ಕರೋನ ಹರಡದಂತೆ ತಡೆಯಲು ಶಿವಮೊಗ್ಗ ಸಿಟಿಯಲ್ಲಿ ಔಷಧ ಸಿಂಪಡಣೆ, ಎಲ್ಲೆಲ್ಲಿ ಸಿಂಪಡಣೆಯಾಗುತ್ತೆ? ಹೇಗೆ ನಡೆಯುತ್ತೆ ಪ್ರಕ್ರಿಯೆ?

280320 Spray in Shimoga city for corona 1

ಶಿವಮೊಗ್ಗ ಲೈವ್.ಕಾಂ | SHIMOGA | 29 ಮಾರ್ಚ್ 2020 ಜನರು ಒಂದೆಡೆ ಸೇರಿದಂತೆ ಕರೋನ ಸೋಂಕು ಹರಡಬಹುದು ಎಂದು ಲಾಕ್’ಡೌನ್ ವಿಧಿಸಲಾಗಿದೆ. ಹೀಗಿದ್ದೂ ಜನರು ಪದೇ ಪದೇ ಗುಂಪುಗೂಡುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಸೋಂಕು ಹರಡದಂತೆ ತಡೆಯಲು ಹರಸಾಹಸ ಪಡುತ್ತಿದ್ದಾರೆ. ಸೋಂಕು ಹರಡದಂತೆ ತಡೆಯಲು ಅಗ್ನಿಶಾಮಕ ಸಿಬ್ಬಂದಿ ಮತ್ತು ಮಹಾನಗರ ಪಾಲಿಕೆ ಔಷಧ ಸಿಂಪಡಿಸುತ್ತಿದೆ. ಇವರು ಸಿಂಪಡಿಸುತ್ತಿರುವ ಔಷಧ ಯಾವುದು? ಹೇಗೆ ಸಿಂಪಡಣೆ ನಡೆಯುತ್ತಿದೆ? ಇಲ್ಲಿದೆ ವಿಡಿಯೋ ರಿಪೋರ್ಟ್ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳು, ಸರ್ಕಲ್, … Read more

ಮಾರ್ಚ್ 28ರವರೆಗೆ ಶಿವಮೊಗ್ಗದಲ್ಲಿ 391 ಮಂದಿ ಮೇಲೆ ನಿಗಾ, ಪರೀಕ್ಷೆಗೆ ಒಳಗಾದವರೆಷ್ಟು? ಕ್ವಾರಂಟೈನ್’ನಲ್ಲಿ ಇರೋದೆಷ್ಟು ಮಂದಿ?

Mc Gann Hospital Building

ಶಿವಮೊಗ್ಗ ಲೈವ್.ಕಾಂ | SHIMOGA | 28 ಮಾರ್ಚ್ 2020 ಕರೋನ ಶಂಕೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಲ್ಲಿ ಹಲವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಮಾರ್ಚ್ 28ರ ಸಂಜೆ 5.30ವರೆಗೆ ಶಿವಮೊಗ್ಗದಲ್ಲಿ ನಡೆದ ಪರೀಕ್ಷೆಯಲ್ಲಿ ಒಂದೂ ಪಾಸಿಟಿವ್ ಪ್ರಕರಣ ಕಾಣದಿರುವುದು ನೆಮ್ಮದಿ ಮೂಡಿಸಿದೆ. ನಿಗಾ ವಹಿಸಿದವರ ಒಟ್ಟು ಸಂಖ್ಯೆ ಕಳೆದ 24 ಗಂಟೆಯಲ್ಲಿ 19 ಪ್ರಕರಣ ಹೆಚ್ಚಳವಾಗಿದೆ. ಮಾರ್ಚ್ 28ರ ಸಂಜೆ 5.30ರವರೆಗಿನ ರಿಪೋರ್ಟ್ ಹೀಗಿದೆ ಈವರೆಗೆ ನಿಗಾದಲ್ಲಿ ಇದ್ದವರ ಸಂಖ್ಯೆ = 391 ಮನೆಯಲ್ಲಿ ಪ್ರತ್ಯೇಕ ನಿಗಾದಲ್ಲಿ ಇರುವವರು … Read more

