ಏಪ್ರಿಲ್ 13ರ ಕರೋನ ರಿಪೋರ್ಟ್ | ಈವರೆಗೆ ಸಂಗ್ರಹವಾಗಿದ್ದು 152 ಮಾದರಿ, ನೆಗೆಟಿವ್ ಬಂದಿದ್ದೆಷ್ಟು? ಇನ್ನೆಷ್ಟು ವರದಿ ಬರಬೇಕಿದೆ?

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA | 14 ಏಪ್ರಿಲ್ 2020 ಕರೋನ ಶಂಕೆಯಲ್ಲಿ ಶಿವಮೊಗ್ಗದಲ್ಲಿ 584 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. 14 ದಿನ ಮತ್ತು 28 ದಿನ ಪ್ರತ್ಯೇಕವಾಗಿ ಕೆಲವರನ್ನು ಕ್ವಾರಂಟೈನ್’ನಲ್ಲಿ ಇರಿಸಲಾಗಿದೆ. ಇವುಗಳ ಕಂಪ್ಲೀಟ್ ವಿವರ ಇಲ್ಲಿದೆ. ಪ್ರಸ್ತುತ ಜಿಲ್ಲೆಯಲ್ಲಿ ನಿಗಾದಲ್ಲಿರುವವರು = 584 14 ದಿನ ನಿಗಾ ಅವಧಿ ಪೂರೈಸಿದವರು = 123 28 ದಿನ ನಿಗಾ ಅವಧಿ ಪೂರೈಸಿದವರು = 461 ಆಸ್ಪತ್ರೆಯ ಕ್ವಾರಂಟೈನ್’ನಲ್ಲಿ ಇರುವವರು = 17 ಹಾಸ್ಟೆಲ್ ಕ್ವಾರಂಟೈನ್’ನಲ್ಲಿ ಇರುವವರು … Read more

ಲಾಕ್‌ಡೌನ್‌ ಇದ್ದರೂ ಜೆಲ್ಲಿ ಕ್ರಷರ್ ಲಾರಿಗಳ ಸಂಚಾರ, ಹೊಸನಗರದಲ್ಲಿ ಗ್ರಾಮಸ್ಥರಿಂದ ಲಾರಿ ತಡೆದು ಆಕ್ರೋಶ

130420 Kumbathi Lorry Protest Hosanagara 1

ಶಿವಮೊಗ್ಗ ಲೈವ್.ಕಾಂ | HOSANAGARA | 13 ಏಪ್ರಿಲ್ 2020 ಕರೋನ ಲಾಕ್‌ಡೌನ್‌ ಅವಧಿಯಲ್ಲೂ ಕ್ರಷರ್‌ಗಳಿಂದ ಲಾರಿಗಳು ಸಂಚರಿಸುತ್ತಿವೆ. ಇದರಿಂದ ಆಕ್ರೋಶಗೊಂಡ ಗ್ರಾಮ‍ಸ್ಥರು ಇವತ್ತು ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಹೊಸನಗರ ತಾಲೂಕು ಕುಂಬತ್ತಿ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರತಿದಿನ ಸುಮಾರು ೧೫ ಲಾರಿಗಳು ಜೆಲ್ಲಿ ಕ್ರಷರ್‌ಗಳಿಂದ ಕುಂಬತ್ತಿ ಗ್ರಾಮದಲ್ಲಿ ಸಂಚರಿಸುತ್ತಿವೆ. ಇದರಿಂದ ಧೂಳು ಹೆಚ್ಚಾಗಿದೆ. ಅಲ್ಲದೆ ಹೊರಗಿನಿಂದ ಲಾರಿಗಳು ಬರುವುದರಿಂದ ಜನರಲ್ಲಿ ಸೋಂಕು ತಗಲುವ ಆತಂಕ ಮೂಡಿದೆ. ಇಲ್ಲಿ ಸುತ್ತಾ ಗ್ರಾಮದಲ್ಲಿ ಇರುವ ಜೆಲ್ಲಿ ಕ್ರಷರ್‌ಗಳಿಂದ … Read more

