ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದ ಮುಂದೆ ಬೈಕ್ ಅಡ್ಡಗಟ್ಟಿ ಮೊಬೈಲ್ ಕದ್ದ ದುಷ್ಕರ್ಮಿಗಳು

Doddapete police station in shimoga

ಶಿವಮೊಗ್ಗ ಲೈವ್.ಕಾಂ | SHIMOGA | 15 ನವೆಂಬರ್ 2019 ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದ ಮುಂದೆ ಬೈಕ್ ಅಡ್ಡಗಟ್ಟಿ, ದುಷ್ಕರ್ಮಿಗಳು ಯುವಕನೊಬ್ಬನ ಮೊಬೈಲ್ ಕತ್ತುಕೊಂಡು ಪರಾರಿಯಾಗಿದ್ದಾರೆ. ಸ್ನೇಹಿತನನ್ನು ಬಸ್ಸಿಗೆ ಬಿಡಲು ತೆರಳಿದ್ದಾಗ ಘಟನೆ ನಡೆದಿದೆ. ವಿನೋಬನಗರ ನಿವಾಸಿ ರಂಜಿತ್, ತಮ್ಮ ಸ್ನೇಹಿತರೊಬ್ಬರನ್ನು ಬಿಡಲು ಬಸ್ ನಿಲ್ದಾಣಕ್ಕೆ ತೆರಳಿದ್ದರು. ಮನೆಗೆ ಮರಳುವಾಗ ದುಷ್ಕರ್ಮಿಗಳು, ಖಾಸಗಿ ಬಸ್ ನಿಲ್ದಾಣದ ಬಳಿ, ರಂಜಿತ್ ಅವರ ಬೈಕ್’ಗೆ ಮತ್ತೊಂದು ಬೈಕ್ ಅಡ್ಡಗಟ್ಟಿದ್ದಾರೆ. ಅವರ ಬಳಿ ಇದ್ದ ಚಿನ್ನದ ಖಡ್ಗ ಮತ್ತು ಪರ್ಸ್ … Read more

ಪಾದಾಚಾರಿಗೆ ಡಿಕ್ಕಿ ಹೊಡೆಸಿ ಸಾವಿಗೆ ಕಾರಣವಾಗಿದ್ದ ತೀರ್ಥಹಳ್ಳಿ ಬೈಕ್ ಸವಾರಿಗೆ ಜೈಲು, ದಂಡ

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIMOGA | 15 ನವೆಂಬರ್ 2019 ತೀರ್ಥಹಳ್ಳಿ ಪಟ್ಟಣದಲ್ಲಿ ಪಾದಾಚಾರಿ ಸಾವಿಗೆ ಕಾರಣವಾಗಿದ್ದ ಬೈಕ್ ಸವಾರನಿಗೆ ಜೆಎಂಎಫ್‌ಸಿ ನ್ಯಾಯಾಲಯ 6 ತಿಂಗಳು ಜೈಲು, 5,500 ರೂ. ದಂಡ ವಿಧಿಸಿದೆ. ರಾಘವೇಂದ್ರ ಶಿಕ್ಷೆಗೆ ಒಳಗಾದ ಸವಾರ, 2015ರ ಫೆ.5ರಂದು ಪಾದಚಾರಿ ಟಿ.ಕೆ.ಅನ್ವರ್ ಬಾಷಾ ಎಂಬುವರಿಗೆ ಡಿಕ್ಕಿ ಹೊಡೆಸಿದ್ದರು. ಗಂಭೀರವಾಗಿ ಗಾಯ ಗೊಂಡಿದ್ದ ಅನ್ವರ್ ಬಾಷಾ ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಎಚ್.ಕೆ.ಅಖಿಲ್, ರಾಘವೇಂದ್ರಗೆ ಜೈಲು … Read more

ದುರ್ಗೀಗುಡಿಯಲ್ಲಿ ಡಿಫರೆಂಟ್ ಕನ್ನಡ ಸೇವೆ, ಬೀಡಾ ಅಂಗಡಿಯಲ್ಲಿ ನಿತ್ಯೋತ್ಸವವಾಗಿದೆ ರಾಜ್ಯೋತ್ಸವ, ಹೇಗದು? ಏನು ನಡೆಯುತ್ತೆ ಇಲ್ಲಿ?

