ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ದಿನ 13 ಮಂದಿಗೆ ಕರೋನ, ಸೋಂಕು ಹರಡಲು ಕಾರಣ ತಿಳಿಸದ ಸರ್ಕಾರ, ಹೆಚ್ಚಾಯ್ತು ಆತಂಕ

Mc Gann Hospital Building

ಶಿವಮೊಗ್ಗ ಲೈವ್.ಕಾಂ | SHIMOGA NEWS | 27 ಜೂನ್ 2020 ಶಿವಮೊಗ್ಗ ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಕರೋನ ಪಾಸಿಟಿವ್ ಬಂದಿದೆ. ಒಂದೇ ದಿನ 13 ಮಂದಿಗೆ ಸೋಂಕು ತಗುಲಿದೆ. ಇವತ್ತು ಯಾರಿಗೆಲ್ಲ ಸೋಂಕು ತಗುಲಿದೆ? ಪಿ11197 -36 ವರ್ಷದ ಪುರುಷ ಪಿ11198 – 28 ವರ್ಷದ ಮಹಿಳೆ ಪಿ11199 – 21 ವರ್ಷದ ಪುರುಷ ಪಿ11200 – 31 ವರ್ಷದ ಪುರುಷ ಪಿ11201 – 25 ವರ್ಷದ ಪುರುಷ ಪಿ11202 – 38 ವರ್ಷದ ಮಹಿಳೆ … Read more

ಎಸ್ಸೆಸ್ಸೆಲ್ಸಿ ಮಕ್ಕಳಿದ್ದ ಬಸ್ ಬರೋ ಹಾದಿಯಲ್ಲಿ ಬಿತ್ತು ಮರ, ಯಶೋಗಾಥೆ ಆಯ್ತು ಚಾಲಕ, ಶಿಕ್ಷಕನ ಕಾರ್ಯ, ಅಷ್ಟಕ್ಕೂ ಏನಾಯ್ತು ಗೊತ್ತಾ?

270620 Sagara SSLC Bus Tree fall 1

ಶಿವಮೊಗ್ಗ ಲೈವ್.ಕಾಂ | SAGARA NEWS | 27 ಜೂನ್ 2020 KSRTC ಬಸ್ ಚಾಲಕರೊಬ್ಬರ ಸಮಯಪ್ರಜ್ಞೆಯಿಂದಾಗಿ ಇವತ್ತು 16 ಮಕ್ಕಳು ಸರಿಯಾದ ಸಮಯಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ತಲುಪುವಂತಾಗಿದೆ. ಚಾಲಕ ಮತ್ತು ರೂಟ್ ಆಫೀಸರ್ ಯಶೋಗಾಥೆಗೆ ಶಿಕ್ಷಣ ಇಲಾಖೆಯ ಪ್ರಶಂಸೆ ವ್ಯಕ್ತಪಡಿಸಿದೆ. ಅಷ್ಟಕ್ಕೂ ಆಗಿದ್ದೇನು? ಸಾಗರ ತಾಲೂಕಿನ ನಾಗವಳ್ಳಿ ಗ್ರಾಮದ 16 ಎಸ್ಸೆಸ್ಸೆಲ್ಸಿ ಮಕ್ಕಳು ಗಣಿತ ಪರೀಕ್ಷೆ ಬರೆಯಲು ಕಾರ್ಗಲ್‍ನ ಪರೀಕ್ಷಾ ಕೇಂದ್ರಕ್ಕೆ ಬರಬೇಕಿತ್ತು. ನಾಗವಳ್ಳಿಯಿಂದ ಪರೀಕ್ಷಾ ಕೇಂದ್ರವು 50 ಕಿ.ಮೀ ದೂರದಲ್ಲಿದೆ. ಹಾಗಾಗಿ KSRTC … Read more