ಸಾಗರ, ತೀರ್ಥಹಳ್ಳಿಯ ಇಬ್ಬರು ಮಹಿಳೆಯರಲ್ಲಿ ಕೆಎಫ್‌ಡಿ ಸೋಂಕು, ಶರಾವತಿ ಅಭಯಾರಣ್ಯ ಪ್ರವೇಶ ಬಂದ್

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIMOGA | 13 ಏಪ್ರಿಲ್ 2020 ತೀರ್ಥಹಳ್ಳಿ ಮತ್ತು ಸಾಗರ ತಾಲೂಕಿನ ಮತ್ತಿಬ್ಬರಲ್ಲಿ ಕೆಎಫ್‍ಡಿ ಸೋಂಕು ದೃಢವಾಗಿದೆ. ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತೀರ್ಥಹಳ್ಳಿ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡಿನಬೈಲು ಗ್ರಾಮದ ಭಾರತಿ (49) ಎಂಬುವವರಲ್ಲಿ ಕೆಎಫ್‍ಡಿ ಸೋಂಕು ಇರುವುದು ದೃಢವಾಗಿದೆ. ಇವರನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ಸೇರಿಸಲಾಗಿದೆ. ಸಾಗರದಲ್ಲೂ ಒಂದು ಕೇಸ್ ಪತ್ತೆ ಸಾಗರ ತಾಲೂಕಿನ ಮಹಿಳೆಯೊಬ್ಬರಿಗು ಕೆಎಫ್‍ಡಿ ದೃಢವಾಗಿದೆ. ಅರಳಗೋಡಿನ ಕಸಗುಪ್ಪೆ ಗ್ರಾಮದ ಚಂದ್ರಕಲಾ (50) ಅವರಿಗೆ ಸೋಂಕು ಇರುವುದು … Read more

ಕೇರಳದಿಂದ ತರಕಾರಿ ಲಾರಿಯಲ್ಲಿ ಭದ್ರಾವತಿಗೆ ಬಂದವನು ಮೆಗ್ಗಾನ್ ಆಸ್ಪತ್ರೆ ಕ್ವಾರಂಟೈನ್‌ಗೆ

Mc Gann Hospital Building

ಶಿವಮೊಗ್ಗ ಲೈವ್.ಕಾಂ | SHIMOGA | 13 ಏಪ್ರಿಲ್ 2020 ಕೇರಳದಿಂದ ತರಕಾರಿ ಲಾರಿಯಲ್ಲಿ ಭದ್ರಾವತಿಗೆ ಬಂದು ಪರಿಚಯದವರ ಮನೆಯಲ್ಲಿದ್ದ ವ್ಯಕ್ತಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, 28 ದಿನ ಕ್ವಾರಂಟೈನ್‍ಗೆ ಕಳುಹಿಸಲಾಗಿದೆ. ಕೇರಳದ ಕಾಸರಗೋಡು ಜಿಲ್ಲೆಯಿಂದ ತಬ್ಬೀರ್ ಸಾಬ್ (55) ಎಂಬಾತ ಭದ್ರಾವತಿಗೆ ಆಗಮಿಸಿದ್ದಾನೆ. ಈತ ಏಪ್ರಿಲ್ 10ರಂದು ದೊಣಬಘಟ್ಟದ  ಪರಿಚಯದವರ ಮನೆಗೆ ಬಂದಿದ್ದ. ಈ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆಯೆ ಆರೋಗ್ಯ ಇಲಾಖೆ ಅಧಿಕಾರಿಗಳು ತಬ್ಬೀರ್ ಸಾಬ್‍ನನ್ನು … Read more

ಏಪ್ರಿಲ್ 12ರ ಶಿವಮೊಗ್ಗ ಕರೋನ ರಿಪೋರ್ಟ್ | ಬರಬೇಕಿದೆ 12 ರಿಪೋರ್ಟ್, ಹೋಂ ಕ್ವಾರಂಟೈನ್‌ನಲ್ಲಿ ಇನ್ನೂ 172 ಮಂದಿ

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA | 12 ಏಪ್ರಿಲ್ 2020 ಕರೋನ ಶಂಕೆಯಲ್ಲಿ ಶಿವಮೊಗ್ಗದಲ್ಲಿ 584 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. 14 ದಿನ ಮತ್ತು 28 ದಿನ ಪ್ರತ್ಯೇಕವಾಗಿ ಕೆಲವರನ್ನು ಕ್ವಾರಂಟೈನ್’ನಲ್ಲಿ ಇರಿಸಲಾಗಿದೆ. ಇವುಗಳ ಕಂಪ್ಲೀಟ್ ವಿವರ ಇಲ್ಲಿದೆ. ಪ್ರಸ್ತುತ ಜಿಲ್ಲೆಯಲ್ಲಿ ನಿಗಾದಲ್ಲಿರುವವರು = 584 14 ದಿನ ನಿಗಾ ಅವಧಿ ಪೂರೈಸಿದವರು = 172 28 ದಿನ ನಿಗಾ ಅವಧಿ ಪೂರೈಸಿದವರು = 412 ಆಸ್ಪತ್ರೆಯ ಕ್ವಾರಂಟೈನ್’ನಲ್ಲಿ ಇರುವವರು = 14 ಹಾಸ್ಟೆಲ್ ಕ್ವಾರಂಟೈನ್’ನಲ್ಲಿ ಇರುವವರು … Read more

