ರಸ್ತೆ ತಡೆಗೆ ಮುಂದಾಗ ವಿದ್ಯಾರ್ಥಿಗಳು, ಪೊಲೀಸರ ಮಧ್ಯೆ ಮಾತಿನ ಚಕಮಕಿ, ಡಿಸಿ ಕಚೇರಿ ಮುಂದೆ ಆಗಿದ್ದೇನು?

ABVP-protest-for-guest-lecturers-in-shimoga-city

ಶಿವಮೊಗ್ಗ: ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದೇ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಹಾಳಾಗುತ್ತಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ (Students) ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಕಾಲೇಜು ಶಿಕ್ಷಣ ಇಲಾಖೆ ಅಡಿಯ 432 ಪದವಿ ಕಾಲೇಜುಗಳಲ್ಲಿನ 6,000 ಕಾಯಂ ಉಪನ್ಯಾಸಕರಲ್ಲಿ 3,000ಕ್ಕಿಂತ ಹೆಚ್ಚು ಜನ ಈಗಾಗಲೇ ನಿವೃತ್ತಿ ಪಡೆದಿದ್ದಾರೆ. ಅತಿಥಿ ಉಪನ್ಯಾಸಕರ ನೆರವಿನಿಂದ ಪದವಿ ತರಗತಿಗಳು … Read more

ಜನಶತಾಬ್ದಿ ರೈಲಿನಲ್ಲಿ ಬ್ಯಾಗ್‌ ಪತ್ತೆ, ಒಳಗಿತ್ತು ಲಕ್ಷ ಮೌಲ್ಯದ ಲ್ಯಾಪ್‌ಟಾಪ್‌, ಕಾಸ್ಮೆಟಿಕ್ಸ್‌, ನಗದು

270925-Left-over-bag-on-Jan-Shatabdi-train-handed-over-to-the-girl.webp

ಶಿವಮೊಗ್ಗ: ಜನಶತಾಬ್ಬಿ (Jan Shatabdi) ರೈಲಿನಲ್ಲಿ ಮಂಗಳವಾರ ರಾತ್ರಿ ಪ್ರಯಾಣ ಮಾಡಿದ ಯುವತಿಯೊಬ್ಬರು ಬೋಗಿಯಲ್ಲೇ ಬಿಟ್ಟು ಹೋಗಿದ್ದ 1.24 ಲಕ್ಷ ರೂ. ಮೌಲ್ಯದ ಉತ್ಪನ್ನಗಳ ಬ್ಯಾಗನ್ನು ರೈಲ್ವೆ ಪೊಲೀಸರು ಸುರಕ್ಷಿತವಾಗಿ ವಾಪಸ್ ಮಾಡಿದ್ದಾರೆ. ಬೆಂಗಳೂರಿಂದ ಶಿವಮೊಗ್ಗಕ್ಕೆ ಬಂದ ಯುವತಿಯು ಬೋಗಿಯಲ್ಲೇ ಬ್ಯಾಗ್ ಮರೆತು ಹೋಗಿದ್ದರು. ಪ್ರಯಾಣಿಕರು ಇಳಿದು ಹೋದ ಬಳಿಕ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಬೋಗಿಗಳನ್ನು ಪರಿಶೀಲಿಸುವ ಸಮಯದಲ್ಲಿ ಬ್ಯಾಗ್‌ ಪತ್ತೆಯಾಗಿತ್ತು. ಬ್ಯಾಗ್‌ನಲ್ಲಿ ₹1.12 ಲಕ್ಷದ ಆಪಲ್ ಲ್ಯಾಪ್ಟಾಪ್, ₹10,000 ಮೌಲ್ಯದ ಕಾಸ್ಮೆಟಿಕ್ಸ್, ₹2,000 ನಗದು … Read more

