ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಶಿವಮೊಗ್ಗದಲ್ಲಿ ಆಕ್ರೋಶ ಬಂಧನಕ್ಕೆ ಒತ್ತಾಯ, ಕಾರಣವೇನು?

NSUI-Protest-against-vishweshwara-hegde-kageri-in-shimoga

ಶಿವಮೊಗ್ಗ: ‘ಜನಗಣಮನ ಬ್ರಿಟಿಷರ ಸ್ವಾಗತಕ್ಕೆ ರಚಿಸಿದ್ದ ಗೀತೆ’ ಎಂದು ಹೇಳಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಹಾಗೂ ಸಂಸದ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಎನ್ಎಸ್‌ಯುಐ ಸಂಘಟನೆ ವತಿಯಿಂದ ಪ್ರತಿಭಟನೆ (Protest) ನಡೆಸಲಾಯಿತು. ವಿಶ್ವೇಶ್ವರ ಹೆಗಡೆ ಕಾಗೇರಿ ರಾಜ್ಯದ ಶಿಕ್ಷಣ ಸಚಿವರಾಗಿದ್ದವರು. ವಿಧಾನಸಭೆಯ ಸ್ಪೀಕರ್ ಹುದ್ದೆಯಂತಹ ಸಾಂವಿಧಾನಿಕ ಹುದ್ದೆ ನಿಭಾಯಿಸಿದ್ದವರು. ಆದರೆ, ಸಂಸದರಾಗಿ ಜನರಲ್ಲಿ ರಾಷ್ಟ್ರಗೀತೆ, ಸಂವಿಧಾನಗಳ ಬಗ್ಗೆ ಅಗೌರವ ಮೂಡಿಸುವಂತಹ ಮಾತುಗಳನ್ನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. … Read more

ಸದ್ಯಕ್ಕಿಲ್ಲ ಮಳೆ, ಶಿವಮೊಗ್ಗದಲ್ಲಿ ವಾತಾವರಣ ಹೇಗಿದೆ? – ಇಲ್ಲಿದೆ ಇವತ್ತಿನ ಹವಾಮಾನ ವರದಿ

WEATHER-REPORT-SHIMOGA-

ಹವಾಮಾನ ವರದಿ: ಕರ್ನಾಟಕದಲ್ಲಿ ಸದ್ಯ ಮಳೆ ಮಾಯವಾಗಿದ್ದು ಬಿಸಿಲಿನ ಅಬ್ಬರ ಜೋರಿದೆ. ಜೊತೆಗೆ ಥಂಡಿ ವಾತಾವರಣವು ಮುಂದುವರೆದಿದೆ. ಇವತ್ತು ರಾಜ್ಯಾದ್ಯಂತ ಯಾವುದೆ ಅಲರ್ಟ್‌ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. (Weather) ಶಿವಮೊಗ್ಗ ಜಿಲ್ಲೆಯಲ್ಲಿಯು ಬಿಸಿಲು ಜೋರಿರಲಿದೆ. ಕಳೆದ ಎರಡು ದಿನಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಒಂದೆರಡು ಡಿಗ್ರಿಯಷ್ಟು ತಾಪಮಾನ ಏರಿಕೆಯಾಗಿದೆ. ರಾತ್ರಿ ವೇಳೆ ಥಂಡಿ ಜೋರಿದೆ.   ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಇದನ್ನೂ ಓದಿ » ಭದ್ರಾವತಿಯಲ್ಲಿ ಪೊಲೀಸರ ಮೇಲೆಯೇ ಹಲ್ಲೆ

