ಕ್ರಿಶ್ಚಿಯನ್ ಸಮುದಾಯದವರಿಗೆ ಸಾಲ, ಸಹಾಯಧನ, ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

Shimoga-News-update

ಶಿವಮೊಗ್ಗ: ಜಿಲ್ಲಾ ಕರ್ನಾಟಕ ಕ್ರಿಶ್ಚಿಯನ್ (Christian) ಸಮುದಾಯ ಆಭಿವೃದ್ದಿ ನಿಗಮ ವತಿಯಿಂದ 2025-26 ನೇ ಸಾಲಿನ ಕ್ರಿಶ್ಚಿಯನ್ ಸಮುದಾಯದವರಿಗೆ ವಿವಿಧ ಯೋಜನೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿ ಸಿಇಟಿ/ನೀಟ್ ಮೂಲಕ ಆಯ್ಕೆಯಾಗುವ ಕ್ರಿಶ್ಚಿಯನ್ ಸಮುದಾಯದ ವಿದ್ಯಾರ್ಥಿಗಳು, ವೃತ್ತಿಪರ ಶಿಕ್ಷಣಗಳಾದ ಎಂಬಿಬಿಎಸ್, ಎಂಡಿ, ಎಂಎಸ್, ಬಿಇ, ಬಿಟೆಕ್, ಎಂಇ, ಎಂ-ಟೆಕ್, ಬಿಡಿಎಸ್, ಎಂಡಿಎಸ್, ಬಿ-ಆಯುಷ್, ಎಂ-ಆಯುಷ್, ಎಂಬಿಎ, ಎಂಸಿಎ, ಎಲ್‌ಎಲ್‌ಬಿ, ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್, ಮಾಸ್ಟರ್ ಆಫ್ ಆರ್ಕಿಟೆಕ್ಚರ್ ಕೋರ್ಸ್ ಮಾಡಲು ಬಯಸಿದರೆ … Read more

ಅಡಿಕೆ ಧಾರಣೆ | 5 ನವೆಂಬರ್‌ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ತೀರ್ಥಹಳ್ಳಿ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಶಿವಮೊಗ್ಗ ಮಾರುಕಟ್ಟೆ ಗೊರಬಲು 22800 37089 ನ್ಯೂ ವೆರೈಟಿ 44599 58199 ಬೆಟ್ಟೆ 63600 73029 ರಾಶಿ 46869 60209 ಸರಕು 81100 88999 ತೀರ್ಥಹಳ್ಳಿ ಮಾರುಕಟ್ಟೆ ಸಿಪ್ಪೆಗೋಟು 12000 12000 ಇದನ್ನೂ ಓದಿ » ಶಿವಮೊಗ್ಗದಲ್ಲಿ ನವದುರ್ಗ ಬಸ್‌ ಚಾಲಕನ ಮೇಲೆ ಮನಸೋಯಿಚ್ಛೆ ಹಲ್ಲೆ

‘ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಾಸಾದ ವಿದ್ಯಾರ್ಥಿಗಳು ಫೇಲ್‌ʼ, NSUI ಗರಂ

NSUI-memorandum-about-Re-valuation

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯವು ಡಿಜಿಟಲ್ ರೂಪದಲ್ಲಿ ನಡೆಸಿದ ಮೌಲ್ಯಮಾಪನದಲ್ಲಿ ಸಾಕಷ್ಟು ಲೋಪಗಳಿವೆ. ಆದ್ದರಿಂದ ಮರುಮೌಲ್ಯಮಾಪನ (Valuation) ಮಾಡಬೇಕು ಎಂದು ಆಗ್ರಹಿಸಿ ಎನ್‌ಎಸ್‌ಯುಐ ವತಿಯಿಂದ ಕುಲಪತಿ ಹಾಗೂ ಪರೀಕ್ಷಾಂಗ ಕುಲಸಚಿವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿ ಕಾಲೇಜಿನಲ್ಲಿ 50 ರಿಂದ 60 ವಿದ್ಯಾರ್ಥಿಗಳು 0,5,6,7 ಅಂಕಗಳನ್ನು ಪಡೆದು ಅನುತ್ತೀರ್ಣ ಗೊಂಡಿದ್ದಾರೆ ಹಾಗೂ ಉತ್ತೀರ್ಣ ಗೊಂಡ ಸಾಕಷ್ಟು ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ವಿಶ್ವ ವಿದ್ಯಾಲಯದ ಪರೀಕ್ಷಾಂಗ ವಿಭಾಗವು ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿ. ಪರೀಕ್ಷಾ ಶುಲ್ಕ, ಮರುಮೌಲ್ಯ ಮಾಪನ ಎಂದು … Read more