ಕರೋನ ಆತಂಕದ ನಡುವೆ ಶಿವಮೊಗ್ಗ ಪಾಲಿಕೆ ಬಜೆಟ್ ಮಂಡನೆ, ಕಾಂಗ್ರೆಸ್, ಜೆಡಿಎಸ್’ನಿಂದ ಸಭಾತ್ಯಾಗ

280320 Congres JDS Protest against palike budget 1

ಶಿವಮೊಗ್ಗ ಲೈವ್.ಕಾಂ | SHIMOGA | 28 ಮಾರ್ಚ್ 2020 ಇವತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಬಜೆಟ್ ಮಂಡಿಸಲಾಯಿತು. ಆದರೆ ಬಜೆಟ್’ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದವು. ಅಲ್ಲದೆ ಬಜೆಟ್ ಸಭೆಯಿಂದ ಹೊರ ನಡೆದು ಆಡಳಿತ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕರೋನ ಸೋಂಕು ಹರಡುವ ಭೀತಿ ಹಿನ್ನೆಲೆ ದೇಶಾದ್ಯಂತ ಶಟ್’ಡೌನ್ ಮಾಡಲಾಗಿದೆ. ಯಾವುದೆ ಸಭೆ, ಸಮಾರಂಭ ನಡೆಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ. ಹೀಗಿದ್ದೂ ಬಜೆಟ್ … Read more

ಶಿವಮೊಗ್ಗದಲ್ಲಿ ಸಚಿವರ ಸಿಟಿ ರೌಂಡ್ಸ್, ಮನವಿ ಮಾಡಿ ಅಂಗಡಿ ಬಾಗಿಲು ಬಂದ್ ಮಾಡಿಸಿದ ಮಿನಿಸ್ಟರ್, ಎಲ್ಲಿಗೆಲ್ಲ ಭೇಟಿ ನೀಡಿದರು?

280320 Eshwarappa Visit Gandhi Bazaar 1

ಶಿವಮೊಗ್ಗ ಲೈವ್.ಕಾಂ | SHIMOGA | 28 ಮಾರ್ಚ್ 2020 ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಇವತ್ತು ನಗರದ ವಿವಿಧೆಡೆ ಭೇಟಿ ನೀಡಿದರು. ಈ ವೇಳೆ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದವರಿಗೆ ಮನವಿ ಮಾಡಿ, ಬಾಗಿಲು ಹಾಕಿಸಿದರು. ಕರೋನ ವೈರಸ್ ಹರಡದಂತೆ ತಡೆಯಲು ಕೈಗೊಂಡಿರುವ ಕ್ರಮಗಳ ಪರಿಶೀಲನೆಗೆ ಸಚಿವ ಈಶ್ವರಪ್ಪ ಅವರು ಸಿಟಿ ರೌಂಡ್ಸ್ ಹಾಕಿದರು. ಮೊದಲು ಗಾಂಧಿ ಬಜಾರ್’ಗೆ ತೆರಳಿದ ಅವರು, ಅಗತ್ಯ ವಸ್ತು ಅಲ್ಲದಿದ್ದರು ಅಂಗಡಿ ಬಾಗಿಲು ತೆಗೆದು ವ್ಯಾಪಾರ ಮಾಡುತ್ತಿರುವುದನ್ನು ಗಮನಿಸಿದರು. … Read more

ಕರೋನ ಬಾದಿತ ದೇಶದಿಂದ ಬಂದರು ಹೊಸನಗರ ಸಿಟಿ, ಹಳ್ಳಿಗಳಲೆಲ್ಲ ಸುತ್ತಾಡಿದರು, ಈಗ ಎಚ್ಚರಿಕೆ ಜೊತೆಗೆ ಬಿತ್ತು ಕೇಸ್