ಏಪ್ರಿಲ್ 10ರ ಶಿವಮೊಗ್ಗ ಕರೋನ ರಿಪೋರ್ಟ್ | ನಿಗಾ ಪೂರೈಸಿದ್ದಾರೆ 584 ಮಂದಿ, ಲ್ಯಾಬ್’ನಿಂದ ಬರಬೇಕಿದೆ 9 ಮಂದಿಯ ವರದಿ

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA | 11 ಏಪ್ರಿಲ್ 2020 ಕರೋನ ಶಂಕೆಯಲ್ಲಿ ಶಿವಮೊಗ್ಗದಲ್ಲಿ 584 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. 14 ದಿನ ಮತ್ತು 28 ದಿನ ಪ್ರತ್ಯೇಕವಾಗಿ ಕೆಲವರನ್ನು ಕ್ವಾರಂಟೈನ್’ನಲ್ಲಿ ಇರಿಸಲಾಗಿದೆ. ಇವುಗಳ ಕಂಪ್ಲೀಟ್ ವಿವರ ಇಲ್ಲಿದೆ. ಪ್ರಸ್ತುತ ಜಿಲ್ಲೆಯಲ್ಲಿ ನಿಗಾದಲ್ಲಿರುವವರು = 584 14 ದಿನ ನಿಗಾ ಅವಧಿ ಪೂರೈಸಿದವರು = 274 28 ದಿನ ನಿಗಾ ಅವಧಿ ಪೂರೈಸಿದವರು = 310 ಆಸ್ಪತ್ರೆಯ ಕ್ವಾರಂಟೈನ್’ನಲ್ಲಿ ಇರುವವರು = 8 ಹಾಸ್ಟೆಲ್ ಕ್ವಾರಂಟೈನ್’ನಲ್ಲಿ ಇರುವವರು … Read more

ಇನ್ಮುಂದೆ ಶಿವಮೊಗ್ಗದಲ್ಲಿ ಸೆಕ್ಟರ್ ವೈಸ್ ಲಾಕ್’ಡೌನ್, ಏನಿದು? ಈತನಕದ ಲಾಕ್’ಡೌನ್’ಗೂ ಇದಕ್ಕೂ ವ್ಯತ್ಯಾಸವೇನು?

100420 Sectorwise Lockdown in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 10 ಏಪ್ರಿಲ್ 2020 ಶಿವಮೊಗ್ಗ ನಗರದಲ್ಲಿ ಲಾಕ್’ಡೌನ್ ವ್ಯವಸ್ಥೆ ಮತ್ತಷ್ಟು ಬಿಗಿಗೊಳಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ನಗರದಾದ್ಯಂತ ಸೆಕ್ಟರ್ ವೈಸ್ ಲಾಕ್’ಡೌನ್ ಜಾರಿಗೆ ಬಂದಿದೆ. ಏನಿದು ಸೆಕ್ಟರ್ ವೈಸ್ ಲಾಕ್’ಡೌನ್? ಬಿ.ಹೆಚ್.ರಸ್ತೆ, ನೆಹರು ರಸ್ತೆ, ನೂರು ಅಡಿ ರಸ್ತೆ, ಸವಳಂಗ ರೋಡ್, ಬಾಲರಾಜ ಅರಸ್ ರಸ್ತೆ ಸೇರಿದಂತೆ ಎಲ್ಲ ಪ್ರಮುಖ ರಸ್ತೆಗಳು, ಒಳ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಬಡಾವಣೆವಾರು ಬ್ಯಾರಿಕೇಡ್ ಹಾಕಲಾಗಿದೆ. ಒಂದು ಬಡಾವಣೆ ಜನರು … Read more

ಯಾರೂ ಮನೆ ಬಿಟ್ಟು ಹೊರ ಬರುತ್ತಿಲ್ಲ, ಆದರೂ ನಡೀತಿದೆ ಎಲ್ಲ ಕ್ಲಾಸ್, ಶಿವಮೊಗ್ಗ JNN ಕಾಲೇಜು ಡಿಫರೆಂಟ್ ಪ್ರಯೋಗ, ಹೇಗದು?

100420 JNN College Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 10 ಏಪ್ರಿಲ್ 2020 ಕರೊನಾ ಹಿನ್ನೆಲೆಯಲ್ಲಿ ಹಲವಾರು ಬದಲಾವಣೆಯಾಗಿದೆ. ವರ್ಕ್ ಫ್ರಂ ಹೋಂ ಹಾಗೂ ಆನ್‌ಲೈನ್‌ನ ವ್ಯವಹಾರಗಳಿಗೆ ಇನ್ನಿಲ್ಲದ ಮಹತ್ವ ಬಂದಿರುವುದು ಕರೊನಾದಿಂದ ಎಂದರೆ ಉತ್ಪ್ರೇಕ್ಷೆಯಲ್ಲ. ಈಗ ಇದೇ ಕರೊನಾ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಆನ್‌ಲೈನ್ ಶಿಕ್ಷಣಕ್ಕೂ ಕಾರಣವಾಗಿದೆ. ಶಿವಮೊಗ್ಗ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರು ಆನ್‌ಲೈನ್ ಮೂಲಕವೇ ತಮ್ಮ ವಿದ್ಯಾರ್ಥಿಗಳಿಗೆ ತರಗತಿ ನಡೆಸುತ್ತಿದ್ದಾರೆ. ಆ ಮೂಲಕ ಸಮಯ ವ್ಯರ್ಥವಾಗುವುದನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪಾಲಕರ ಆತಂಕ ದೂರ … Read more

