ಕುಂಸಿ ಸುತ್ತಮುತ್ತ ನ.8ರಂದು ಇಡೀ ದಿನ ಕರೆಂಟ್‌ ಇರಲ್ಲ, ಯಾವ್ಯಾವ ಊರುಗಳು? ಇಲ್ಲಿದೆ ಲಿಸ್ಟ್‌

power cut mescom ELECTRICITY

ಶಿವಮೊಗ್ಗ: ಕುಂಸಿ ಗ್ರಾಮದ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನ. 8ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಮೂರನೇ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಾಗೂ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ (Power Cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಕುಂಸಿ, ಬಾಳೆಕೊಪ್ಪ, ಚೋರಡಿ, ತುಪ್ಪೂರು, ಕೋಣಿಹೂಸೂರು, ಹೊರಬೈಲು, ಶೆಟ್ಟಿಕೆರೆ, ರೇಚಿಕೊಪ್ಪ ಸುತ್ತಮುತ್ತಲ ಗ್ರಾಮಗಳು, ಹಾರ್ನಳ್ಳಿ, ರಾಮನಗರ, ಮುದುವಾಲ, ಯಡವಾಲ, ದೇವಬಾಳು, ತ್ಯಾಜವಳ್ಳಿ, ಕೊನಗವಳ್ಳಿ, ಹಿಟ್ಟೂರು, ನಾರಾಯಣಪುರ, ಮಲ್ಲಾಪುರ. … Read more

ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

Thirthahalli-News-Update

ತೀರ್ಥಹಳ್ಳಿ: ತಾಲೂಕಿನ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ (Grama Panchayat) ಅಧ್ಯಕ್ಷ ಅಗಸಾಡಿ ಶಾಮಪ್ಪ ವಿರುದ್ದ ಸದಸ್ಯರು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ. ಒಟ್ಟು 10 ಸದಸ್ಯ ಬಲದ ಗ್ರಾ.ಪಂ. ಆಡಳಿತದಲ್ಲಿ 9 ಸದಸ್ಯರು ಅವಿಶ್ವಾಸ ಪತ್ರಕ್ಕೆ ಸಹಿ ಹಾಕಿದ್ದರು. ಬುಧವಾರ ಉಪವಿಭಾಗಾಧಿಕಾರಿ ಸತ್ಯನಾರಾಯಣ್‌ ಅವರು ಅವಿಶ್ವಾಸ ನಿರ್ಣಯ ಕುರಿತು ನಡೆಸಿದ ಸಭೆಗೆ 6 ಸದಸ್ಯರು ಹಾಜರಾಗಿ 4 ಸದಸ್ಯರು ಗೈರಾಗಿದ್ದರು. ನಿಯಮದಂತೆ ಅವಿಶ್ವಾಸ ನಿರ್ಣಯ ಸ್ವೀಕಾರಕ್ಕೆ 7 ಸದಸ್ಯರ ಬೆಂಬಲ ಅಗತ್ಯವಾಗಿತ್ತು. 6 ಸದಸ್ಯರು ಮಾತ್ರ ಸಭೆಗೆ … Read more

ಶಿವಮೊಗ್ಗದಲ್ಲಿ ಸ್ವೀಟ್‌ ಬಾಕ್ಸ್‌ ತೆಗೆದ ಜೈಲು ಸಿಬ್ಬಂದಿಗೆ ಶಾಕ್‌, ಯುವಕ ಜೈಲುಪಾಲು, ಏನಿದು ಕೇಸ್‌?

