ಭದ್ರಾವತಿಯ ವಿಐಎಸ್ಎಲ್’ಗೆ ಮರುಜೀವ, ಕೊನೆಗೂ ಮಂಜೂರಾಯ್ತು 150 ಎಕರೆಯ ಗಣಿ

VISL Bhadravathi 1

ಶಿವಮೊಗ್ಗ ಲೈವ್.ಕಾಂ | 25 ಫೆಬ್ರವರಿ 2019 ಮುಚ್ಚುವ ಹಂತ ತಲುಪಿದ್ದ ವಿಐಎಸ್ಎಲ್ ಕಾರ್ಖಾನೆಗೆ ಮರುಜೀವ ಸಿಕ್ಕಂತಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 150 ಎಕರೆ ಗಣಿ ಮಂಜೂರಾಗಿದೆ. ಈ ಸಂಬಂಧ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. ಸಂಡೂರಿನ ರಮಣದುರ್ಗದ ಬ್ಲಾಕ್ ನಂಬರ್ 13/1ರಲ್ಲಿ 150 ಎಕರೆ ಭೂಮಿಯನ್ನು ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಗೆ 10 ವರ್ಷಗಳವರೆಗೆ  ಮಂಜೂರು ಮಾಡಲಾಗಿದೆ. ಹತ್ತು ವರ್ಷದ ಬಳಿಕ ನವೀಕರಣಕ್ಕೂ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವಿಐಎಸ್ಎಲ್ ಕಾರ್ಮಿಕರು ನಿಟ್ಟುಸಿರು ಬಿಡುವಂತಾಗಿದೆ. ಸಿದ್ದರಾಮಯ್ಯ ಅವರು ಸಿಎಂ … Read more

ಗೋಪಿ ಸರ್ಕಲ್’ನಲ್ಲಿ ಈಶ್ವರಪ್ಪ V/s ಸಚಿವ ಖಾದರ್, ಮಾತಿಗೆ ಮಾತಲ್ಲಿ ಗೆದ್ದವರಾರು? ವಿಡಿಯೋ ರಿಪೋರ್ಟ್

ಶಿವಮೊಗ್ಗ ಲೈವ್.ಕಾಂ | 24 ಫೆಬ್ರವರಿ 2019 ಸ್ಮಾರ್ಟ್ ಸಿಟಿ ಕಾಮಗಾರಿಗಳ ಶಂಕುಸ್ಥಾಪನೆಗೆ ಬಂದಿದ್ದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಮತ್ತು ಶಾಸಕ ಕೆ.ಎಸ್.ಈಶ್ವರಪ್ಪ ನಡುವೆ, ಬಹಿರಂಗ ವೇದಿಕೆಯಲ್ಲೇ, ಮಾತಿನ ಜುಗಲ್’ಬಂದಿ ನಡೆಯಿತು. ಗೋಪಿ ಸರ್ಕಲ್’ನಲ್ಲಿ ನಡೆದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಈಶ್ವರಪ್ಪ ಅವರ ಮಾತಿಗೆ, ಎಲ್ಲರನ್ನು ನಗಿಸುತ್ತಲೇ ಉತ್ತರ ನೀಡಿದ ಖಾದರ್, ಆಪರೇಷನ್ ಕಮಲ ಮಾಡದಂತೆ ಮನವಿ ಮಾಡಿದರು. ಅಷ್ಟೇ ಅಲ್ಲ, ಸರ್ಕಾರದ ಖಜಾನೆ ಕೂಡ ಗಟ್ಟಿಯಾಗಿದೆ ಅಂತಾ ಸ್ಪಷ್ಟನೆ ನೀಡಿದರು. ಇಬ್ಬರ ಮಾತಿನ ಜುಗಲ್’ಬಂದಿ ಸಬೀಕರಿಗೆ ಖುಷಿ … Read more

ಶಿವಮೊಗ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸಚಿವ ಖಾದರ್ ಖಡಕ್ ಸವಾಲು, ಯಾವ ವಿಚಾರಕ್ಕೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | 24 ಫೆಬ್ರವರಿ 2019 ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಗಂಭೀರ ಆರೋಪ ಮಾಡಿದ್ದಾರೆ. ಯುಪಿಎ ಸರ್ಕಾರದ ಅವಧಿಯ ಯೋಜನೆಗಳು, ನೀತಿಗಳನ್ನೇ ಮುಂದುವರೆಸಿದ್ದಾರೆ. ದೇಶದ ಭವಿಷ್ಯಕ್ಕೆ ಅಗತ್ಯವಿರುವ ಒಂದೇ ಒಂದು ಯೋಜನೆಯನ್ನೂ ಮೋದಿ ಸರ್ಕಾರ ಆರಂಭಿಸಿಲ್ಲ. ಯಾವುದಾದರೂ ಯೋಜನೆಗಳು, ನೀತಿಗಳನ್ನು ಮೋದಿ ರೂಪಿಸಿದ್ದರೆ ತಿಳಿಸಲಿ ಎಂದು ಸವಾಲು ಹಾಕಿದರು. ಇದೇ ವೇಳೆ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಬಿಜೆಪಿ ವಿರುದ್ಧ ಖಡಕ್ ಉತ್ತರ ನೀಡಿದ್ದಾರೆ. … Read more