ಈ ದಿನ ಯಾವ್ಯಾವ ರಾಶಿಗೆ ಹೇಗಿದೆ? ಪಂಚಾಂಗದಲ್ಲಿ ಏನಿದೆ? – ಓದಲು ಇಲ್ಲಿ ಕ್ಲಿಕ್‌ ಮಾಡಿ

Dina-Bhavishya-and-Panchanga-Thumbnail.webp

ದಿನ ಭವಿಷ್ಯ, ಪಂಚಾಂಗ: 12 ರಾಶಿಗಳ ಇಂದಿನ ಭವಿಷ್ಯ (Horoscope), ಇವತ್ತಿನ ಪಂಚಾಂಗ ಮತ್ತು ಸುಭಾಷಿತ ಇಲ್ಲಿದೆ. ಇಂದಿನ ಪಂಚಾಂಗ ಇವತ್ತು ಶನಿವಾರ, 8 ನವೆಂಬರ್‌ 2025. ಶಿವಮೊಗ್ಗದಲ್ಲಿ ಬೆಳಗ್ಗೆ 6.25ಕ್ಕೆ ಸೂರ್ಯೋದಯ. ಸಂಜೆ 5.58ಕ್ಕೆ ಸೂರ್ಯಾಸ್ತ. ಇಂದು ಮೃಗಶಿರ ನಕ್ಷತ್ರದ ದಿನ. ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.45 ರಿಂದ 5.35ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.10 ರಿಂದ 6.25ರವರೆಗೆ ಅಭಿಜಿತ್‌ ಬೆಳಗ್ಗೆ 11.48 ರಿಂದ 12.34ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.07 ರಿಂದ … Read more

ಭದ್ರಾವತಿಯಲ್ಲಿ ಪೊಲೀಸರ ಮೇಲೆಯೇ ಹಲ್ಲೆ

Suragitopu-Incident-Commotion.

ಭದ್ರಾವತಿ: ನಗರಸಭೆ ವ್ಯಾಪ್ತಿಯ ಸುರಗಿತೋಪಿನಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ (Commotion) ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ.  ಈ ಸಂಬಂಧ ಎರಡೂ ಗುಂಪುಗಳ ವಿರುದ್ಧ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏನಿದು ಪ್ರಕರಣ? ಆಗಿದ್ದೇನು? ಸುರಗಿತೋಪು 4ನೇ ತಿರುವಿನಲ್ಲಿ ಅನ್ನಪೂರ್ಣೇಶ್ವರಿ ಯುವಕರ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿ ವಿಸರ್ಜನಾ ಪೂರ್ವ ಮೆರವಣಿಗೆ ಬುಧವಾರ ನಡೆಯುತ್ತಿತ್ತು. ರಾತ್ರಿ 10.30ರ ಸಮಯದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. … Read more

ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ 700ಕ್ಕೂ ಹೆಚ್ಚು ರೋಟರಿ ಸದಸ್ಯರು

Rotary-Press-meet-in-shimoga

ಶಿವಮೊಗ್ಗ: ರೋಟರಿ (Rotary) ಕ್ಲಬ್‌ ಶಿವಮೊಗ್ಗ ಪೂರ್ವ ಸಂಸ್ಥೆ ನೇತೃತ್ವದಲ್ಲಿ ನಗರದ ಅರೆಕಾನಟ್ ಮರ್ಚೆಂಟ್ಸ್‌ ಸ್ಪೋರ್ಟ್‌ ಕ್ಲಬ್‌ನಲ್ಲಿ ನ.8, 9ರಂದು ರೋಟರಿ ದತ್ತಿನಿಧಿ ಮತ್ತು ಪೋಲಿಯೊ ಪ್ಲಸ್ ಕುರಿತ ‘ಸಮೃದ್ಧಿ 2025 ಕಾರ್ಯಾಗಾರ’ ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶದ ಅಧ್ಯಕ್ಷ ಚಂದ್ರಹಾಸ್ ಪಿ.ರಾಯ್ಕರ್ ತಿಳಿಸಿದರು. ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಜಿಲ್ಲೆ 3182ರ ವ್ಯಾಪ್ತಿಯ ಶಿವಮೊಗ್ಗ ಉಡುಪಿ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳನ್ನು ಸೇರಿಸಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ನಾಲ್ಕು ಜಿಲ್ಲೆಗಳಿಂದ 700ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. … Read more