ಶಿವಮೊಗ್ಗದಲ್ಲಿ ನವದುರ್ಗ ಬಸ್‌ ಚಾಲಕನ ಮೇಲೆ ಮನಸೋಯಿಚ್ಛೆ ಹಲ್ಲೆ

Shimoga-Private-Bus-Stand-Board

ಶಿವಮೊಗ್ಗ: ಅಡ್ಡ ನಿಲ್ಲಿಸಿದ್ದ ಕಾರು ತೆಗೆಯುವಂತೆ ಹಾರನ್‌ ಮಾಡಿದ್ದಕ್ಕೆ ನವದುರ್ಗ ಬಸ್‌ ಚಾಲಕನ (BUS DRIVER) ಮೇಲೆ ಹಲ್ಲೆ ನಡೆಸಲಾಗಿದೆ. ಶಿವಮೊಗ್ಗದ ಬಸ್‌ ನಿಲ್ದಾಣದ ಸಮೀಪ ಬ್ರೈಟ್‌ ಹೊಟೇಲ್‌ ಎದುರು ಘಟನೆ ನಡೆದಿದೆ. ನವದುರ್ಗ ಬಸ್‌ ಚಾಲಕ ಬಿ.ಎಸ್.ರವಿ ಮೇಲೆ ಹಲ್ಲೆ ನಡೆಸಲಾಗಿದೆ. ಬಸ್ಸು ರಾತ್ರಿ ಶಿವಮೊಗ್ಗದಿಂದ ಮಂಗಳೂರಿಗೆ ತೆರಳುತ್ತಿತ್ತು. ನಿಲ್ದಾಣದಿಂದ ಹೊರ ಬಂದು ಬ್ರೈಟ್‌ ಹೊಟೇಲ್‌ ಮುಂಭಾಗ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಚಾಲಕ ರವಿ ಬಸ್‌ ನಿಲ್ಲಿಸಿದ್ದರು. ಆಗ ಬಂದ ಕಾರೊಂದು ಬಸ್ಸಿಗೆ ಅಡ್ಡಲಾಗಿ ನಿಲ್ಲಿಸಲಾಯಿತು ಎಂದು … Read more

ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಮುಂದೆ ಆಕ್ರೋಶ, ಅಧಿಕಾರಿಗಳ ವಿರುದ್ಧ ಘೋಷಣೆ

Protest-at-Holehonnuru

ಹೊಳೆಹೊನ್ನೂರು: ಅಧಿಕಾರಿಗಳು ಹಾಗೂ ಸಿಬ್ಬಂದಿ ಜನ ವಿರೋಧಿ ಕಾರ್ಯವೈಖರಿ ಖಂಡಿಸಿ ಸ್ಥಳೀಯ ನಿವಾಸಿಗಳು ಪಟ್ಟಣ ಪಂಚಾಯಿತಿ ಕಾರ್ಯಾಲಯದ ಎದುರು ಪ್ರತಿಭಟನೆ (Protest) ನಡೆಸಿದರು. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಆಸ್ತಿಗಳಿಗೆ ಸಂಬಂಧಪಟ್ಟಂತೆ ಪಂಚಾಯಿತಿಯಿಂದ ಇ– ಆಸ್ತಿ (ನಮೂನೆ– 3) ದಾಖಲೆಯನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಅದಕ್ಕೆ ಅಧಿಕಾರಿ ಹಾಗೂ ಸಿಬ್ಬಂದಿಯ ಬೇಜವಾಬ್ದಾರಿಯೇ ಕಾರಣ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ, ಸಲಹೆ, ಸೂಚನೆ ನೀಡಿದರೂ ವಿನಾ ಕಾರಣ ವಿಳಂಬ ಮಾಡುತ್ತಿದ್ದಾರೆ. ಜನ ಇದರಿಂದ ಬೇಸತ್ತು ಪ್ರತಿಭಟನೆಗೆ ಮುಂದಾಗಿದ್ದಾರೆ. … Read more