ಶಿವಮೊಗ್ಗ KSRTC ಬಸ್ ನಿಲ್ದಾಣ ಬಳಿ ಚಲಿಸುತ್ತಿದ್ದ ಲಾರಿಯಿಂದ ಕಳಚಿಕೊಂಡ ರಿಮ್, ಅದೃಷ್ಟವಶಾತ್ ತಪ್ಪಿತು ದೊಡ್ಡ ಅನಾಹುತ

090420 Lorry Rim Cut Near KSRTC bus Stand 1

ಶಿವಮೊಗ್ಗ ಲೈವ್.ಕಾಂ | SHIMOGA | 9 ಏಪ್ರಿಲ್ 2020 ಸಂಚರಿಸುತ್ತಿದ್ದ ಲಾರಿಯೊಂದರ ಮುಂದಿನ ಚಕ್ರದ ರಿಮ್ ಕಳಚಿಕೊಂಡು ಟ್ರಾವಲ್ಸ್ ಏಜೆನ್ಸಿಯೊಂದರ ರೋಲಿಂಗ್ ಶಟರ್’ಗೆ ಅಪ್ಪಳಿಸಿದೆ. ಅಂಗಡಿಯ ಬಾಗಲಿ ಬೆಂಡ್ ಆಗಿದ್ದು, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಶಿವಮೊಗ್ಗ ಕೆಎಸ್ಆರ್’ಟಿಸಿ ಬಸ್ ನಿಲ್ದಾಣದ ಸಮೀಪ ಇವತ್ತು ಬೆಳಗ್ಗೆ ಘಟನೆ ಸಂಭವಿಸಿದೆ. ಭದ್ರಾವತಿಯಿಂದ ಗೊಬ್ಬರ ತುಂಬಿಕೊಂಡು ಬರುತ್ತಿದ್ದ ಲಾರಿಯ ಮುಂದಿನ ಚಕ್ರದ ರಿಮ್ ಕಳಚಿಕೊಂಡಿದೆ. ರಸ್ತೆ ಪಕ್ಕದ ಟ್ರಾವಲ್ ಏಜೆನ್ಸಿಯೊಂದರ ರೋಲಿಂಗ್ ಶೆಟರ್’ಗೆ ಅಪ್ಪಳಿಸಿದೆ. ರಿಮ್ ಗುದ್ದಿದ ರಭಸಕ್ಕೆ … Read more

ವಿಸ್ತರಣೆ ಆಗಲಿ ಲಾಕ್’ಡೌನ್, ಸರ್ವಪಕ್ಷ ಸಭೆ ನಡೆಸಲಿ ಮಿನಿಸ್ಟರ್, ಪಾಸ್’ಗಾಗಿ ಶಿವಮೊಗ್ಗಕ್ಕೆ ಬರೋದು ತಪ್ಪಿಸಿ ಅಂದ್ರು ಮಾಜಿ ಮಿನಿಸ್ಟರ್

080420 Kimmane Rathnakar Press Meet 1

ಶಿವಮೊಗ್ಗ ಲೈವ್.ಕಾಂ | SHIMOGA | 8 ಏಪ್ರಿಲ್ 2020 ಇದು ರಾಷ್ಟ್ರೀಯ ವಿಪತ್ತು. ಪ್ರಧಾನಿ ಮೋದಿ ಮತ್ತು ಸರ್ಕಾರ ಕೈಗೊಂಡಿರುವ ಲಾಕ್’ಡೌನ್ ಅನ್ನು ಎಲ್ಲರು ಪಾಲಿಸಬೇಕು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಕೂಡ ಗೌರವಯುತವಾಗಿ ನಡೆದುಕೊಳ್ಳುತ್ತಿದ್ದಾರೆ. ಕರೋನ ವಿರುದ್ಧ ಹೋರಾಟ ಮುಂದುವರೆಸಲು ಲಾಕ್’ಡೌನ್ ಅವಧಿ ವಿಸ್ತರಣೆ ಅವಶ್ಯ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಕರೋನ ವಿರುದ್ಧ ಹೋರಾಟಕ್ಕೆ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ … Read more