿ ಜಪ್ತಿ ಮಾಡಲಾಗಿದೆ. ಶಿಕಾರಿಪುರ ತಾಲೂಕಿನ ಕಲ್ಮನೆಯ ಫಕೀರಪ್ಪ (45), ಶಿವಮೊಗ್ಗ ಟ್ಯಾಂಕ್ ಮೊಹಲ್ಲಾದ ಸಿರಾಜುದ್ದೀನ್ ಜಾಫರ್ (22), ಶಿಕಾರಿಪುರ ಕೊರಮರಕೇರಿಯ ಅನಿಲ್ (21) ಬಂಧಿತರು. ಸ್ಕೂಟಿಯಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟಕ್ಕೆ ತೆರಳುವಾಗ ಭಾರತಿಪುರದ ನರ್ಸರಿಗೆ ಹೋಗುವ ರಸ್ತೆಯ ತಿರುವಿನ ಬಳಿ … Read more

SHIMOGA | ಐದು ವರ್ಷದ ಅಕ್ಕನ ಮಗಳಿಗೆ ಚಾಕು ಇರಿದು ಕೊಂದ ಸೋದರ ಮಾವ

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA | 15 ಡಿಸೆಂಬರ್ 2019 ಮಾನಸಿಕ ಅಸ್ವಸ್ಥನೊಬ್ಬ ಐದು ವರ್ಷದ ಅಕ್ಕನ ಮಗಳಿಗೆ ಚಾಕು ಇರಿದು ಹತ್ಯೆ ಮಾಡಿದ್ದಾನೆ. ಶಿವಮೊಗ್ಗದ ಗಾಡಿಕೊಪ್ಪದಲ್ಲಿ ಇವತ್ತು ಬೆಳಗ್ಗೆ ಘಟನೆ ನಡೆದಿದೆ. ರಜನಿ (5) ಮೃತ ಬಾಲಕಿ. ಚಾಕು ಇರಿತದಿಂದ ಗಂಭೀರ ಗಾಯಗೊಂಡಿದ್ದ ರಜನಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆದಲ್ಲೇ ರಜನಿ ಕೊನೆಯುಸಿರೆಳೆದಿದ್ದಾಳೆ. ಚಾಕು ಹಾಕಿದ್ದು ಸೋದರ ಮಾವ ಮಗುವಿನ ಸೋದರ ಮಾವನೇ ಆಕೆಯ ಪಾಲಿಗೆ ಕಂಟಕವಾಗಿಬಿಟ್ಟ. ಸೋದರ ಮಾವ ಸಂತೋಷ್ … Read more

SAGARA | ಖಾಸಗಿ ಮತ್ತು KSRTC ಬಸ್ ಮುಖಾಮುಖಿ ಡಿಕ್ಕಿ, ಗ್ಲಾಸ್ ಪೀಸ್ ಪೀಸ್, ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ

ಶಿವಮೊಗ್ಗ ಲೈವ್.ಕಾಂ | SAGARA | 14 ಡಿಸೆಂಬರ್ 2019 KSRTC ಮತ್ತು ಖಾಸಗಿ ಬಸ್ ಡಿಕ್ಕಿಯಾಗಿದ್ದು, ಬಸ್ಸುಗಳ ಗ್ಲಾಸ್ ಪೀಸ್ ಪೀಸ್ ಆಗಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ. ಹೊಸನಗರದ ನಿಟ್ಟೂರು ಸಮೀಪದ ಚಂಗೊಳ್ಳಿ ಬಳಿ ಬೆಳಗ್ಗೆ ಘಟನೆ ಸಂಭವಿಸಿದೆ. ಸಿಗಂದೂರಿನಿಂದ ಹೊರಟಿದ್ದ KSRTC ಬಸ್ ಮತ್ತು ಬೆಂಗಳೂರಿನಿಂದ ಸಿಗಂದೂರಿಗೆ ತೆರಳುತ್ತಿದ್ದ ಮಿನಿ ಬಸ್ ನಡುವೆ ಸಿಕ್ಕಿಯಾಗಿದೆ. ಮಿನಿ ಬಸ್’ನಲ್ಲಿ ಕಾಲೇಜು ವಿದ್ಯಾರ್ಥಿಗಳಿದ್ದರು ಎಂದು ತಿಳಿದು ಬಂದಿವೆ. ಅವರಿಗೆ ಸಣ್ಣಪುಟ್ಟ ಗಾಯವಾಗಿದೆ. ರಸ್ತೆ ಕಿರಿದಾಗಿದ್ದು, ಅತಿ … Read more