Hosanagara Police Station 1

ಶಿವಮೊಗ್ಗ ಲೈವ್.ಕಾಂ | SHIMOGA | 28 ಮಾರ್ಚ್ 2020 14 ದಿನ ಹೋಂ ಕ್ವಾರಂಟೈನ್’ನಲ್ಲಿ ಇರಬೇಕು ಎಂದು ವೈದ್ಯರು ಸೂಚಿಸಿದ್ದರು, ಹೊಸನಗರದ ವ್ಯಕ್ತಿಯೊಬ್ಬರು ಹೊಸನಗರ ಪಟ್ಟಣ ಮತ್ತು ಸುತ್ತಮುತ್ತ ಹಳ್ಳಿಗಳಿಗೆ ಹೋಗಿ ಬಂದಿದ್ದಾರೆ. ಇದು ತಿಳಿಯುತ್ತಿದ್ದಂತೆ ಆ ವ್ಯಕ್ತಿ ವಿರುದ್ಧ ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸನಗರದ ಡಾ.ಅಂಬೇಡ್ಕರ್ ಕಾಲೋನಿಯ ರಾಧಾಕೃಷ್ಣ ಅವರು ಕರೋನ ಬಾದಿತ ಫ್ರಾನ್ಸ್ ದೇಶದಿಂದ ಬಂದಿದ್ದರು. ಇವರ ಪರೀಕ್ಷೆ ನಡೆಸಿದ್ದ ವೈದ್ಯರು, 14 ದಿನ ಹೋಂ ಕ್ವಾರಂಟೈನ್’ನಲ್ಲಿ ಇರುವಂತೆ ಸೂಚಿಸಿದ್ದರು. ಆದರೂ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಕರೋನ ನಿಗಾದಲ್ಲಿರುವವರೆಷ್ಟು? ಈವರೆಗೆ ಎಷ್ಟು ರಕ್ತದ ಮಾದರಿಯನ್ನು ಲ್ಯಾಬ್’ಗೆ ಕಳುಹಿಸಲಾಗಿದೆ ಗೊತ್ತಾ?

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA | 28 ಮಾರ್ಚ್ 2020 ಕರೋನ ಶಂಕೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಲ್ಲಿ ಹಲವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಮಾರ್ಚ್ 28ರ ಸಂಜೆವರೆಗೆ ಶಿವಮೊಗ್ಗದಲ್ಲಿ ನಡೆದ ಪರೀಕ್ಷೆಯಲ್ಲಿ ಒಂದೂ ಪಾಸಿಟಿವ್ ಪ್ರಕರಣ ಕಾಣದಿರುವುದು ಸಮಾಧಾನದ ಸಂಗತಿ. ಈವರೆಗೆ ಎಷ್ಟು ಪರೀಕ್ಷೆಯಾಗಿದೆ? ಈವರೆಗೆ ನಿಗಾದಲ್ಲಿ ಇದ್ದವರ ಸಂಖ್ಯೆ = 372 ಮನೆಯಲ್ಲಿ ಪ್ರತ್ಯೇಕ ನಿಗಾದಲ್ಲಿ ಇರುವವರು = 254 ಆಸ್ಪತ್ರೆಯಲ್ಲಿ ಪ್ರತ್ಯೇಕಾ ನಿಗಾದಲ್ಲಿ ಇರುವವರು = 2 14 ದಿನ ನಿಗಾ ಪೂರೈಸಿದವರು = 116 … Read more

ಮಹಾರಾಷ್ಟ್ರದಿಂದ ಶಿವಮೊಗ್ಗಕ್ಕೆ ದಿಢೀರ್ ಬಂದ 51 ಮಂದಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಕರೋನ ಸ್ಕ್ರೀನಿಂಗ್

