ಶಿಕಾರಿಪುರದಲ್ಲಿ ಸಿಎಂ ವಿಶೇಷ ಪೂಜೆ, ಕುಟುಂಬದೊಂದಿಗೆ ಸಂಕ್ರಾಂತಿ ಆಚರಣೆ

150120 CM Celebrates Sankranthi in Shikaripura 1

ಶಿವಮೊಗ್ಗ ಲೈವ್.ಕಾಂ | SHIKARIPURA | 15 ಜನವರಿ 2020 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕುಟುಂಬದೊಂದಿಗೆ ಇವತ್ತು ಸಂಕ್ರಾಂತಿ ಹಬ್ಬ ಆಚರಿಸಿದರು. ಶಿಕಾರಿಪುರದಲ್ಲಿ ತಮ್ಮ ಮನೆಯಲ್ಲಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಯಡಿಯೂರಪ್ಪ ಅವರು ಮನೆಗೆ ಆಗಮಿಸಿದ ಹಿನ್ನೆಲೆ, ಆಪ್ತರು, ಪಕ್ಷದ ಮುಖಂಡರು, ಕಾರ್ಯಕರ್ತರು ಮನೆಗೆ ಭೇಟಿ ನೀಡಿದ್ದರು. ಬಂದಿದ್ದ ಎಲ್ಲರಿಗೂ ಯಡಿಯೂರಪ್ಪ ಅವರು ಎಳ್ಳ, ಬೆಲ್ಲ ನೀಡಿದರು. ಇದೇ ವೇಳೆ ಸಿಎಂ ಯಡಿಯೂರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸಂಕ್ರಾಂತಿ ಶುಭಾಶಯ ಕೋರಿದರು. ಅಲ್ಲದೆ ಸಚಿವ ಸಂಪುಟ … Read more

ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಅದ್ಧೂರಿ ಮಕರ ಸಂಕ್ರಮಣ, ಹೇಗಿತ್ತು ಪೂಜೆ? ಏನೇನೆಲ್ಲ ಆಚರಣೆಗಳು ನಡೆದವು?

ಶಿವಮೊಗ್ಗ ಲೈವ್.ಕಾಂ | THIRTHAHALLI | 15 ಜನವರಿ 2020 ಬೆಜವಳ್ಳಿಯ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಮಕರ ಸಂಕ್ರಾಂತಿ ಉತ್ಸವ ಅದ್ದೂರಿಯಾಗಿ ನಡೆಯಿತು. ಅಯ್ಯಪ್ಪ ಸ್ವಾಮಿಗೆ ಆಭರಣ ಹಾಗೂ ಗಣ ಪರಿವಾರ ದೈವಗಳ ಸಮೇತ ಪಟ್ಟದ ಆಯುಧಗಳ ಉತ್ಸವ ಗುರುಮನೆಯಿಂದ ಹೊರತರುತ್ತಿದ್ದಂತೆ ಆಗಸದಲ್ಲಿ ಗರುಡ ಪಕ್ಷಿಗಳ ದರ್ಶನವಾಯಿತು. ಈ ವೇಳೆ ಅಯ್ಯಪ್ಪ ಭಕ್ತರಿಂದ ದೇವರ ಸ್ಮರಣೆ ನಡೆಯಿತು. ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ಆಭರಣವನ್ನು ದೇವರ ಸನ್ನಿಧಾನಕ್ಕೆ ತರಲಾಯಿತು. ಮುಂಜಾನೆ ಗಣಪತಿ ಪೂಜೆಯೊಂದಿಗೆ … Read more

ಶಿವಮೊಗ್ಗ ಜನಶತಾಬ್ದಿಗೆ ಇನ್ಮುಂದೆ ಮತ್ತೊಂದು ಹೊಸ ಸ್ಟಾಪ್, ಒಂದೇ ನಿಮಿಷ ನಿಲುಗಡೆ, ಇದು ಆರು ತಿಂಗಳ ಪ್ರಾಯೋಗಿಕ ಪ್ರಯತ್ನ