ಕೋಣ ತಿವಿದು ಗಂಭೀರ ಗಾಯ, ಸ್ಥಳದಲ್ಲೆ ವ್ಯಕ್ತಿ ಸಾವು

SORABA-NEWS-UPDATE

ಸೊರಬ: ಕೋಣ (buffalo) ತಿವಿದು ತೀವ್ರ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸೊರಬ ತಾಲೂಕು ಓಟೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಮಂಚಪ್ಪ (60) ಸಾವಿಗೀಡಾದವರು. ಸಾಕಿದ್ದ ಕೋಣವನ್ನು ಮೇಯಿಸಲು ಹೊಲಕ್ಕೆ ಕರೆದೊಯ್ದಾಗ ಅದು ತಿವಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.  ಇದನ್ನೂ ಓದಿ » ಫ್ಯಾನಿಗೆ ನೇಣು ಬಿಗಿದುಕೊಳ್ಳಲು ರೆಡಿಯಾಗಿದ್ದ ವ್ಯಕ್ತಿ, ಅಷ್ಟರಲ್ಲಿ ಮನೆಗೆ ಬಂದರು ಪೊಲೀಸ್‌, ಆಗಿದ್ದೇನು? buffalo

ಶಿವಮೊಗ್ಗದಲ್ಲಿ ಬಸ್‌ ಹತ್ತಿದ ಕೆಲವೇ ಕ್ಷಣದಲ್ಲಿ ಚನ್ನಗಿರಿಯ ವ್ಯಕ್ತಿಗೆ ಕಾದಿತ್ತು ಶಾಕ್‌, ಆಗಿದ್ದೇನು?

KSRTC-Bus-General-Image

ಶಿವಮೊಗ್ಗ: ನಗರದ KSRTC ಬಸ್‌ ನಿಲ್ದಾಣದಲ್ಲಿ ಕಳ್ಳರ ಹಾವಳಿ ಮುಂದುವರೆದಿದೆ. ಬಸ್‌ ಹತ್ತುವಾಗ ವ್ಯಕ್ತಿಯೊಬ್ಬರ ಜೇಬಿನಲ್ಲಿದ್ದ ಹಣ ಲಪಟಾಯಿಸಿದ್ದಾರೆ. ಚನ್ನಗಿರಿಯ ನಾಗರಾಜ್‌ ಎಂಬುವವರು ಶಿವಮೊಗ್ಗದ ನಂಜಪ್ಪ ಲೈಫ್‌ ಕೇರ್‌ ಆಸ್ಪತ್ರೆಯಲ್ಲಿ ತಮ್ಮ ತಾಯಿಯನ್ನು ಚಿಕಿತ್ಸೆಗೆ ಕರೆತಂದಿದ್ದರು. ಸಂಜೆ ಊರಿಗೆ ಮರಳಲು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಆಗಮಿಸಿದ್ದರು. ಬಸ್‌ ಹತ್ತುವಾಗ ರಶ್‌ ಇತ್ತು. ಬಸ್‌ ಹತ್ತಿದ ಮೇಲೆ ಜೇಬಿಗೆ ಕೈ ಹಾಕಿದಾಗ ಅದರಲ್ಲಿದ್ದ ₹34,000 ಹಣ ನಾಪತ್ತೆಯಾಗಿತ್ತು ಎಂದು ಆರೋಪಿಸಿದ್ದಾರೆ. ಎಲ್ಲೆಡೆ ಹುಡುಕಿದ ನಾಗರಾಜ್‌ ಅವರು ಕೊನೆಗೆ ದೂರು … Read more