Shimoga-Central-Jail-Prison

ಶಿವಮೊಗ್ಗ: ಖೈದಿಯೊಬ್ಬನಿಗೆ ತಲುಪಿಸಲು ಸ್ವೀಟ್‌ ಬಾಕ್ಸ್‌ನಲ್ಲಿ (Sweet Box) ಗಾಂಜಾ ತಂದಿದ್ದ ಯುವಕನೊಬ್ಬ ಜೈಲುಪಾಲಾಗಿದ್ದಾನೆ. ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ತಪಾಸಣೆ ವೇಳೆ ಯುವಕ ಸಿಕ್ಕಿಬಿದ್ದಿದ್ದು ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಸೋಮಿನಕೊಪ್ಪದ ಸೈಯದ್‌ ವಾಸೀಂ (25) ಬಂಧಿತ. ಬೇಕರಿಯಿಂದ ತಂದಿದ್ದ ಸ್ವೀಟ್‌ ಬಾಕ್ಸ್‌ನಲ್ಲಿ ಗಾಂಜಾ ಅಡಗಿಸಿಟ್ಟುಕೊಂಡು ತಂದಿದ್ದ. ಏನಿದು ಪ್ರಕರಣ? ಕೇಂದ್ರ ಕಾರಾಗೃಹದ ಖೈದಿ ಮೆಹಬೂಬ್‌ ಖಾನ್‌ ಎಂಬಾತನನ್ನು ಮಾತನಾಡಿಸಲು ಸೈಯದ್‌ ವಾಸೀಂ ಎಂಬಾತ ಆಗಮಿಸಿದ್ದ. ಖೈದಿ ಮೆಹಬೂಬ್‌ ಖಾನ್‌ಗೆ ನೀಡಲು ಸ್ವೀಟ್‌ ಬಾಕ್ಸ್‌ ತಂದಿದ್ದ. … Read more

ಭದ್ರಾವತಿ ಡಿವೈಎಸ್‌ಪಿಯಾಗಿ ದಕ್ಷತಾ ಪದಕ ವಿಜೇತ ಪೊಲೀಸ್‌ ಅಧಿಕಾರಿ

Prakash-Ratod-New-DYSp-of-Bhadravathi.

ಶಿವಮೊಗ್ಗ: ಭದ್ರಾವತಿ ಉಪ ವಿಭಾಗಕ್ಕೆ ಪ್ರಕಾಶ ರಾಥೋಡ್‌ ಅವರನ್ನು DySPಯಾಗಿ ನೇಮಕ ಮಾಡಿ ಪೊಲೀಸ್‌ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಪ್ರಕಾಶ ರಥೋಡ್‌ ಅವರಿಗೆ ಪ್ರಕರಣಗಳ ತನಿಖೆಯಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕಾಗಿ ಇತ್ತೀಚೆಗೆ ಕೇಂದ್ರ ಗೃಹಮಂತ್ರಿಯವರ ದಕ್ಷತಾ ಪದಕ ಘೋಷಣೆಯಾಗಿದೆ. ಸದ್ಯ ಬೆಂಗಳೂರಿನ ಕೆ.ಜಿ.ಹಳ್ಳಿ ಉಪ ವಿಭಾಗದ ಎಸಿಪಿಯಾಗಿ ಪ್ರಕಾಶ ರಾಥೋಡ್‌ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತನಿಖಾ ವಿಭಾಗದಲ್ಲಿ ಪ್ರಕಾಶ ರಾಥೋಡ್‌ ಉತ್ತಮ ಸಾಧನೆ ಮಾಡಿದ್ದಾರೆ. ಈಚೆಗೆ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಭೈರತಿ ಬಸವರಾಜ್‌ ಅವರನ್ನು … Read more

ಆರ್‌.ಎಂ.ಮಂಜುನಾಥ ಗೌಡಗೆ ಮತ್ತೊಂದು ಮಹತ್ವದ ಜವಾಬ್ದಾರಿ

RM-Manjunatha-Gowda-Press-meet-in-DCC-Bank

ಶಿವಮೊಗ್ಗ: ಶಿವಮೊಗ್ಗ ಹಾಲು ಒಕ್ಕೂಟ (ಶಿಮುಲ್)ದಿಂದ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್)ದ ನಿರ್ದೇಶಕರನ್ನಾಗಿ (Director) ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆ‌ರ್.ಎಂ.ಮಂಜುನಾಥಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಶಿಮುಲ್‌ ಆಡಳಿತ ಮಂಡಳಿ ಸಭಾಂಗಣ ದಲ್ಲಿ ಮಂಗಳವಾರ ನಡೆದ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ » ಶಿವಮೊಗ್ಗ ನಗರದಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಎಲ್ಲ ಸುದ್ದಿ