ಶಿವಮೊಗ್ಗ ಲೈವ್.ಕಾಂ | SHIMOGA | 15 ಜನವರಿ 2020 ಇನ್ಮುಂದೆ ಶಿವಮೊಗ್ಗ ಯಶವಂತಪುರ ಜನಶತಾಬ್ದಿ ರೈಲು ಮತ್ತೊಂದು ಸ್ಟಾಪ್ ಕೊಡಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬಹು ಬೇಡಿಕೆ ಹಿನ್ನೆಲೆಯಲ್ಲಿ ಒಂದು ನಿಮಿಷ ಸ್ಟಾಪ್ ನೀಡಲಾಗುತ್ತಿದೆ. ಶಿವಮೊಗ್ಗದಿಂದ ಹೊರಡುವ ಜನಶತಾಬ್ದಿ ರೈಲು ತರಿಕೆರೆಯಲ್ಲಿ ಒಂದು ನಿಮಿಷ ನಿಲುಗಡೆ ಕೊಡಲಾಗುತ್ತದೆ. ಜನವರಿ 15ರಿಂದಲೇ ನಿಲುಗಡೆ ಇರಲಿದೆ. ಆರು ತಿಂಗಳು ಪ್ರಾಯೋಗಿಕ ನಿಲುಗಡೆ ಕೊಡಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಬೆಳಗ್ಗೆ ಶಿವಮೊಗ್ಗದಿಂದ ಹೊರಡುವ ರೈಲು ತರೀಕೆರೆಗೆ … Read more

ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

ಶಿವಮೊಗ್ಗ ಲೈವ್.ಕಾಂ | SHIMOGA | 14 ಜನವರಿ 2020 ಸ್ಮಾರ್ಟ್ ಸಿಟಿ ಯೋಜನೆಗಾಗಿ ಮಸೋಯಿಚ್ಛೆ ಮರಗಳನ್ನು ಕಡಿಯಲಾಗುತ್ತಿದೆ. ಇದಕ್ಕೆ ಅನುಮತಿ ನೀಡುತ್ತಿರುವ ವಲಯ ಅರಣ್ಯಾಧಿಕಾರಿಯನ್ನು ಕೂಡಲೇ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ವತಿಯಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ಸಾಗರ ರಸ್ತೆಯ ಪ್ರವಾಸಿ ಮಂದಿರದ ಮುಂದೆ ಮರ ಕಡಿಯಲು ಅನುಮತಿ ನೀಡಲಾಗಿತ್ತು. ಆದರೆ ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಕಾರ್ಯಕರ್ತರು, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರೆಂಬೆ ಕತ್ತರಿಸಿದ ಮರದ ಕೆಳಗೆ ಉಪವಾಸ … Read more

ಶಿವಮೊಗ್ಗದಲ್ಲಿ ಸಡಗರದ ಸಂಕ್ರಾಂತಿ, ಎಳ್ಳು ಬೆಲ್ಲ ಹಂಚಿದ ವಿದ್ಯಾರ್ಥಿನಿಯರು, ಸುಗ್ಗಿ ಹಬ್ಬಕ್ಕೆ ಡಾನ್ಸ್ ಮಾಡಿ ಸಂಭ್ರಮ

ಶಿವಮೊಗ್ಗ ಲೈವ್.ಕಾಂ | SHIMOGA | 14 ಜನವರಿ 2020 ಶಿವಮೊಗ್ಗದಲ್ಲಿ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಶಿ ಪೂಜೆ ಸಲ್ಲಿಸಿ, ಹಬ್ಬ ಆಚರಿಸಲಾಯಿತು. ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಪು ತೊಟ್ಟು ಬಂದಿದ್ದರು. ಕಾಲೇಜು ಆವರಣದಲ್ಲಿ ಸಂಕ್ರಾಂತಿ ಆಚಾರಣೆಗಾಗಿ ರಂಗೋಲಿ ಹಾಕಲಾಗಿತ್ತು. ನವಧಾನ್ಯಗಳ ರಾಶಿ ಹಾಕಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಸಹ್ಯಾದ್ರಿ ಕಾಲೇಜು ಪ್ರಾಧ್ಯಾಪಕಿ ಡಾ.ಶುಭಾ ಮರವಂತೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ದೂರದರ್ಶನ, ಆಕಾಶವಾಣಿಯ ನಿರೂಪಕಿ … Read more