ಶಿವಮೊಗ್ಗ ನಗರದ ಮತ್ತೆರಡು ರಸ್ತೆಗಳು ಇವತ್ತು ಸೀಲ್ ಡೌನ್, ಶುರುವಾಯ್ತು ಸ್ಯಾನಿಟೈಸೇಷನ್

270620 Gopalagowda Layout Seal Down in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 27 ಜೂನ್ 2020 ಶಿವಮೊಗ್ಗ ನಗರದಲ್ಲಿ ಇವತ್ತು ಮತ್ತೆ ಎರಡು ರಸ್ತೆಗಳನ್ನು ಇವತ್ತು ಸೀಲ್ ಡೌನ್ ಮಾಡಲಾಗಿದೆ. ಇಬ್ಬರಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಅವರ ಮನೆಗಳಿರುವ ರಸ್ತೆಗಳಲ್ಲಿ ಜನ ಸಂಚಾರ ನಿರ್ಬಂಧಿಸಲಾಗಿದೆ. ಗೋಪಾಲಗೌಡ ಬಡಾವಣೆ ಗೋಪಾಲಗೌಡ ಬಡಾವಣೆಯ ಮತ್ತೊಂದು ರಸ್ತೆಯನ್ನು ಇವತ್ತು ಸೀಲ್ ಡೌನ್ ಮಾಡಲಾಗಿದೆ. ಇಲ್ಲಿನ ಡಿ ಬ್ಲಾಕ್‍ನ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ಸೀಲ್ ಡೌನ್ ಮಾಡಲಾಗಿದೆ. ನಿವಾಸಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆ, ಬ್ಯಾರಿಕೇಡ್ ಹಾಕಿ ರಸ್ತೆಯನ್ನು … Read more

ಶಿವಮೊಗ್ಗದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಸಚಿವ ಈಶ್ವರಪ್ಪ, ಡಿಸಿ ಭೇಟಿ, ಪರಿಶೀಲನೆ

270620 Eshwarappa Visit SSLC Exam Centers 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 27 ಜೂನ್ 2020 ಇವತ್ತು ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆ ನಡೆಯುತ್ತಿದೆ. ನಗರದ ವಿವಿಧ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ‍್ವರಪ್ಪ ಭೇಟಿ ನೀಡಿ ವ್ಯವಸ್ಥೆಯ ಪರಿಶೀಲನೆ ನಡೆಸಿದರು. ಪರೀಕ್ಷಾ ಕೇಂದ್ರದ ವಿದ್ಯಾರ್ಥಿಗಳ ಜೊತೆಗೆ ಸಚಿವ ಈಶ್ವರಪ್ಪ ಸಮಾಲೋಚನೆ ನಡೆಸಿದರು. ಬಳಿಕ ಕೊಠಡಿಗೆ ತರಳಿ ವಿದ್ಯಾರ್ಥಿಗಳು ಭಯಪಡದೆ ಪರೀಕ್ಷೆ ಎದುರಿಸುವಂತೆ ತಿಳಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಶಿಕ್ಷಣ ಸಚಿವ … Read more

ಶಿಕಾರಿಪುರದ ಮೃತ ವೃದ್ಧೆಯ ಕುಟುಂಬದ ಇಬ್ಬರಿಗೆ ಕರೋನ, ಇಡೀ ಊರು ಸೀಲ್ ಡೌನ್

SHIKARIPURA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 27 ಜೂನ್ 2020 ಕರೋನಾದಿಂದ ಮೃತಪಟ್ಟ ವೃದ್ಧೆಯ ಸಂಪರ್ಕದಲ್ಲಿದ್ದ ಕುಟುಂಬದ ಇಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಇದು ಶಿಕಾರಿಪುರ ತಾಲೂಕಿನಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಜೂ.೨೨ರಂದು ೭೫ ವರ್ಷದ ವೃದ್ಧೆ ಮೃತಪಟ್ಟಿದ್ದರು. ಮೃತ ಮಹಿಳೆಗೆ ಕರೋನದ ಒಂದು ಬಗೆಯಾದ ಸಾರಿ (SARI) ಇತ್ತು ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಈಗ ಅವರ ಸಂಪರ್ಕದಲ್ಲಿದ್ದ ಕುಟುಂಬದ ಇಬ್ಬರಲ್ಲೇ ಸೋಂಕು ಕಾಣಿಸಿಕೊಂಡಿದೆ. ವೃದ್ಧೆಯ ಕುಟುಂಬದ 40 ವರ್ಷದ ಪುರುಷ ಪಿ10829 ಮತ್ತು ೨೦ ವರ್ಷದ … Read more

