SHIMOGA | ಪಿಗ್ಮಿ, RD, FD ಕಟ್ಟಿಸಿಕೊಂಡು ಕೈ ಎತ್ತಿದ ಕೋ ಆಪರೇಟಿವ್ ಸೊಸೈಟಿ, ಶಿವಮೊಗ್ಗದಲ್ಲಿ ಪ್ರತಿಭಟನೆ
ಸಮೃದ್ದ ಜೀವನ್ ಮಲ್ಟಿಪರ್ಪಸ್ ಕೋ.ಆಪರೇಟಿವ್ ಸೊಸೈಟಿ ಹೂಡಿಕೆದಾರರಿಗೆ ಮೋಸ ಮಾಡಿದ್ದು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಸನ್ಮಾರ್ಗ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಶಿವಮೊಗ್ಗದ ಸಮೃದ್ಧ ಜೀವನ್ ಮಲ್ಟಿಪರ್ಪಸ್ ಕೋ.ಆಪರೇಟಿವ್ ಸೊಸೈಟಿ ಕಂಪೆನಿಯು ಕೋ.ಆಪರೇಟಿವ್ ಸೊಸೈಟಿ ಹೆಸರಿನಲ್ಲಿ ನಗರದಲ್ಲಿ ಕಾರ್ಯನಿರ್ವಹಿಸಿದ್ದು, ಪಿಗ್ಮಿ, ಆರ್‌ಡಿ, ಎಫ್‌ಡಿ ರೂಪದಲ್ಲಿ ಬಾಂಡ್‌ಗಳನ್ನು ನೀಡುವ ಮೂಲಕ ಸಾರ್ವಜನಿಕರಿಂದ ಲೀಡರ್ ಸಿಸ್ಟಮ್ ವ್ಯವಸ್ಥೆಯಡಿಯಲ್ಲಿ ಹಣ ಪಡೆಯಲಾಗಿದೆ ಎಂದರು. ಕಂಪೆನಿ, ಕಚೇರಿ ಬಂದ್ ಆಗಿರುವುದರಿಂದ ನಗರದಲ್ಲಿ ಹೂಡಿಕೆದಾರರು ಆತಂಕಕ್ಕೆ ಒಳಗಾಗಿದ್ದಾರೆ. ಕಷ್ಟಪಟ್ಟು … Read more