‘ಸಿಎಂ ಕುಮಾರಸ್ವಾಮಿ ನನ್ನ ಬಳಿಯೇ ಆ ವಿಚಾರ ಮಾತಾಡಿದ್ದಾರೆ, ಆದರೆ ನಾಳೆ ಕೇಳಿದರೆ ಇಲ್ಲ ಅಂತಾರೆ..!’

Eshwarappa Kumaraswamy KSE HDK 1

ಶಿವಮೊಗ್ಗ ಲೈವ್.ಕಾಂ | 23 ಫೆಬ್ರವರಿ 2019 ಜೆಡಿಎಸ್ ಪಕ್ಷದ ಸಚಿವರು, ಶಾಸಕರಿಗೆ ಬಿಜೆಪಿ ಜೊತೆಗೆ ಸರ್ಕಾರ ಮಾಡುವ ಆಸೆಯಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಈ ವಿಚಾರವನ್ನು ತಮ್ಮ ಬಳಿ ಹೇಳಿದ್ದಾರೆ ಅಂತಾ ಶಾಸಕ ಕೆ.ಎಸ್.ಈಶ್ವರಪ್ಪ ಬಾಂಬ್ ಸಿಡಿಸಿದ್ದಾರೆ. ಅಷ್ಟಕ್ಕೂ ಈಶ್ವರಪ್ಪ ಹೇಳಿದ್ದೇನು? ವಿಡಿಯೋ ನೋಡಿ ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200 ಸುದ್ದಿಗಾಗಿ ಮೊಬೈಲ್ ನಂಬರ್ | 9964634494 ಈ ಮೇಲ್ | shivamoggalive@gmail.com

ಶಿವಮೊಗ್ಗವನ್ನು ಗೂಂಡಾ ರಾಜ್ಯ ಅಂದರು ಶಾಸಕ ಈಶ್ವರಪ್ಪ, ಅಷ್ಟಕ್ಕೂ ಶಾಸಕರ ಹೇಳಿಕೆಗೆ ಕಾರಣವೇನು ಗೊತ್ತಾ?

Eshwarappa General Image 1

ಶಿವಮೊಗ್ಗ ಲೈವ್.ಕಾಂ | 23 ಫೆಬ್ರವರಿ 2019 ಗಾಂಜಾ, ಮಟ್ಕಾ, ಮರಳು ದಂಧೆ ಕುರಿತು ವಾಗ್ದಾಳಿ ನಡೆಸುವ ಸಂದರ್ಭ, ಶಾಸಕ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಜಿಲ್ಲೆಯನ್ನು ಗೂಂಡಾ ರಾಜ್ಯ ಎಂದು ಆರೋಪಿಸಿದ್ದಾರೆ. ನೂತನ ಜಿಲ್ಲಾ ರಕ್ಷಣಾಧಿಕಾರಿ ಅವರು ಈ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಈಶ್ವರಪ್ಪ ಆಗ್ರಹಿಸಿದ್ದಾರೆ. ಇನ್ನು, ತಾವು ಪ್ರತಿನಿಧಿಸುವ ಕ್ಷೇತ್ರದ ಕುರಿತು ಗೂಂಡಾ ರಾಜ್ಯ ಅನ್ನುವುದು ಸರಿಯೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಈ ಕುರಿತು ವಿಧಾನ ಮಂಡಲದಲ್ಲೂ ಆಗ್ರಹಿಸಿದ್ದೇವೆ. ರಾಜ್ಯಾದ್ಯಂತ ಇದೇ ಸ್ಥಿತಿ ಇದೆ. … Read more