ಶಿವಮೊಗ್ಗದಲ್ಲಿ ಇಬ್ಬರು ವೈದ್ಯರಿಗೆ ಕರೋನ, ಖಾಸಗಿ ಆಸ್ಪತ್ರೆಗೆ ದಾಖಲು, ಎರಡು ಏರಿಯಾ ಸೀಲ್ ಡೌನ್

Corona PPE Kit and swab box

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಜೂನ್ 2020 ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಆಸ್ಪತ್ರೆ ವೈದ್ಯರಿಗೂ ಕರೋನ ಸೋಂಕು ತಗುಲಿದೆ. ವೈದ್ಯರ ಮನೆಗಳಿರುವ ಪ್ರದೇಶಗಳನ್ನು ಸೀಲ್‌ ಡೌನ್‌ ಮಾಡಲಾಗಿದೆ. ಮತ್ತೊಂದೆಡೆ ಇಬ್ಬರು ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕರೋನಾಗೆ ಚಿಕಿತ್ಸೆ ಶುರುವಾಗಿದೆ. ಯಾರಿದು ವೈದ್ಯರು? ಸೋಂಕು ತಗುಲಿದ್ದು ಹೇಗೆ? 38 ವರ್ಷದ ಡಾಕ್ಟರ್‌ ಪಿ10828 ಮತ್ತು 30 ವರ್ಷದ ಡಾಕ್ಟರ್‌ ಪಿ10830 ಅವರಿಗೆ ಸೋಂಕು ತಗುಲಿದೆ. ಇವರಿಗೆ … Read more

ಶಿವಮೊಗ್ಗ ಕರೋನ ರಿಪೋರ್ಟ್| ಜೂನ್ 26 | ಈತನಕ 13 ಸಾವಿರ ಜನಕ್ಕೆ ಟೆಸ್ಟ್, 129 ಪಾಸಿಟಿವ್, ಕಂಟೈನ್ಮೆಂಟ್ ಜೋನ್‌ಗಳೆಷ್ಟಿವೆ?

Corona PPE Kit and swab box

ಶಿವಮೊಗ್ಗ ಲೈವ್.ಕಾಂ | SHIMOGA | 27 ಜೂನ್ 2020 ಕರೋನ ಸೋಂಕು ಹರಡದಂತೆ ತಡೆಯಲು ಶಿವಮೊಗ್ಗದಲ್ಲಿ ಹೆಚ್ಚು ಜನರನ್ನು ಟೆಸ್ಟ್‍ಗೆ ಒಳಪಡಿಸಲಾಗುತ್ತಿದೆ. ಈಗಾಗಲೇ ಹದಿಮೂರು ಸಾವಿರಕ್ಕೂ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈತನಕ ಒಟ್ಟು 129 ಮಂದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದ್ದು, 96 ಮಂದಿ ಗುಣಮುಖವಾಗಿ ಬಿಡುಗಡೆಯಾಗಿದ್ದಾರೆ. ಉಳಿದ ರಿಪೋರ್ಟ್‍ಗಳು ಈತನಕ ನೆಗೆಟಿವ್ ಬಂದಿರುವುದು ಶಿವಮೊಗ್ಗದ ಪಾಲಿಗೆ ನೆಮ್ಮದಿ ಮೂಡಿಸಿದೆ. ಜೂನ್ 26ರಂದು ಸಂಗ್ರಹಿಸಿದ ಗಂಟಲು ದ್ರವ ಮಾದರಿ = 417 ಇದುವರೆಗು ನಡೆಸಿದ ಒಟ್ಟು ಮಾದರಿಗಳ … Read more