270320 Kannadigas from Maharashtra corona screening 1

ಶಿವಮೊಗ್ಗ ಲೈವ್.ಕಾಂ | SHIMOGA | 27 ಮಾರ್ಚ್ 2020 ಮಹಾರಾಷ್ಟ್ರದಿಂದ ಶಿವಮೊಗ್ಗಕ್ಕೆ ಬಂದಿರುವ 51 ಮಂದಿಯನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಮಹಿಳೆಯರು, ಮಕ್ಕಳು ಕೂಡ ಈ ತಂಡದಲ್ಲಿದ್ದು, ಪರೀಕ್ಷೆಗೆ ಒಳಪಡಿಸಿ,ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದೆ. ಯಾರು ಇವರೆಲ್ಲ? ಶಿವಮೊಗ್ಗಕ್ಕೇಕೆ ಬಂದಿದ್ದಾರೆ? ಇವರೆಲ್ಲ ಮಹಾರಾಷ್ಟ್ರದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕರೋನ ಸೋಂಕು ಪರಿಣಾಮ ಸ್ಥಳೀಯರು ಒತ್ತಡಕ್ಕೆ ಮಣಿದು ಇವರು ಕೆಲಸ ಮಾಡುತ್ತಿದ್ದ ಕಂಪೆನಿ, ಇವರನ್ನೆಲ್ಲ ಕೆಲಸದಿಂದ ತೆಗೆದು ಹಾಕಿದೆ. ಹಾಗಾಗಿ ಇವರೆಲ್ಲ ತಮ್ಮೂರಿಗೆ ಹಿಂತಿರುಗಿದ್ದಾರೆ. ಈ ತಂಡದಲ್ಲಿ … Read more

ಧರ್ಮಸ್ಥಳದಲ್ಲಿ ಆರಿಹೋಯ್ತಂತೆ ದೀಪ, ಮನೆ ಮುಂದೆ ಬೆಳಗಬೇಕಂತೆ ಹಣತೆ, ಎಲ್ಲೆಲ್ಲಿ ಆಗ್ತಿದೆ ಪೂಜೆ? ಡಾ.ವೀರೇಂದ್ರ ಹೆಗ್ಗಡೆ ಏನಂತಾರೆ?

270320 Dharmastala Pooje in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 27 ಮಾರ್ಚ್ 2020 ಕರೋನ ಲಾಕ್’ಡೌನ್ ಮೂರನೇ ದಿನಕ್ಕೆ ಕಾಲಿಟ್ಟಿದೆ. ಅಗತ್ಯ ವಸ್ತುಗಳ ಖರೀದಿಗೆ ಜನರ ಪರದಾಟದ ನಡುವೆ, ಮನೆ ಮುಂದೆ ದೀಪ ಬೆಳಗಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದ ಸುದ್ದಿಯಿಂದ ಆತಂಕಕ್ಕೀಡಾಗಿದ್ದಾರೆ. ಗುರುವಾರ ರಾತ್ರಿಯಿಂದಲೇ ಹಲವು ಕಡೆಗೆ ಪೂಜೆ ಸಲ್ಲಿಸಲಾಗುತ್ತಿದೆ. ವಾಟ್ಸಪ್’ನಲ್ಲಿ ಧರ್ಮಸ್ಥಳದ ದೀಪದ ಕಥೆ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ಮುಂದೆ ಬೆಳಗುತ್ತಿದ್ದ ದೀಪ ನಂದಿ ಹೋಗಿದೆ. ಹಾಗಾಗಿ ಎಲ್ಲರು ಸೇರಿ ಮನೆ ಮುಂದೆ ದೀಪ ಬೆಳಗಬೇಕು … Read more

ಹೂವಾಡಗಿತ್ತಿಯಿಂದಾಗಿ ಇವತ್ತು ಅದೆಷ್ಟೋ ಜನ ಮನೆ ತಲುಪಿದ್ದಾರೆ, ಶಿವಮೊಗ್ಗ ಬಸ್ ನಿಲ್ದಾಣದ ಮುಂದೆ ಈ ಮಹಿಳೆ ಮಾಡಿದ್ದೇನು ಗೊತ್ತಾ?