MLAಯನ್ನು ಬಂಧಿಸುವಂತೆ ಶಿವಮೊಗ್ಗ ಡಿಸಿ ಆಫೀಸ್ ಮುಂದೆ ಪ್ರತಿಭಟನೆ ಮಾಡುತ್ತಿದ್ದವರೇ ವಶಕ್ಕೆ

ಶಿವಮೊಗ್ಗ ಲೈವ್.ಕಾಂ | SHIMOGA | 14 ಜನವರಿ 2020 ಶಾಸಕ ಸೋಮಶೇಖರ ರೆಡ್ಡಿ ಬಂಧಿಸುವಂತೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಕಾರ್ಯಕರ್ತರನ್ನೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಯಿತು. ಪ್ರತಿಭಟನೆಗೇನು ಕಾರಣ? ಅಲ್ಪಸಂಖ್ಯಾತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ, ಶಾಂತಿ, ಸೌಹಾರ್ದತೆ ಕದಡುತ್ತಿರುವ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಅವರನ್ನು, ಕೂಡಲೆ ಬಂಧಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ … Read more

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮುಂದೆ ಚರಂಡಿಯಲ್ಲಿ ವ್ಯಕ್ತಿಯ ಶವ ಪತ್ತೆ

140120 Unknown Body Found in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 14 ಜನವರಿ 2020 ಶಿವಮೊಗ್ಗ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಮುಂದೆ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ರಸ್ತೆಯಲ್ಲಿ ಹೋಗುವವರು ಮೃತದೇಹ ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತನ ಹೆಸರು, ಗುರುತು ಪತ್ತೆಯಾಗಿಲ್ಲ. ಡಿಸಿಸಿ ಬ್ಯಾಂಕ್ ಮುಂದಿರುವ ಕಟ್ಟೆ ಮೇಲೆ ರಾತ್ರಿ ಮಲಗಿದ್ದಾಗ, ಆಯಾತಪ್ಪಿ ಚರಂಡಿಗೆ ಬಿದ್ದಿರುವ ಶಂಕೆ ಇದೆ. ಚರಂಡಿ ನೀರಿನಲ್ಲಿ ಉಸಿರುಗಟ್ಟಿ ಮೃತಪಟ್ಟಿರುವ ಕುರಿತು ಪೊಲೀಸರಿಗೆ ಅನುಮಾನವಿದೆ. ಸದ್ಯ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಜಯನಗರ ಠಾಣೆ … Read more

ಶಿವಮೊಗ್ಗದ ಸಾಗರ ರೋಡ್’ನಲ್ಲಿ ದಿಢೀರ್ ಧರಣಿ, ರೆಂಬೆ ಕತ್ತರಿಸಿದವರಿಗೆ ವಾರ್ನಿಂಗ್

ಶಿವಮೊಗ್ಗ ಲೈವ್.ಕಾಂ | SHIMOGA | 12 ಜನವರಿ 2020 ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ಮರ ಕಡಿಯಲು ಯತ್ನಿಸಿದ್ದ ಅಧಿಕಾರಿಗಳ ವಿರುದ್ಧ ಶಿವಮೊಗ್ಗದಲ್ಲಿ ಪರಿಸರ ಪ್ರೇಮಿಗಳು ಪ್ರತಿಭಟನೆ ನಡೆಸಿದರು. ಅಗತ್ಯವಿಲ್ಲದಿದ್ದರೂ ಮರಗಳನ್ನು ಕಡಿಯುತ್ತಿರುವುದಕ್ಕೆ ವಿರೋಧ ವ್ಯಕ್ತವಾಯಿತು. ಶಿವಮೊಗ್ಗದ ಸಾಗರ ರಸ್ತೆಯ ಪ್ರವಾಸಿ ಮಂದಿರ ಮುಂಭಾಗ ಮರ ಕಡಿಯಲು ನಿರ್ಧರಸಲಾಗಿತ್ತು. ಇವತ್ತು ಬೆಳಗ್ಗೆ ಬೃಹತ್ ಮರವೊಂದರ ರೆಂಬೆ ಕತ್ತರಿಸಲಾಗುತ್ತಿತ್ತು. ಇದನ್ನು ಗಮನಿಸಿದ ಪರಿಸರ ಪ್ರೇಮಿಗಳು ಮರ ಕಡಿಯುವುದನ್ನು ನಿಲ್ಲಿಸುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪದಿದ್ದಾಗ ದಿಢೀರ್ ಧರಣಿ ನಡೆಸಿದರು. … Read more