ಶಿವಮೊಗ್ಗ ನಗರದಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಎಲ್ಲ ಸುದ್ದಿ

SHIMOGA-CITY-NEWS-ENGLISH

ಶಿವಮೊಗ್ಗ ಸಿಟಿ: ನಗರದಲ್ಲಿ (city news) ಬುಧವಾರ ಇಡೀ ದಿನ ಏನೇನೆಲ್ಲ ನಡೆಯಿತು. ಇದಲ್ಲಿ ಕಂಪ್ಲೀಟ್‌ ಸುದ್ದಿ. ಒಂದೇ ಕ್ಲಿಕ್‌ನಲ್ಲಿ ಶಿವಮೊಗ್ಗ ನಗರದ ಸಂಪೂರ್ಣ ಸುದ್ದಿ. ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಮೃತದೇಹ ಕೋಟೆ ರಸ್ತೆ: ಬಾಲಕೀಯರ ವಸತಿ ನಿಲಯದ ಟೆರೇಸ್‌ ಮೇಲೆ ವಿದ್ಯಾರ್ಥಿನಿ ವನಿಷಾ (21) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವನಿಷಾ, ಭದ್ರಾವತಿ ತಾಲೂಕು ಗಂಗೂರು ಗ್ರಾಮದವರು. ಡಿವಿಎಸ್‌ ಪದವಿ ಕಾಲೇಜಿನಲ್ಲಿ ತೃತೀಯ ವರ್ಷದ ಬಿಎಸ್ಸಿ ಓದುತ್ತಿದ್ದರು. ಮೆಗ್ಗಾನ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ … Read more

ಅಡಿಕೆ ಕುರಿತು ವಿಜ್ಞಾನಿಗಳು, ಸಂಶೋಧಕರ ಸಮಾಲೋಚನೆ ಸಭೆ, ಯಾವಾಗ? ಎಲ್ಲಿ?

Areca-in-gunny-bag-APMC-Shimoga

ಸಾಗರ: ಅಡಿಕೆ (Adike) ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂಬುದನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಮುಂದಿನ 15 ದಿನದಲ್ಲಿ ನಗರದಲ್ಲಿ 15ಕ್ಕೂ ಹೆಚ್ಚು ವಿಜ್ಞಾನಿಗಳು ಹಾಗೂ ಸಂಶೋಧಕರ ಸಮಾಲೋಚನಾ ಸಭೆ ಆಯೋಜನೆಗೆ ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ತೀರ್ಮಾನಿಸಿದೆ. ಸಂಘದ ಕಚೇರಿಯಲ್ಲಿ ಇತ್ತೀಚೆಗೆ ಪೂರ್ವಭಾವಿ ಸಭೆ ನಡೆಸಿದ ಪದಾಧಿಕಾರಿಗಳು, ಶ್ರೀಲಂಕಾದಲ್ಲಿ ಈಚೆಗೆ ನಡೆದ 15 ದೇಶಗಳ ಸಭೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅಡಕೆ ಹಾನಿಕಾರಕ ಎಂದು ಪ್ರತಿಪಾದಿಸಿದೆ ಎಂಬ ವರದಿ ಕೆಲ ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಇದರಿಂದ … Read more

ಬಹುಪಾಲು ಕರ್ನಾಟಕಕ್ಕೆ ಇವತ್ತು ಮಳೆ ಅಲರ್ಟ್‌, ಶಿವಮೊಗ್ಗದ ವಾತಾವರಣ ಹೇಗಿರಲಿದೆ?

WEATHER-REPORT-SHIMOGA-

ಹವಾಮಾನ ವರದಿ: ಕರ್ನಾಟದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಇವತ್ತು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಈ ಹಿನ್ನೆಲೆ ಶಿವಮೊಗ್ಗ ಜಿಲ್ಲೆಗೂ ಅಲರ್ಟ್‌ ಪ್ರಕಟಿಸಲಾಗಿದೆ. (Weather) ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ ಜೋರು ಬಿಸಿಲಿತ್ತು. ಇವತ್ತೂ ಅದೇ ಮಾದರಿ ವಾತಾವರಣ ಮುಂದುವರೆಯು ಸಾಧ್ಯತೆ ಇದೆ. ಇನ್ನೊಂದೆಡೆ ಹವಾಮಾನ ಇಲಾಖೆಯು ಮಳೆಯಾಗುವ ಮುನ್ಸೂಚನೆ ನೀಡಿದೆ. ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಇದನ್ನೂ ಓದಿ » ‘ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಾಸಾದ ವಿದ್ಯಾರ್ಥಿಗಳು ಫೇಲ್‌ʼ, NSUI ಗರಂ … Read more