151119 Chennudi Balaga Quiz 1

ಶಿವಮೊಗ್ಗ ಲೈವ್.ಕಾಂ | SHIMOGA | 15 ನವೆಂಬರ್ 2019 ಇವರದ್ದು ಡಿಫರೆಂಟ್ ಕನ್ನಡ ಪ್ರೇಮ..! ಪ್ರತಿ ದಿನವು ಈ ಅಂಗಡಿ ಮುಂದೆ ನಡೆಯುತ್ತೆ ಕರ್ನಾಟಕ ರಾಜ್ಯೋತ್ಸವ, ಮಕ್ಕಳ ದಿನಾಚರಣೆ..! ಹೌದು. ಇಲ್ಲಿ ರಾಜ್ಯೋತ್ಸವ ನಿತ್ಯೋತ್ಸವವಾಗಿದೆ. ಮಕ್ಕಳ ಪಾಲಿಗೆ ಹೊಸ ವಿಚಾರ ತಿಳಿಯುವ ವೇದಿಕೆಯಾಗಿದೆ. ದುರ್ಗೀಗುಡಿಯಲ್ಲಿರುವ ಈ ಬೀಡಾ ಅಂಗಡಿಗೆ ಪ್ರತಿ ದಿನ ನೂರಕ್ಕು ಹೆಚ್ಚು ಮಕ್ಕಳು ಭೇಟಿ ನೀಡುತ್ತಾರೆ. ಬೀಡಾ ಅಂಗಡಿಯಲ್ಲಿ ಏನಾಗುತ್ತೆ? ದುರ್ಗೀಗಿಡಿಯ ಶನಿಮಹಾತ್ಮ ಸ್ವಾಮಿ ದೇವಸ್ಥಾನದ ಎದುರಿಗೆ ಇರುವ ಶ್ರೀ ದುರ್ಗಾ ಸ್ಟಾಲ್ … Read more

ಒಡವೆ ಬ್ಯಾಗ್ ಜೊತೆಗೆ ಎಸ್ಕೇಪ್ ಆಗಿದ್ದ ಆಟೋ ಡ್ರೈವರ್ ಶಿವಮೊಗ್ಗದಲ್ಲಿ ಅರೆಸ್ಟ್

Doddapete police station in shimoga

ಶಿವಮೊಗ್ಗ ಲೈವ್.ಕಾಂ | SHIMOGA | 14 ನವೆಂಬರ್ 2019 ಪ್ರಯಾಣಿಕರ ಚಿನ್ನಾಭರಣದ ಬ್ಯಾಗನ್ನು ಕದ್ದು ಸಾಗಿಸಿದ್ದ ಆಟೊ ಚಾಲಕನನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ರೂ. ಮೌಲ್ಯದ 159 ಗ್ರಾಂ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಬ್ಬಲಗೆರೆಯ ಬಸವನಗೌಡ (44) ಬಂಧಿತ ಆರೋಪಿ. ನ.4ರಂದು ಎನ್.ಟಿ.ರಸ್ತೆ 7ನೇ ತಿರುವು ವಾಸಿಗಳಾದ ಇಬ್ಬರು ಮಹಿಳೆಯರು ಬಸ್ ನಿಲ್ದಾಣದಿಂದ ತಮ್ಮ ಮನೆಗೆ ಬಸವನಗೌಡನ ಆಟೊದಲ್ಲಿ ಪ್ರಯಾಣಿಸಿದ್ದರು. ತುಂಬ ಬ್ಯಾಗ್’ಗಳಿದ್ದ ಕಾರಣ ಆಟೊದಲ್ಲಿ ಬರುವಾಗ ಚಾಲಕನ ಬಳಿ ಒಡವೆಯ ಬ್ಯಾಗನ್ನು … Read more

ಶಿವಮೊಗ್ಗದಲ್ಲಿ ಮೆಡಿಕಲ್ ವಿದ್ಯಾರ್ಥಿ ನಿಗೂಢ ಸಾವು, ರೂಂನಲ್ಲಿದ್ದ ಹಾಸಿಗೆ ಧಗಧಗ, ಘಟನೆಗೇನು ಕಾರಣ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 12 ನವೆಂಬರ್ 2019 ಶಿವಮೊಗ್ಗದಲ್ಲಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಪ್ರಕರಣದ ತನಿಖೆಗೆ  ದಾವಣಗೆರೆಯಿಂದ ವಿಶೇಷ ತಂಡವೊಂದು ಶಿವಮೊಗ್ಗಕ್ಕೆ ಆಗಮಿಸಿತ್ತು. ಘಟನೆ ಏನಾಗಿದೆ? ಮೃತ ವಿದ್ಯಾರ್ಥಿ ಯಾರು? ಸುಬ್ಬಯ್ಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿ ನಿತಿನ್ (23), ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಪುರಲೆಯ ಮೂರನೆ ಕ್ರಾಸ್’ನಲ್ಲಿರುವ ರೂಂನಲ್ಲಿ ಸೋಮವಾರ ಸಂಜೆ ಘಟನೆ ನಡೆದಿದೆ. ನಿತಿನ್ ರೂಂನಿಂದ ಹೊಗೆ ಬರುತ್ತಿರುವುದನ್ನು ಸ್ಥಳೀಯರು ಮತ್ತು ಸ್ನೇಹಿತರು ಗಮನಿಸಿದ್ದಾರೆ. ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನನ್ನು ಸಮೀಪದ … Read more