ಶಿವಮೊಗ್ಗ ದುರ್ಗಿಗುಡಿ ಸ್ಕೂಲ್’ನಲ್ಲಿ ಕುರುಬರ ಸಂಘದ ಎಲೆಕ್ಷನ್, ಮತದಾನ ಶಾಂತಿಯುತ

ಶಿವಮೊಗ್ಗ ಲೈವ್.ಕಾಂ | SHIMOGA | 12 ಜನವರಿ 2020 ಕುರುಬರ ಸಂಘದ ರಾಜ್ಯ ನಿರ್ದೇಶಕರ ಸ್ಥಾನಕ್ಕೆ ಇವತ್ತು ಚುನಾವಣೆ ನಡೆಯುತ್ತಿದೆ. ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುತ್ತಿದೆ. ದುರ್ಗಿಗುಡಿ ಸರ್ಕಾರಿ ಶಾಲೆ ಆವರಣದಲ್ಲಿ 9 ಬೂತ್’ಗಳಲ್ಲಿ ಚುನಾವಣೆ ನಡೆಯುತ್ತಿದೆ. ಬೆಳಗ್ಗೆಯಿಂದಲು ಜಿಲ್ಲೆಯ ವಿವಿಧೆಡೆಯ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶಿವಮೊಗ್ಗದಿಂದ ನಾಲ್ಕು ನಿರ್ದೇಶಕರ ಆಯ್ಕೆ ನಡೆಯಲಿದೆ. ಒಟ್ಟು ಇಬ್ಬರು ಮಹಿಳಾ ಸ್ಪರ್ಧಿಗಳು ಸೇರಿದಂತೆ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸುಮಾರು ಆರು ಸಾವಿರ ಮತದಾರರು ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. … Read more

ಹಿಂದಿನ ಡಿಸಿ ವಿರುದ್ಧ ಮಾನನಷ್ಟ ಕೇಸ್, ಒಂದು ರುಪಾಯಿ ಪರಿಹಾರ ಕೊಡುವಂತೆ ಕೋರ್ಟ್ ಸೂಚನೆ, ಕಾರಣವೇನು ಗೊತ್ತಾ?

Shivamogga-Court-General-Image

ಶಿವಮೊಗ್ಗ ಲೈವ್.ಕಾಂ | SHIMOGA | 12 ಜನವರಿ 2020 ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಒಂದು ರೂಪಾಯಿ ನೀಡಬೇಕು ಎಂದು ಹಿಂದಿನ ಜಿಲ್ಲಾಧಿಕಾರಿ, ಕೆಪಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್‌ಗೆ ಇಲ್ಲಿನ ಮೂರನೇ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ. ಪೊನ್ನುರಾಜ್ 2011ರಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಆಗಿದ್ದ ವೇಳೆ ಕಂದಾಯ ಇಲಾಖೆ ನಿವೃತ್ತ ನೌಕರ ವಿನೋಬನಗರದ ಕೆ.ಶಿವಪ್ಪ ಮಾನನಷ್ಟ ಮೊಕದ್ದಮೆ ದಾಖಲಿಸಿ, ಒಂದು ರೂ. ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಸತೀಶ್, 60 ದಿನಗಳಲ್ಲಿ ಕೆ.ಶಿವಪ್ಪ ಅವರಿಗೆ … Read more