ವೈದ್ಯರಿಂದ ಶಿವಮೊಗ್ಗದಲ್ಲಿ ಅಮೃತ ನಡಿಗೆ, ವೈದ್ಯಕೀಯ ಸಂಘದಿಂದ ಎರಡು ದಿನ ವಿಭಿನ್ನ ಕಾರ್ಯಕ್ರಮ

260925-IMA-president-Dr-Shridha-press-meet-in-shimoga.webp

ಶಿವಮೊಗ್ಗ: ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಸೆ.27 ಮತ್ತು 28ರಂದು ಆಯೋಜಿಸಲಾಗಿದೆ. ಎರಡು ದಿನ ವಿಭಿನ್ನ ಕಾರ್ಯಕ್ರಮಗಳು ನಡೆಯಲಿವೆ ಎಂದು ಐಎಂಎ (Doctors) ಪದಾಧಿಕಾರಿಗಳು ತಿಳಿಸಿದ್ದಾರೆ. ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಎಂಎ ಶಿವಮೊಗ್ಗದ ಅಧ್ಯಕ್ಷ ಡಾ. ಶ್ರೀಧರ್.ಎಸ್, ಸೆ.27ರ ಬೆಳಗ್ಗೆ 8 ಗಂಟೆಗೆ ಅಮೃತ ನಡಿಗೆ ಜಾಥಾ ಅಯೋಜಿಸಲಾಗಿದೆ. ಸಂಜೆ ರಾಮನ್ ಸಹೋದರಿಯರಿಂದ ವೀಣಾವಾದನ, ವೈದ್ಯರ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ ಎಂದರು. ‘ಅಮೃತ ಸಂಭ್ರಮ’ ಹೊತ್ತಿಗೆ, ವೈದ್ಯರ ಮಾಹಿತಿ ಇರುವ ‘ಪ್ರವರ’ … Read more

ಅಡಿಕೆ ಧಾರಣೆ | 26 ಸೆಪ್ಟೆಂಬರ್‌ 2025 | ಇವತ್ತಿನ ಅಡಿಕ ರೇಟ್‌, ಎಲ್ಲೆಲ್ಲಿ ಎಷ್ಟಿದೆ?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Areca Price) ಶಿವಮೊಗ್ಗ ಮಾರುಕಟ್ಟೆ ಗೊರಬಲು 34299 39869 ನ್ಯೂ ವೆರೈಟಿ 57599 62869 ಬೆಟ್ಟೆ 52200 68699 ರಾಶಿ 48111 63869 ಸರಕು 62699 93800 ಭದ್ರಾವತಿ ಮಾರುಕಟ್ಟೆ ಚೂರು 4900 5000 ಸಿಪ್ಪೆಗೋಟು 10000 10000 ತೀರ್ಥಹಳ್ಳಿ ಮಾರುಕಟ್ಟೆ ಸಿಪ್ಪೆಗೋಟು 10000 12000 ಇದನ್ನೂ ಓದಿ » ಜಾತಿ ಸಮೀಕ್ಷೆ, ಅಧಿಕಾರಿಯನ್ನು ಅಮಾನತು ಮಾಡಿದ ಶಿವಮೊಗ್ಗ ಜಿಲ್ಲಾಧಿಕಾರಿ Areca Price

ಶಿವಮೊಗ್ಗ ಕಾಂಗ್ರೆಸ್‌ನ ಯುವ ನಾಯಕನಿಗೆ ನಿಗಮದ ಅಧ್ಯಕ್ಷ ಸ್ಥಾನ

Chethan-Gowda-nominated-as-president-for-board.

ಶಿವಮೊಗ್ಗ: ರಾಜ್ಯ ಸರ್ಕಾರ ಮತ್ತಷ್ಟು ಅಭಿವೃದ್ಧಿ ನಿಗಮಗಳಿಗೆ ಅ‍ಧ್ಯಕ್ಷರನ್ನು ನೇಮಕ ಮಾಡಿ ಆದೇಶಿಸಿದೆ. ಶಿವಮೊಗ್ಗದ ಯುವ ನಾಯಕ (Youth Leader) ಚೇತನ್.ಕೆ ಅವರನ್ನು ಜವಳಿ ಮೂಲ ಸೌಲಭ್ಯ (ವಿದುತ್‌ ಮಗ್ಗಗಳ) ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ನೇಮಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕ ಮಾಡಿ ಆದೇಶ ಮಾಡಿದ್ದಾರೆ. ಇದನ್ನೂ ಓದಿ » ರೈತರ ಗಮನಕ್ಕೆ, ಶಿವಮೊಗ್ಗ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆ ಅಡಿ ಭತ್ತ ಖರೀದಿ, ಎಲ್ಲೆಲ್ಲಿ?