ಶಿವಮೊಗ್ಗದ ಚನ್ನಪ್ಪ ಲೇಔಟ್‌ ರಸ್ತೆ ಸೀಲ್ ಡೌನ್, ಮೂರು ಕಡೆ ಬ್ಯಾರಿಕೇಡ್

260620 Channappa Layout Seal Down 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಜೂನ್ 2020 ವ್ಯಕ್ತಿಯೊಬ್ಬರಲ್ಲಿ ಕರೋನ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಶಿವಮೊಗ್ಗದ ಚನ್ನಪ್ಪ ಲೇಔಟ್‍ನ ಅಡ್ಡರಸ್ತೆಯೊಂದನ್ನು ಸೀಲ್ ಡೌನ್ ಮಾಡಲಾಗಿದೆ. ಮೂರು ಕಡೆ ಬ್ಯಾರಿಕೇಡ್ ಹಾಕಲಾಗಿದೆ. ಚನ್ನಪ್ಪ ಲೇಔಟ್‍ನ ಎರಡನೇ ಪ್ಯಾರಲಲ್ ಅಡ್ಡರಸ್ತೆಯಲ್ಲಿದ್ದ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದೆ. ಹಾಗಾಗಿ ರಸ್ತೆಯನ್ನು ಬಂದ್ ಮಾಡಲಾಗಿದ್ದು, ಮನೆಯಿಂದ ಯಾರೂ ಹೊರ ಬಾರದಂತೆ ಮೈಕ್ ಮೂಲಕ ಅನೌನ್ಸ್ ಮಾಡಲಾಗುತ್ತಿದೆ. ಏರಿಯಾ ಬಿಟ್ಟ ಜನ ಮತ್ತೊಂದೆಡೆ ರಸ್ತೆ ಸೀಲ್‍ ಡೌನ್ ಆಗುವುದು ಗೊತ್ತಾಗುತ್ತಿದ್ದಂತೆ ಕೆಲವರು … Read more

JOBS | ಸಬ್ ಇನ್ಸ್‌ಪೆಕ್ಟರ್‌ ವೃಂದದ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ, ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

police cap

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಜೂನ್ 2020 ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ವೃಂದದ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿದೆ. ಆರ್.ಎಸ್.ಐ (ಸಿಎಆರ್/ಡಿಎಆರ್) ಹುದ್ದೆಗೆ ಜುಲೈ 16 ಹಾಗೂ ಸ್ಪೆ.ಆರ್.ಎಸ್.ಐ (ಕೆ.ಎಸ್.ಆರ್.ಪಿ), ಎಸ್.ಐ (ಕೆ.ಎಸ್.ಐ.ಎಸ್.ಎಫ್) ಮತ್ತು ಪಿ.ಎಸ್.ಐ (ವೈರ್ಲೆಸ್) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ 18 ಅಂತಿಮ ದಿನಾಂಕವನ್ನು ವಿಸ್ತರಿಸಿ ಮರು ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಕೆ ದಿನಾಂಕವನ್ನು ಮಾತ್ರ ವಿಸ್ತರಿಸಲಾಗಿದ್ದು, ಇನ್ನುಳಿದಂತೆ … Read more

ಭದ್ರಾವತಿಯಲ್ಲೇ ಹೆಚ್ಚು ಮಳೆ, ತೀರ್ಥಹಳ್ಳಿಲಿ ಇಲ್ವೇ ಇಲ್ಲ, 24 ಗಂಟೆಯಲ್ಲಿ ಯಾವ್ಯಾವ ತಾಲೂಕಲ್ಲಿ ಎಷ್ಟೆಷ್ಟು ಮಳೆಯಾಗಿದೆ?

Shivamogga-Rain-General-Image

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಜೂನ್ 2020 ಜಿಲ್ಲೆಯಾದ್ಯಂತ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 3.80 ಮಿ.ಮೀ ಮಳೆಯಾಗಿದೆ. ಭದ್ರಾವತಿ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದೆ ಎಂದು ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ವಿಭಾಗ ತಿಳಿಸಿದೆ. ಯಾವ್ಯಾವ ತಾಲೂಕಲ್ಲಿ ಎಷ್ಟಾಗಿದೆ ಮಳೆ? ಶಿವಮೊಗ್ಗ ತಾಲೂಕಿನಲ್ಲಿ 6.80 ಮಿ.ಮೀ, ಭದ್ರಾವತಿ 7.40 ಮಿ.ಮೀ, ಸಾಗರ 3.40 ಮಿ.ಮೀ, ಶಿಕಾರಿಪುರ 3.60 ಮಿ.ಮೀ, ಸೊರಬ 3.20 ಮಿ.ಮೀ, ಹೊಸನಗರ 2.20 ಮಿ.ಮೀ ಮಳೆಯಾಗಿದೆ. ತೀರ್ಥಹಳ್ಳಿ ತಾಲೂಕಿನಾದ್ಯಂತ … Read more