220320 Flower Seller Gangamma Near Bus Stand 1

ಶಿವಮೊಗ್ಗ ಲೈವ್.ಕಾಂ | SHIMOGA | 22 ಮಾರ್ಚ್ 2020 ಸಾಮಾನ್ಯ ಸಂದರ್ಭದಲ್ಲೇ ಊರು ಉಸಾಬರಿ ನಮಗ್ಯಾಕೆ ಅಂತಾ ಓಡಾಡೋರು ಹೆಚ್ಚು. ಅದರಲ್ಲೂ ಕರೋನ ಆತಂಕ, ‘ಜನತಾ ಕರ್ಫ್ಯೂ’ನಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ನೆರವಿನ ಹಸ್ತ ಚಾಚುವವರು ಸಿಗುವುದೇ ಕಷ್ಟ. ‘ಜನತಾ ಕರ್ಫ್ಯೂ’ ಹಿನ್ನೆಲೆ ಶಿವಮೊಗ್ಗದಲ್ಲಿ ಇವತ್ತು ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಬೆಳಗ್ಗೆ ಕೆಎಸ್ಆರ್’ಟಿಸ್ ಬಸ್’ಗಳಲ್ಲಿ ಶಿವಮೊಗ್ಗಕ್ಕೆ ಬಂದಿದ್ದ ಪ್ರಯಾಣಿಕರು ತಮ್ಮೂರಿಗೆ ತೆರಳಲು ಪರದಾಡಬೇಕಾಯಿತು. ಈ ವೇಳೆ ಹೂವಾಡಗಿತ್ತಿಯೊಬ್ಬರು, ತಮ್ಮ ವ್ಯಾಪಾರ … Read more

ಶಿವಮೊಗ್ಗ ನಗರ ಸಂಪೂರ್ಣ ಸ್ಥಬ್ಧ, ಯಾವ್ಯಾವ ರಸ್ತೆಯಲ್ಲಿ ಹೇಗಿದೆ ನೋಡಿ ಪರಿಸ್ಥಿತಿ

220320 Shimoga Janata Curfew No Vehicles 1

ಶಿವಮೊಗ್ಗ ಲೈವ್.ಕಾಂ | SHIMOGA | 22 ಮಾರ್ಚ್ 2020 ಶಿವಮೊಗ್ಗದಲ್ಲಿ ಜನತಾ ಕರ್ಫ್ಯೂಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ಜನರು ಮನೆಯಿಂದ ಹೊರಬರುತ್ತಿಲ್ಲ. ವಾಹನಗಳು ರಸ್ತೆಗಿಳಿಯುತ್ತಿಲ್ಲ. ಇದರಿಂದ ಇಡೀ ನಗರ ಬಿಕೋ ಅನ್ನುತ್ತಿದೆ. ಎಲ್ಲೆಲ್ಲಿಗೆ ಹೇಗಿದೆ ಪರಿಸ್ಥಿತಿ? ನೂರಾರು ಬಸ್ಸುಗಳು ಓಡಾಡುತ್ತಿದ್ದ ಅಶೋಕ ಸರ್ಕಲ್ ಖಾಲಿ ಖಾಲಿ ಕೆಲವು ಆಟೋ ಹೊರತು ಎನ್.ಟಿ.ರಸ್ತೆಯಲ್ಲೂ ವಾಹನಗಳಿಲ್ಲ ವಾಹನ ದಟ್ಟಣೆ ಇರುತ್ತಿದ್ದ ಬಿ.ಹೆಚ್.ರಸ್ತೆ ಹೀಗಿದೆ ನೆಹರು ರಸ್ತೆಯ ಸಂಪೂರ್ಣ ಸ್ಥಬ್ಧ ಗೋಪಿ ಸರ್ಕಲ್’ನಲ್ಲೂ ಜನರಿಲ್ಲ, ವಾಹನಗಳಿಲ್ಲ ದುರ್ಗಿಗುಡಿಯಲ್ಲಿ ಫುಲ್ ಸೈಲೆಂಟ್ … Read more