ಹೊಸನಗರದಲ್ಲಿ ಯುವಕನನ್ನು ವಶಕ್ಕೆ ಪಡೆದ ಪೊಲೀಸರು, ವೈದ್ಯಕೀಯ ಪರೀಕ್ಷೆ ಬಳಿಕ ಅರೆಸ್ಟ್

Hosanagara-Police-Station-Board

ಹೊಸನಗರ: ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು (Youth Arrest) ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೈದ್ಯಕೀಯ ಪರೀಕ್ಷೆ ಬಳಿಕ ಆತ ಗಾಂಜಾ ಸೇವನೆ ಮಾಡಿರುವುದು ದೃಢವಾದ ಹಿನ್ನೆಲೆ ಆತನನ್ನು ಬಂದಿಸಿದ್ದಾರೆ. ಹೊಸನಗರ ಪೊಲೀಸರು ಗಸ್ತಿನಲ್ಲಿದ್ದಾಗ ತಾಲೂಕಿನ ಕಚ್ಚಿಗೆಬೈಲು ಗ್ರಾಮದಲ್ಲಿ ಸುಬ್ರಮಣ್ಯ(26) ಎಂಬಾತ ಮಾದಕ ವಸ್ತು ಸೇವನೆ ಮಾಡಿದಂತೆ ಕಂಡುಬಂದಿದ್ದು, ವಿಚಾರಣೆ ಮಾಡಿದಾಗ ತಾನು ಗಾಂಜಾ ಸೇವಿಸಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಬಳಿಕ ವೈದ್ಯಕೀಯ ತಪಾಸಣೆಯಲ್ಲಿ ಆತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಆತನ ವಿರುದ್ಧ ಎನ್‌ಡಿಪಿಎಸ್ ಆಕ್ಟ್27(ಬಿ) ಅಡಿಯಲ್ಲಿ … Read more

ನೆಹರು ಕ್ರೀಡಾಂಗಣದಲ್ಲಿ ಕಬಡ್ಡಿ ಆಯ್ಕೆ ಪ್ರಕ್ರಿಯೆ, ಯಾರೆಲ್ಲ ಪಾಲ್ಗೊಳ್ಳಬಹುದು?

Nehru-Stadium-Shimoga.webp

ಶಿವಮೊಗ್ಗ: ಶಿವಮೊಗ್ಗ ಕಬಡ್ಡಿ (Kabaddi) ಅಸೋಸಿಯೇಷನ್ ವತಿಯಿಂದ ನಗರದ ನೆಹರು ಕ್ರೀಡಾಂಗಣದಲ್ಲಿ ನ.8ರಂದು ಮಧ್ಯಾಹ್ನ 3ಗಂಟೆಗೆ ಜಿಲ್ಲಾ ಮಟ್ಟದ ಸಬ್ ಜೂನಿಯರ್ ಬಾಲಕ ಮತ್ತು ಬಾಲಕಿಯರ ಕಬಡ್ಡಿ ತಂಡದ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. 35ನೇ ಸಬ್ ಜೂನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್‌ಗಾಗಿ ಈ ಪ್ರಕ್ರಿಯೆ ನಡೆಸಲಾಗುತ್ತಿದೆ. ಆಟಗಾರರು ಶಿವಮೊಗ್ಗ ಜಿಲ್ಲೆಯವರಾಗಿದ್ದು 2025ನೇ ನವೆಂಬರ್ 30ಕ್ಕೆ ಅನ್ವಯವಾಗುವಂತೆ 16 ವರ್ಷದೊಳಗಿರಬೇಕು. ಬಾಲಕರು 60 ಕೆ.ಜಿ. ಮತ್ತು ಬಾಲಕಿಯರು 55 ಕೆ.ಜಿ. ಒಳಗಿರಬೇಕು. ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ … Read more

ಶಿವಮೊಗ್ಗದ ಸಾರ್ವಜನಿಕರಿಗೆ ಪ್ರಬಂಧ ಸ್ಪ‌ರ್ಧೆ

SHIMOGA-NEWS-UPDATE

ಶಿವಮೊಗ್ಗ: ಭಾರತೀಯ ಅಪಸ್ಮಾರ (ಮೂರ್ಛರೋಗ) ಸಂಘದಿಂದ ಮೂರ್ಛರೋಗ ದಿನಾಚರಣೆ ಅಂಗವಾಗಿ ಸಾರ್ವಜನಿಕರು ಹಾಗೂ ಮೂರ್ಛರೋಗಿಗಳಿಗೆ ಮೂರ್ಛ ರೋಗ- ಜೀವನ ಕ್ರಮ ಕುರಿತು ಪ್ರಬಂಧ ಸ್ಪರ್ಧೆ (Essay) ಆಯೋಜಿಸಲಾಗಿದೆ. ಪ್ರಬಂಧ ನಾಲ್ಕು ಪುಟ ಮೀರದಂತೆ ಬರೆದು ನ.15ರೊಳಗೆ ಬಿಜೆಪಿ ಕಚೇರಿ ಪಕ್ಕದ ನ್ಯೂರೋ ಭಾರತ್ ಆಸ್ಪತ್ರೆ ಕಚೇರಿ ಅಥವಾ ರಾಜೇಂದ್ರ ನಗರದ ಶ್ರೀಧರ್‌ ನರ್ಸಿಂಗ್ ಹೋಂಗೆ ತಲುಪಿಸಬೇಕು. ಸ್ಪರ್ಧೆ ವಿಜೇತರಿಗೆ ನ.23 ರಂದು ಬೆಳಗ್ಗೆ 10 ಗಂಟೆಗೆ ವಿನಾಯಕ ನಗರ ರೋಟರಿ ರಕ್ತನಿಧಿ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ … Read more