ಶಿವಮೊಗ್ಗ ಸಿಟಿಯಲ್ಲಿ ನವೆಂಬರ್‌ 9ರಂದು ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

power cut mescom ELECTRICITY

ಶಿವಮೊಗ್ಗ: ನಗರ ಉಪವಿಭಾಗ 2ರ ವ್ಯಾಪ್ತಿಯ ಮಂಡ್ಲಿ ಭಾಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ನ.9 ರಂದು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ (Power Cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇಲಿಯಾಜ್ ನಗರ 11 ರಿಂದ 14ನೇ ಕ್ರಾಸ್, ಇತಿಹಾದ್ ಲೇಔಟ್, ಹೆನ್ರಿ ತೋಟ, ಕಲ್ಲೂರ್ ಮಂಡ್ಲಿ ಇಂಡಸ್ಟ್ರೀಯಲ್ ಏರಿಯಾ, ಇಲಿಯಾಜ್ ನಗರ ಚಾನಲ್ ಏರಿಯಾ, ಶಾರದ ನಗರ ಹಾಗೂ ಸುತ್ತಮುತ್ತಲಿನ ಐಪಿ ಲಿಮಿಟ್‌ನ ಪ್ರದೇಶಗಳಲ್ಲಿ ವಿದ್ಯುತ್ … Read more

ನ.13 ರಿಂದ ಅಗ್ನಿವೀರ್ ನೇಮಕಾತಿ ರ‍್ಯಾಲಿ

SHIMOGA-NEWS-UPDATE

ಶಿವಮೊಗ್ಗ: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಅಗ್ನಿಪಥ್ ಯೋಜನೆಯಡಿ ನ.13 ರಿಂದ 19 ರವರೆಗೆ ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿವೀರ್ ನೇಮಕಾತಿ ರ‍್ಯಾಲಿ (Rally) ನಡೆಯಲಿದೆ. ಈ ರ‍್ಯಾಲಿಗೆ ಜೂ.30 ರಿಂದ ಜು.10 ರವೆರೆಗೆ ನಡೆದ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಭಾಗವಹಿಸಬಹುದು. ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು www.joinindianarmy.nic.in ವೆಬ್‌ಸೈಟ್‌ನಲ್ಲಿ ವಿಕ್ಷಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರಾದ ಡಾ.ಸಿ.ಎ. ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ … Read more

BREAKING NEWS – ಹಾಸ್ಟೆಲ್‌ ಟೆರೇಸ್‌ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಮೃತದೇಹ

Kote-Road-Government-Ladies-Hostel-new.

ಶಿವಮೊಗ್ಗ: ಹಾಸ್ಟೆಲ್‌ನ (Hostel) ಟೆರೇಸ್‌ ಮೇಲೆ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಶಿವಮೊಗ್ಗದ ಕೋಟೆ ರಸ್ತೆಯ ಸರ್ಕಾರಿ ಬಾಲಕೀಯರ ವಸತಿ ನಿಲಯದಲ್ಲಿ ಇಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಭದ್ರಾವತಿ ತಾಲೂಕು ಗಂಗೂರಿನ ವನಿಷಾ (21) ಮೃತಳು. ಹಾಸ್ಟೆಲ್‌ನ ಟೆರೇಸ್‌ನಲ್ಲಿರುವ ನೀರಿನ ಟ್ಯಾಂಕ್‌ ಪಕ್ಕದಲ್ಲಿ ವನಿಷಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಟೆರೇಸ್‌ ಮೇಲೆ ಹೋದ ವಿದ್ಯಾರ್ಥಿನಿಯರು ಇದನ್ನು ಗಮನಿಸಿ ಕೂಡಲೆ ವಾರ್ಡನ್‌ಗೆ ಮಾಹಿತಿ ನೀಡಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ವನಿಷಾ, ಡಿವಿಎಸ್‌ ಕಾಲೇಜಿನಲ್ಲಿ … Read more