ರೈತರ ಗಮನಕ್ಕೆ, ಶಿವಮೊಗ್ಗ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆ ಅಡಿ ಭತ್ತ ಖರೀದಿ, ಎಲ್ಲೆಲ್ಲಿ?

Agriculture-News-Farmer

ಶಿವಮೊಗ್ಗ: 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ ಕೇಂದ್ರ ಸರ್ಕಾರವು ಭತ್ತವನ್ನು (Paddy) ಖರೀದಿಸಲು ಮುಂದಾಗಿದೆ. ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್‌ಗೆ ₹2369 ಹಾಗೂ ಗ್ರೇಡ್ ಎ ಭತ್ತ ಪ್ರತಿ ಕ್ವಿಂಟಾಲ್‌ಗೆ ₹2389 ದರ ನಿಗದಿಪಡಿಸಲಾಗಿದೆ. ಜಿಲ್ಲಾ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆ ಭತ್ತ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಮತ್ತು ನಿಗಮದ ವತಿಯಿಂದ TAPCMS/PACS/FPOs/ಉಪ ಏಜೆನ್ಸಿಗಳನ್ನು ನೇಮಿಸಲಾಗಿದೆ. ರೈತರಿಂದ ಪ್ರತಿ ಎಕರೆಗೆ … Read more

ಭದ್ರಾವತಿಯ 19 ವರ್ಷದ ಯುವಕನಿಗೆ 20 ವರ್ಷ ಜೈಲು, ಈತ ಮಾಡಿದ ಅಪರಾಧವೇನು?

Shivamogga-Court-Balaraja-Urs-Road

ಶಿವಮೊಗ್ಗ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ವಿವಾಹವಾಗಿದ್ದ 19 ವರ್ಷದ ಯುವಕನಿಗೆ (Youth) 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಏನಿದು ಪ್ರಕರಣ? 19 ವರ್ಷದ ಯುವಕನೊಬ್ಬ 2022ರಲ್ಲಿ ಭದ್ರಾವತಿ ತಾಲೂಕಿನ 15 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಆಕೆಯನ್ನು ಮದುವೆಯಾಗಿದ್ದ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಬಾಲಕಿ ದೂರು ನೀಡಿದ್ದಳು. ತನಿಖೆ ನಡೆಸಿದ ಆಗಿನ ಇನ್ಸ್‌ಪೆಕ್ಟರ್‌ ಅಭಯ ಪ್ರಕಾಶ್‌ ಸೋಮನಾಳ್‌ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ … Read more

ದಿನ ಪಂಚಾಂಗ | 26 ಸೆಪ್ಟೆಂಬರ್ 2025 | ಇವತ್ತು ವಿಶಾಖ ನಕ್ಷತ್ರ, ಈ ದಿನ ಯಾವ್ಯಾವ ಸಮಯ ಯಾವಾಗಿದೆ?

Indina-Panchanga-today Panchanga

ಈ ದಿನದ ಪಂಚಾಂಗ (Online Panchanga) ವಾರ : ಶುಕ್ರವಾರ, 26 ಸೆಪ್ಟೆಂಬರ್ 2025 – ಚತುರ್ಥಿ ಸೂರ್ಯೋದಯ : 6.17 am ಸೂರ್ಯಾಸ್ತ : 6.21 pm ನಕ್ಷತ್ರ : ವಿಶಾಖ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.42 ರಿಂದ 5.29ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.05 ರಿಂದ 6.17ರವರೆಗೆ ಅಭಿಜಿತ್‌ ಬೆಳಗ್ಗೆ 11.55 ರಿಂದ 12.43ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.20 ರಿಂದ 3.08ರವರಗೆ ಗೋಧೂಳಿ ಮುಹೂರ್ತ ಸಂಜೆ 6.21 ರಿಂದ 6.45ರವರೆಗೆ … Read more