ಸಾಗರ, ಹೊಸನಗರದ 10,377 ಎಕರೆ ಮಂಜೂರಾತಿ ರದ್ದುಪಡಿಸಿ ಅರಣ್ಯಕ್ಕೆ ಸೇರ್ಪಡೆಗೆ ಒತ್ತಾಯ

himoga-DC-office-and-Police-jeep-in-front-of-office

ಶಿವಮೊಗ್ಗ: ಸಾಗರ ಮತ್ತು ಹೊಸನಗರ ತಾಲೂಕು ವ್ಯಾಪ್ತಿಯಲ್ಲಿ ಕೆಪಿಸಿಗೆ ಮಂಜೂರಾಗಿರುವ ಅರಣ್ಯ ಪ್ರದೇಶಗಳ ಮಂಜೂರಾತಿ ರದ್ದುಪಡಿಸಿ ಅರಣ್ಯಕ್ಕೆ (Forest) ಸೇರ್ಪಡೆ ಮಾಡುವಂತೆ ಜನಸಂಗ್ರಾಮ ಪರಿಷತ್ ಸಂಚಾಲಕ ಗಿರೀಶ್ ಆಚಾ‌ರ್ ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಈ ಬಗ್ಗೆ ಮನವಿ ಸಲ್ಲಿಸಿ, 1984ರಲ್ಲಿ ಸಾಗರ ಉಪವಿಭಾಗಾಧಿಕಾರಿಗಳ ಆದೇಶದಂತೆ ಎರಡೂ ತಾಲೂಕುಗಳ ವ್ಯಾಪ್ತಿಯಲ್ಲಿ 10,377 ಎಕರೆ ಅಧಿಸೂಚಿತ ಅರಣ್ಯ ಭೂಮಿಯನ್ನು ಕರ್ನಾಟಕ ವಿದ್ಯುತ್‌ ನಿಗಮಕ್ಕೆ ಮಂಜೂರು ಮಾಡಲಾಗಿದೆ. ಅಧಿಸೂಚಿತ ಅರಣ್ಯ ಪ್ರದೇಶವನ್ನು ವರ್ಗಾವಣೆ ಮಾಡುವ ಮುನ್ನ ಅರಣ್ಯ ಸಂರಕ್ಷಣಾ ಕಾಯಿದೆ ಅನ್ವಯ … Read more

ಗಾರೆ ಕೆಲಸ ಮಾಡುವಾಗ ಕಾರ್ಮಿಕನ ಕಾಲಿನ ಮೂಳೆ ಕಟ್‌

Vinobanagara-Police-Station.

ಶಿವಮೊಗ್ಗ: ಕಟ್ಟಡದ ಗಿಲಾವ್‌ ಮಾಡುವಾಗ ಮರದ ಬೀಮ್‌ ಮುರಿದು ಕೆಳಗೆ ಬಿದ್ದು ಗಾರೆ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರ (Laborer) ಕಾಲಿನ ಮೂಳೆ ಮುರಿದಿದೆ. ಸಂತೆ ಕಡೂರಿನ ಭಂಡಾರಿ ಕ್ಯಾಂಪ್‌ನ ನಿರ್ಮಾಣ ಹಂತದ ಮನೆಯಲ್ಲಿ ಘಟನೆ ಸಂಭವಿಸಿದೆ. ಶಿವಕುಮಾರ್‌ ಎಂಬ ಕಾರ್ಮಿಕ ಮನೆಯ ಗಾರೆ ಕೆಲಸದಲ್ಲಿ ತೊಡಗಿದ್ದಾಗ ಘಟನೆ ಸಂಭವಿಸಿದೆ. ಬೆಡ್‌ ರೂಂನಲ್ಲಿ ಗಿಲಾವ್‌ ಮಾಡುವಾಗ ಮರದ ಬೀಮ್‌ ಮುರಿದಿದೆ. ಕೆಳಗೆ ಬಿದ್ದ ಶಿವಕುಮಾರ್‌ ಬಲಗಾಲಿನ ಪಾದದ ಬಳಿ ಮೂಳೆ ಮುರಿದಿದೆ. ಸುರಕ್ಷಿತ ಕ್ರಮಗಳನ್ನ ಕೈಗೊಳ್ಳದ್ದರಿಂದ ಘಟನೆ ಸಂಭವಿಸಿದೆ … Read more