ಚೀಟಿ ನಡೆಸುತ್ತಿದ್ದ ಕಂಪನಿಗೆ ದಿಢೀರ್ ಬಾಗಿಲು, ರಾತ್ರೋರಾತ್ರಿ ಮಾಲೀಕ ಎಸ್ಕೇಪ್, ನೂರಾರು ಜನರಿಗೆ ಲಕ್ಷ ಲಕ್ಷ ಪಂಗನಾಮ

ಶಿವಮೊಗ್ಗ ಲೈವ್.ಕಾಂ | SHIMOGA | 14 ಡಿಸೆಂಬರ್ 2019 ಶಿವಮೊಗ್ಗದಲ್ಲಿ ಮತ್ತೊಂದು ಚಿಟ್ ಫಂಡ್ ಗೋಲ್ಮಾಲ್ ಬಳಕಿಗೆ ಬಂದಿದೆ. ಕೋಟಿ ಕೋಟಿ ಹೂಡಿಕೆ ಮಾಡಿಸಿಕೊಂಡಿದ್ದ ಚೀಟಿ ಸಂಸ್ಥೆಯ ಮಾಲೀಕ ನಾಪತ್ತೆ ಆಗಿದ್ದಾನೆ. ದುಡ್ಡು ಹೂಡಿದ್ದವರು ಈಗ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ನಿತ್ಯ ಪೊಲೀಸ್ ಠಣೆಗೆ ಅಲೆಯುತ್ತಿದ್ದಾರೆ. ಶಿವಮೊಗ್ಗದ ಹೊಳೆ ಬಸ್ ನಿಲ್ದಾಣದ ಬಳಿ ಇದ್ದ ತುಂಗಾ ಚಿಟ್ ಫಂಡ್ ಕಂಪನಿ ಬಾಗಿಲು ಹಾಕಿದೆ. ಇದರ ಮಾಲೀಕ ಶಂಕರನಾಗ್ ಮತ್ತು ರಾಧಾ ಎಂಬುವವರು ತಲೆಮರೆಸಿಕೊಂಡಿದ್ದಾರೆ. … Read more

CRIME | ಅಣ್ಣನಿಗೊಂದು ಸರಿ, ತಮ್ಮನಿಗೊಂದು ಸರಿ ಫೋನ್ ಮಾಡಿದರು, ಇಬ್ಬರ ಅಕೌಂಟ್’ನಿಂದಲೂ ದುಡ್ಡು ಲಪಟಾಯಿಸಿದರು

Cyber-Crime-in-Shivamogga

ಶಿವಮೊಗ್ಗ ಲೈವ್.ಕಾಂ | SHIMOGA | 13 ಡಿಸೆಂಬರ್ 2019 ಬ್ಯಾಂಕ್ ಮ್ಯಾನೇಜರ್ ಎಂದು ಕರೆ ಮಾಡಿ, ಅಕೌಂಟ್ ನಂಬರ್ ಪಡೆದು ಅಣ್ಣ, ತಮ್ಮ ಇಬ್ಬರಿಗೂ ಪಂಗನಾಮ ಹಾಕಿರುವ ಘಟನೆ ಸಾಗರದಲ್ಲಿ ನಡೆದಿದೆ. ಒಬ್ಬರ ಖಾತೆಯಿಂದ 87 ಸಾವಿರ, ಮತ್ತೊಬ್ಬರ ಖಾತೆಯಿಂದ 8 ಸಾವಿರ ರೂ. ಹಣವನ್ನು ಖದೀಮರು ಲಪಟಾಯಿಸಿದ್ದಾರೆ. ಸಾಗರದ ಕೆಳದಿಯ ಹೆಚ್.ಆರ್.ಮಂಜಪ್ಪ ಎಂಬುವವರಿಗೆ ಕರೆ ಮಾಡಿದ ಕಿಡಿಗೇಡಿಯೊಬ್ಬ, ತನ್ನನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾನೆ. ಅವರ ಖಾತೆಯ ವಿವರ, ಎಟಿಎಂ … Read more

SHIMOGA | ಕೇಂದ್ರ ಸರ್ಕಾರದ ನಡೆ ವಿರುದ್ಧ ಶಿವಮೊಗ್ಗದಲ್ಲಿ ತೀವ್ರ ಆಕ್ರೋಶ, ಮಸೂದೆಗೆ ಅಂಗೀಕಾರ ನೀಡದಂತೆ ರಾಷ್ಟ್ರಪತಿಗೆ ಒತ್ತಾಯ