ಚಲಿಸುತ್ತಿದ್ದ ಕಾರಿನೊಳಗೆ ನುಗ್ಗಿತು ಗೂಡ್ಸ್ ಗಾಡಿಯಲ್ಲಿದ್ದ ಆ್ಯಂಗ್ಲರ್, ತಪ್ಪಿತು ದೊಡ್ಡ ಅನಾಹುತ

ಶಿವಮೊಗ್ಗ ಲೈವ್.ಕಾಂ | SHIMOGA | 10 ನವೆಂಬರ್ 2019 ಹ್ಯಾಂಗ್ಲರ್ ತುಂಬಿಕೊಂಡಿದ್ದ ಗೂಡ್ಸ್ ವಾಹನ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೆ ಪ್ರಾಣಹಾನಿ ಆಗಿಲ್ಲ. ಶಿವಮೊಗ್ಗದ ಬಾಲರಾಜ ಅರಸ್ ರಸ್ತೆಯಲ್ಲಿ ಇವತ್ತು ಮಧ್ಯಾಹ್ನ ಘಟನೆ ಸಂಭವಿಸಿದೆ. ಗೂಡ್ಸ್ ವಾಹನದಲ್ಲಿದ್ದ ಹ್ಯಾಂಗ್ಲರ್’ಗಳು ಮುಂದೆ ಹೋಗುತ್ತಿದ್ದ ಕಾರಿನ ಹಿಂಬದಿ ಗ್ಲಾಸ್’ಗೆ ಗುದ್ದಿದೆ. ಅಲ್ಲದೆ ಹ್ಯಾಂಗ್ಲರ್’ಗಳ ಮುಂಭಾಗ ಕಾರಿನೊಳಗೆ ನುಗ್ಗಿದೆ. ಗೂಡ್ಸ್ ವಾಹನದಲ್ಲಿ ಹ್ಯಾಂಗ್ಲರ್’ಗಳನ್ನು ಬಿಗಿಯಾಗಿ ಕಟ್ಟದೆ ಇರುವುದೆ ಘಟನೆಗೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಪಘಾತದಲ್ಲಿ … Read more

ತುಂಗಾ ನದಿ ಹಳೆ ಸೇತುವೆಗೆ ಖಾಸಗಿ ಬಸ್ ಡಿಕ್ಕಿ, ಆ್ಯಂಗ್ಲರ್ ಪೀಸ್ ಪೀಸ್

ಶಿವಮೊಗ್ಗ ಲೈವ್.ಕಾಂ | SHIMOGA | 10 ನವೆಂಬರ್ 2019 ತುಂಗಾ ನದಿ ಹಳೆ ಸೇತುವೆಗೆ ಅಳವಡಿಸಲಾಗಿದ್ದ ಹ್ಯಾಂಗ್ಲರ್’ಗೆ ಮತ್ತೆ ವಾಹನ ಡಿಕ್ಕಿ ಹೊಡೆದಿದೆ. ಈ ಬಾರಿ ಆ್ಯಂಗ್ಲರ್ ತುಂಡಾಗಿದೆ. ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ ತುಂಡಾಗಿದ್ದ ಆ್ಯಂಗ್ಲರ್ ಸಂಚಾರಿ ಪೊಲೀಸರು ಸೈಡಿಗಿಟ್ಟಿದ್ದಾರೆ ಶನಿವಾರ ರಾತ್ರಿ ಖಾಸಗಿ ಬಸ್ ಸೇತುವೆಯ ಆ್ಯಂಗ್ಲರ್‌ಗೆ ಡಿಕ್ಕಿ ಹೊಡಿದಿದೆ. ಅಪಘಾತದ ರಭಸಕ್ಕೆ ಹ್ಯಾಂಗ್ಲರ್ ಎರಡು ಭಾಗವಾಗಿದೆ. ಹಾಗಾಗಿ ಭಾನುವಾರ ಕೆಲಕಾಲ ಸೇತುವೆ ಮೇಲೆ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಸೇತುವೆ … Read more

ಭದ್ರಾವತಿ ವಿಐಎಸ್ಎಲ್, ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ವಿನಯ್ ಗುರೂಜಿ