120 ಇನ್ಸ್‌ಪೆಕ್ಟರ್‌ಗಳು ವರ್ಗ, ಶಿವಮೊಗ್ಗಕ್ಕೆ ರಾಘವೇಂದ್ರ ಕಂಡಿಕೆ ವಾಪಸ್‌, ಯಾರೆಲ್ಲ ಎಲ್ಲೆಲ್ಲಿಗೆ ವರ್ಗವಾಗಿದ್ದಾರೆ?

Police-Inspector-General-Image.webp

ಶಿವಮೊಗ್ಗ: ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 120 ಇನ್ಸ್‌ಪೆಕ್ಟರ್‌ಗಳ (Inspectors) ವರ್ಗಾವಣೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಠಾಣೆಗಳ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾಯಿಸಿ ಪೊಲೀಸ್‌ ಮಹಾನಿರ್ದೇಶಕರು ಆದೇಶಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಠಾಣೆಗಳಲ್ಲಿ ಯಾರೆಲ್ಲ ವರ್ಗವಾಗಿದ್ದಾರೆ? ನಾಗಮ್ಮ.ಕೆ – ಭದ್ರಾವತಿ ಪೇಪರ್‌ ಟೌನ್‌ ಠಾಣೆಯಿಂದ ಭದ್ರಾವತಿ ಟೌನ್‌ ವೃತ್ತಕ್ಕೆ ವರ್ಗಾವಣೆ. ಶ್ರೀಶೈಲ ಕುಮಾರ್.ಜೆ – ಭದ್ರಾವತಿ ಟೌನ್‌ ವೃತ್ತದಿಂದ ಶಿವಮೊಗ್ಗದ ಡಿ.ಎಸ್‌.ಬಿಗೆ ವರ್ಗ ಜಗದೀಶ್‌ ಹಂಚಿನಾಳ್‌ – ಡಿಎಸ್‌ಬಿ ಶಿವಮೊಗ್ಗದಿಂದ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ವರ್ಗ ರಾಘವೇಂದ್ರ ಕಂಡಿಕೆ – … Read more

ಶಿವಮೊಗ್ಗದಲ್ಲಿ ಜೀವನ ಪ್ರಮಾಣ ಪತ್ರ ಉಚಿತ ವಿತರಣೆ, ಯಾವಾಗ? ಏನೆಲ್ಲ ದಾಖಲೆ ಬೇಕು? ಇಲ್ಲಿದೆ ಡಿಟೇಲ್ಸ್‌

SHIMOGA-NEWS-UPDATE

ಶಿವಮೊಗ್ಗ: ರವೀಂದ್ರನಗರದ ಪ್ರಸನ್ನ ಗಣಪತಿ ದೇವಸ್ಥಾನ ಆವರಣದಲ್ಲಿ ಎಲ್ಲ ಪಿಂಚಣಿದಾರರಿಗೆ ನ.7ರಂದು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಉಚಿತವಾಗಿ ಜೀವನ ಪ್ರಮಾಣ ಪತ್ರ (Life Certificate) ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಅಂಚೆ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಒಕ್ಕೂಟ ಸಂಚಾಲಕ ವಿ.ಶಶಿಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲಾ ಅಂಚೆ ಇಲಾಖೆ ಅಧೀಕ್ಷಕ ಎಂ. ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಒಕ್ಕೂಟದ ಅಧ್ಯಕ್ಷ ಹೆಚ್.ಕೆ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಎಲ್ಲ ಸರ್ಕಾರಿ ಪಿಂಚಣಿದಾರರು ನ.1ರಿಂದ 30ರ … Read more