ಮಂಗನ ಕಾಯಿಲೆ ಆತಂಕದ ಬೆನ್ನಿಗೆ ಹೊಸನಗರದಲ್ಲಿ ಪ್ರತ್ಯಕ್ಷವಾಯ್ತು ಹೆಚ್1ಎನ್1

HOSANAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | 23 ಫೆಬ್ರವರಿ 2019 ಮಂಗನ ಕಾಯಿಲೆ ಆತಂಕ ದೂರಾಗುವ ಮೊದಲೇ, ಹೊಸನಗರದಲ್ಲಿ ಹೆಚ್1ಎನ್1 ಮಹಾಮಾರಿ ಪ್ರತ್ಯಕ್ಷವಾಗಿದೆ. ಈಗಾಗಲೇ ಇಬ್ಬರಲ್ಲಿ ಹೆಚ್1ಎನ್1 ಸೋಂಕು ಪತ್ತೆಯಾಗಿದೆ. ಸುಮಾರು 20 ಮಂದಿಗೆ ಸೋಂಕು ತಗುಲಿರುವ ಆತಂಕವಿದೆ. ನಗರ ಹೋಬಳಿಯಲ್ಲಿ ಸೋಂಕು ಪತ್ತೆಯಾಗಿದೆ. ಹಾಗಾಗಿ ತಾಲೂಕು ವೈದ್ಯಾಧಿಕಾರಿಗಳು ನಗರ ಹೋಬಳಿಗೆ ಭೇಟಿ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ತೆರಳಿ, ಚಿಕಿತ್ಸೆಯ ಕುರಿತು ಪರಿಶೀಲನೆ ನಡೆಸಿದ್ದಾರೆ. ‘ಹೆಚ್1ಎನ್1 ಭಯ ಬೇಡ’ ಹಂದಿ ಜ್ವರದ ಹಿನ್ನೆಲೆ, ತಾಲೂಕು ವೈದ್ಯಾಧಿಕಾರಿ ಡಾ.ಸುರೇಶ್ ನೇತೃತ್ವದಲ್ಲಿ, ಮೂಡುಗೊಪ್ಪ … Read more

ಇನ್ನೋವಾ ಕಾರಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿಕೊಂಡರು, ಹಣವನ್ನೇ ಕೊಡದೆ ಪರಾರಿಯಾದರು

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | 22 ಫೆಬ್ರವರಿ 2019 ಕಾರಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿಕೊಂಡು, ಹಣವನ್ನೇ ಕೊಡದೇ, ನಾಲ್ವರು ಪರಾರಿಯಾಗಿದ್ದಾರೆ. ತೀರ್ಥಹಳ್ಳಿಯ ಸಹ್ಯಾದ್ರಿ ಪೆಟ್ರೋಲ್ ಬಂಕ್’ನಲ್ಲಿ ಘಟನೆ ನಡೆದಿದೆ. ಗುರುವಾರ ಬೆಳಗಿನ ಜಾವ ಗ್ರೇ ಕಲರ್ ಇನ್ನೋವಾ ಕಾರಿನಲ್ಲಿ ಬಂದ ನಾಲ್ವರು, ಫುಲ್ ಟ್ಯಾಂಕ್ ಪೆಟ್ರೋಲ್ ಹಾಕುವಂತೆ ಸೂಚಿಸಿದ್ದಾರೆ. ಪೆಟ್ರೋಲ್ ಭರ್ತಿಯಾಗುತ್ತಿದ್ದಂತೆ, ಏಕಾಏಕಿ ಕಾರು ಚಲಾಯಿಸಿಕೊಂಡು ತೆರಳಿದ್ದಾರೆ. ತೀರ್ಥಹಳ್ಳಿಯ ಕುವೆಂಪು ಸರ್ಕಲ್’ವರೆಗೂ ತೆರಳಿದ ಕಾರು, ನಂತರ ವಾಪಸ್ ತಿರುಗಿ ವೇಗವಾಗಿ ಶಿವಮೊಗ್ಗದ ಕಡೆಗೆ ತೆರಳಿದೆ. ಕಾರಿನ ಹಿಂಭಾಗದಲ್ಲಿ … Read more

ಪುನಿತ್ ರಾಜ್’ಕುಮಾರ್ ಸಿನಿಮಾದಲ್ಲಿ ಮಾಡಿದ್ದನ್ನು, ಭದ್ರಾವತಿಯ ಯುವಕ ರಿಯಲ್ ಲೈಫ್’ನಲ್ಲಿ ಮಾಡಿ ತೋರಿಸಿದ