ಶಿವಮೊಗ್ಗ ಲೈವ್.ಕಾಂ | BHADRAVATHI | 11 ನವೆಂಬರ್ 2019 ವಿನಯ್ ಗುರೂಜಿ ಅವರು ಶಾಸಕ ಬಿ.ಕೆ.ಸಂಗಮೇಶ್ವರ್ ಅವರೊಂದಿಗೆ ಭಾನುವಾರ ಇಲ್ಲಿನ ವಿಐಎಸ್‌ಎಲ್ ಕಾರ್ಖಾನೆಗೆ ಭೇಟಿ ನೀಡಿದರು. ಪ್ರಸ್ತುತ ಕಾರ್ಖಾನೆಯ ಸ್ಥಿತಿಗತಿ ಬಗ್ಗೆ ಸಂಗಮೇಶ್ವರ್ ಅವರಿಂದ ಮಾಹಿತಿ ಪಡೆದ ಗುರೂಜಿ, ಕಾರ್ಖಾನೆಯ ವಿವಿಧ ಪ್ಲಾಂಟ್‌ಗಳ ಪರಿಶೀಲನೆ ನಡೆಸಿದರು. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸೇವಾಕಾರ್ಯಗಳಿಗೆ ಚಾಲನೆ ನೀಡಲು ನಗರಕ್ಕೆ ಆಗಮಿಸಿದ್ದ ವಿನಯ್ ಗುರೂಜಿ ಅವರು ಬೆಳಗ್ಗೆ ತಾಲೂಕು ಕಚೇರಿ ರಸ್ತೆಯಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನ, ಹಳೇನಗರದ ಗ್ರಾಮ ದೇವತೆ ಶ್ರೀ … Read more

ನವೆಂಬರ್ ತಿಂಗಳು ಮುಗಿಯೋದರಲ್ಲಿ ಗುಂಡಿ ಮುಕ್ತ ಆಗ್ತವಂತೆ ಶಿವಮೊಗ್ಗದ ಪ್ರಮುಖ ರಸ್ತೆಗಳು

090919 Pothole at Dheendayal Upadhyaya Road 1

ಶಿವಮೊಗ್ಗ ಲೈವ್.ಕಾಂ | SHIMOGA | 11 ನವೆಂಬರ್ 2019 ನವೆಂಬರ್ ತಿಂಗಳ ಅಂತ್ಯದೊಳಗೆ ಶಿವಮೊಗ್ಗದ ನಗರದ ಎಲ್ಲ ಮುಖ್ಯ ರಸ್ತೆಗಳು ಗುಂಡಿ ಮುಕ್ತವಾಗಲಿದೆ. ಇದಕ್ಕಾಗಿ ಟೆಂಡರ್ ಕರೆಯಾಗಿದೆ ಎಂದು ಮಹಾನಗರ ಪಾಲಿಕೆ ತಿಳಿಸಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಗೆ ಶಿವಮೊಗ್ಗ ನಗರದ ರಸ್ತೆಗಳಲ್ಲಿ ಗುಂಡಿ ಬಿದ್ದಿದೆ. ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಗೆ ಬರುವ 24 ರಸ್ತೆಗಳಲ್ಲಿ, ಗುಂಡಿ ಮುಚ್ಚುವ ಕಾರ್ಯ ಆರಂಭವಾಗಿದೆ. ಈ ಕುರಿತು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ … Read more

ಶಿವಮೊಗ್ಗದಲ್ಲಿ 23 ಪೊಲೀಸರ ಮೊಬೈಲ್ ಎಗರಿಸಿದ್ದ ಖತರ್ನಾಕ್ ಕಳ್ಳನ ಅರೆಸ್ಟ್

Doddapete police station in shimoga

ಶಿವಮೊಗ್ಗ ಲೈವ್.ಕಾಂ | SHIMOGA | 9 ನವೆಂಬರ್ 2019 ಹಿಂದೂ ಮಹಾಸಭಾ ಗಣೇಶ ವಿಸರ್ಜನೆಯ ಬಂದೋಬಸ್ತ್’ಗೆ ಬಂದಿದ್ದ ಪೊಲೀಸರ ಮೊಬೈಲ್ ಕದಿದ್ದ ಆರೋಪಿಯನ್ನು ದೊಡ್ಡಪೇಟೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಮಿಳುನಾಡು ಮೂಲದ ಕಾರ್ತಿಕ್ ಅಲಿಯಾಸ್ ಮಂಜುನಾಥ್ (34) ಬಂಧಿತ ಆರೋಪಿ. ಶಿವಮೊಗ್ಗ ಹಿಂದೂ ಮಹಾಸಭಾ ವಿಸರ್ಜನೆ ಬಂದೋಬಸ್ತ್’ಗೆ ಬಂದಿದ್ದ ಪೊಲೀಸರು ಮೊಬೈಲ್’ಗಳನ್ನು ಕಾರ್ತಿಕ್ ಕಳ್ಳತನ ಮಾಡಿದ್ದ. ಪೊಲೀಸರು ತಂಗಿದ್ದ ಸಮುದಾಯದ ಭವನದಲ್ಲಿ ಕಾರ್ತಿಕ್ ಕಳ್ಳತನ ಮಾಡಿದ್ದ. ದೊಡ್ಡಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯ ಒಂದು ಮೊಬೈಲ್ … Read more