ಶಿವಮೊಗ್ಗಕ್ಕೆ ಡಿಜಿ ಐಜಿಪಿ ಭೇಟಿ, ಮಹತ್ವದ ಮೀಟಿಂಗ್‌, ಪೊಲೀಸರಿಗೆ ಖಡಕ್‌ ಸೂಚನೆ

DG-IGP-MA-Saleem-Visits-shimoga

ಶಿವಮೊಗ್ಗ: ಗಾಂಜಾ ಬೆಳೆಯುವುದು, ಸೇವನೆ, ಮಾರಾಟ, ಸಂಗ್ರಹಣೆ ಮತ್ತು ಸಾಗಣೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ರೀತಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಪೊಲೀಸರಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ (DGP) ಎಂ.ಎ.ಸಲೀಂ ಸೂಚಿಸಿದರು. ಡಿಎಆರ್ ಆವರಣದಲ್ಲಿ ಪೊಲೀಸ್ ಗೌರವ ವಂದನೆ ಸ್ವೀಕರಿಸಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಗಾಂಜಾ ಸೇರಿದಂತೆ ಮಾದಕ ದ್ರವ್ಯ ಮಾರಾಟದ ಬಗ್ಗೆ ತಳಮಟ್ಟದಲ್ಲಿ ಮಾಹಿತಿ ಸಂಗ್ರಹಿಸಿ ಎಂದು ಹೇಳಿದರು. ಜಿಲ್ಲೆಯು ಭೌಗೋಳಿಕವಾಗಿ ಮಾತ್ರವಲ್ಲದೆ ಅಪರಾಧ ಕೃತ್ಯಗಳ ವರದಿಯಲ್ಲೂ ದೊಡ್ಡದಾಗಿದೆ. ಹೀಗಾಗಿ … Read more

ಹೊಳೆಹೊನ್ನೂರಿನಲ್ಲಿ SBI ಬ್ಯಾಂಕ್‌ ಶಾಖೆ ಆರಂಭ

Holehonnuru-SBI-Bank-branch-inaugurated

ಹೊಳೆಹೊನ್ನೂರು: ರಾಷ್ಟ್ರದ ಪ್ರತಿ ಮೂಲೆಗೂ ಬ್ಯಾಂಕಿಂಗ್ ಸೇವೆ ಒದಗಿಸಲು ಭಾರತೀಯ ಸ್ಟೇಟ್ ಬ್ಯಾಂಕ್ (SBI) ಎಲ್ಲೆಡೆ ಶಾಖೆ ತೆರೆದು ಜನರ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ನ ಬೆಂಗಳೂರು ವಲಯದ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಜೂಹಿ ಸ್ಮಿತಾ ಸಿನ್ಹಾ ಹೇಳಿದರು. ಹೊಳೆಹೊನ್ನೂರು ಪಟ್ಟಣದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್‌ನ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದರು. ಭಾರತವು ಆರ್ಥಿಕವಾಗಿ ಪ್ರಗತಿ ಹೊಂದುತ್ತಿರುವ ದೇಶವಾಗಿದೆ. ಗ್ರಾಮೀಣ ಜನರ ಜೀವನ ಸ್ಥಿತಿ ಇನ್ನಷ್ಟು ಉತ್ತಮ ಆಗಬೇಕಿದೆ. ಅದಕ್ಕಾಗಿ ಎಲ್ಲ ವರ್ಗದ … Read more