ಶಿವಮೊಗ್ಗ ಲೈವ್.ಕಾಂ | SHIMOGA | 13 ಡಿಸೆಂಬರ್ 2019 ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಶಿವಮೊಗ್ಗದಲ್ಲಿ ಇವತ್ತು ಮುಸ್ಲಿಂ ಸಮುದಾಯದವರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ರಾಜಕೀಯ ಲಾಭಕ್ಕಾಗಿ ಮಸೂದೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು. ಮುಸ್ಲಿಂ ಮುತ್ತಹಿದ ಮಹಾಝ್ ಕಮಿಟಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂದೆ ಕೇಂದ್ರ ಸರ್ಕಾರದ ನಡೆ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪೌರತ್ವ ತಿದ್ದುಪಡಿ ಮಸೂದೆಯು ಸಂವಿದಾನದ ಪರಿಚ್ಛೇದ 14 ಮತ್ತು ಅಂತಾರಾಷ್ಟ್ರೀಯ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, … Read more

ಅಂಬೇಡ್ಕರ್ ಭವನದ ವೇದಿಕೆ ಮೇಲೆಯೇ ಪ್ರತಿಭಟನೆಗೆ ಕುಳಿತ ಕಲಾವಿದರು, ಅಹೋರಾತ್ರಿ ಧರಣಿಯ ವಾರ್ನಿಂಗ್, ಕಾರಣವೇನು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 13 ಡಿಸೆಂಬರ್ 2019 ಜಿಲ್ಲಾಮಟ್ಟದ ಯುವಜನೋತ್ಸವದ ಬಹುಮಾನ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಕಲಾವಿದರು ಅಂಬೇಡ್ಕರ್ ಭವನದ ವೇದಿಕೆ ಮೇಲೆ ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಬೇಡಿಕೆ ಈಡೇರುವವರೆಗೆ ವೇದಿಕೆಯಿಂದ ಕೆಳಗಿಳಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಶಿವಮೊಗ್ಗದಲ್ಲಿ ಎರಡು ದಿನದ ಜಿಲ್ಲಮಟ್ಟದ ಯುವಜನೋತ್ಸವ ಆಯೋಜಿಸಲಾಗಿತ್ತು. ಜಿಲ್ಲೆಯ ವಿವಿಧೆಡೆಯ ಕಲಾವಿದರು ಯುವಜನೋತ್ಸವದಲ್ಲಿ ಭಾಗವಹಿಸಿದ್ದರು. ವಿವಿಧ ಸ್ಪರ್ಧೆಗಳು ನಡೆದವು. ಆದರೆ ಬಹುಮಾನ ಘೋಷಣೆ ಆಗುತ್ತಿದ್ದಂತೆ ಕಲಾವಿದರು ಆಕ್ರೋಶಗೊಂಡರು. ಕಲಾವಿದರ ಆಕ್ರೋಶಕ್ಕೆ ಕಾರಣವೇನು? ಯುವಜನೋತ್ಸವದಲ್ಲಿ … Read more

ಶಿವಮೊಗ್ಗ | ‘ಗುಂಡಿ ಮೇಲೆ ಗುಂಡಿ ತೆಗೆದರು, ವಿದ್ಯಾರ್ಥಿ ವೇತನ ಕಟ್ ಮಾಡಿದರು, ಒಂದು ವರ್ಷದಲ್ಲಿ ಪಾಲಿಕೆ ಸಂಪೂರ್ಣ ವಿಫಲ’

ಶಿವಮೊಗ್ಗ ಲೈವ್.ಕಾಂ | SHIMOGA | 12 ಡಿಸೆಂಬರ್ 2019 ಬಿಜೆಪಿ ನೇತೃತ್ವದ ಮಹಾನಗರ ಪಾಲಿಕೆಯ ಒಂದು ವರ್ಷದ ಆಡಳಿತ ಸಂಪೂರ್ಣ ವಿಫಲವಾಗಿದೆ ಅಂತಾ ಮಾಜಿ ಮೇಯರ್ ನಾಗರಾಜ್ ಕಂಕಾರಿ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾನಗರಪಾಲಿಕೆ ಆಡಳಿತ ಸಂಪೂರ್ಣ ವಿಫಲವಾಗಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಜನವಿರೋಧಿ ಆಡಳಿತಕ್ಕೆ ಪ್ರಖ್ಯಾತಿಯಾಗಿದೆ. ಯಾವ ಅಭಿವೃದ್ದಿಯೂ ಆಗಿಲ್ಲ. ಅನುದಾನದ ಬಳಕೆಯೂ ಕೂಡ ಆಗಿಲ್ಲ ಮತ್ತು ತಾರತಮ್ಯದಿಂದ ಕೂಡಿದೆ. ಬಿಜೆಪಿ ಸದಸ್ಯರ ವಾರ್ಡ್’ಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ದೂರಿದರು. ಬೇಕಾಬಿಟ್ಟಿ ತೆಗೆಯಲಾಗ್ತಿದೆ … Read more