ಶಿವಮೊಗ್ಗ ಲೈವ್.ಕಾಂ | 20 ಫೆಬ್ರವರಿ 2019 ಪವರ್ ಸ್ಟಾರ್ ಸಿನಿಮಾದಲ್ಲಿ ಮಾಡಿದ್ದನ್ನ, ಭದ್ರಾವತಿ ಯುವಕ, ರಿಯಲ್ ಲೈಫ್’ನಲ್ಲಿ ಮಾಡಿದ್ದಾನೆ. ಈತನ ಕೆಲಸಕ್ಕೆ ಭಾರೀ ಮೆಚ್ಚುಗೆ ಸಿಕ್ಕಿದೆ. ಈ ಹುಡುಗನ ವಿಡಿಯೋ ವೈರಲ್ ಆಗಿದೆ. ಈ ಸುದ್ದಿ ಓದುವ ಮೊದಲು ಪುನಿತ್ ರಾಜ್’ಕುಮಾರ್ ಅವರ ಈ ಹಾಡನ್ನು ಒಮ್ಮೆ ನೋಡಿಬಿಡಿ. ಯಾರೇ ಕೂಗಾಡಲಿ ಸಿನಿಮಾದ ಈ ಹಾಡಿನಲ್ಲಿ, ಪುನಿತ್ ರಾಜ್’ಕುಮಾರ್ ಅವರು ಭಿಕ್ಷುಕನೊಬ್ಬನಿಗೆ ಹೊಸ ರೂಪ ನೀಡ, ನೂತನ ಬದುಕು ಕಲ್ಪಿಸುತ್ತಾರೆ. ಇದು ರೀಲ್ ಸ್ಟೋರಿ. ಆದರೆ … Read more

ಮಂಗನಕಾಯಿಲೆ ಆತಂಕದಲ್ಲಿರುವ ಸಾಗರದ ಗ್ರಾಮಕ್ಕೆ ಮಿನಿಸ್ಟರ್ ಭೇಟಿ, ಆರೋಗ್ಯ ಇಲಾಖೆ ನಿರ್ಲಕ್ಷ್ಯದ ಬಗ್ಗೆ ಏನಂದ್ರು?

070119 Minister Visit Aralagodu village 1

ಶಿವಮೊಗ್ಗ ಲೈವ್.ಕಾಂ | 07 ಜನವರಿ 2019 ಮಂಗನಕಾಯಿಲೆಯಿಂದ ಆತಂಕಕ್ಕೀಡಾಗಿರುವ ಸಾಗರದ ಅರಳಗೋಡು ಗ್ರಾಮಕ್ಕೆ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಇದೇ ವೇಳೆ,  ಆರೋಗ್ಯ ಇಲಾಖೆಯ ನಿರ್ಲಕ್ಷದ ಕುರಿತು ತನಿಖೆ ನಡೆಸುವುದಾಗಿಯೂ ಭರವಸೆ ನೀಡಿದ್ದಾರೆ. ಎಲ್ಲೆಲ್ಲಿಗೆ ಭೇಟಿ ಕೊಟ್ಟರು ಮಿನಿಸ್ಟರ್? ಸಚಿವ ಶಿವಾನಂದ ಪಾಟೀಲ್ ಅವರು, ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಮಂಗನಕಾಯಿಲೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾದವರ ಆರೋಗ್ಯ ವಿಚಾರಿಸಿದರು. ಬಳಿಕ, ಭಾರಂಗಿ ಹೋಬಳಿಯ ಅರಳಗೋಡು ಗ್ರಾಮಕ್ಕೆ ಭೇಟಿ … Read more

ಹೀರೋಗಳ ಮನೆ ಮೇಲೆ ಐಟಿ ರೇಡ್, ಶಿವಮೊಗ್ಗದಲ್ಲಿ ಯಡಿಯೂರಪ್ಪ ಪ್ರತಿಕ್ರಿಯೆ, ಏನಂದ್ರು ಮಾಜಿ ಸಿಎಂ?

Yedyurappa Pressmeet1 1

ಶಿವಮೊಗ್ಗ ಲೈವ್.ಕಾಂ | 4 ಜನವರಿ 2019    ಪ್ರಾಮಾಣಿಕವಾಗಿ ಲೆಕ್ಕ ಕೊಟ್ಟರೆ ಯಾರಿಗೂ ತೊಂದರೆಯಾಗೋದಿಲ್ಲ. ಇಲ್ಲವಾದರೆ ಐಟಿ ದಾಳಿಯಾಗುತ್ತದೆ. ಸ್ಯಾಂಡಲ್’ವುಡ್ ನಟ, ನಿರ್ಮಾಪಕರ ಮನೆ ಮೇಲೆ ಆದಾಯ ತೆರಿಗೆ ದಾಳಿ ಕರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ಇದು. ಅಷ್ಟಕ್ಕೂ ಯಡಿಯೂರಪ್ಪ ಏನೇನು ಹೇಳಿದರು? ವಿಡಿಯೋ ನೋಡಿ ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200 ಸುದ್ದಿಗಾಗಿ ಕರೆ ಮಾಡಿ | 9964634494 ಈ ಮೇಲ್ | shivamoggalive@gmail.com