ಶಿವಮೊಗ್ಗ ಪಾಲಿಕೆ ಅಧಿಕಾರಿಗೆ ಶಾಕ್ ಕೊಟ್ಟ ವಾಟ್ಸಾಪ್ ಕಾಲ್, ಏನಿದು ಪ್ರಕರಣ?

Shimoga-Mahanagara-Palike-ambedkar-statue

ಶಿವಮೊಗ್ಗ: ಲೋಕಾಯುಕ್ತ ಇನ್‌ಸ್ಪೆಕ್ಟರ್ (Inspector) ಹೆಸರಿನಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರಿಗೆ ಕರೆ ಮಾಡಿ, ಭ್ರಷ್ಟಾಚಾರದ ಆರೋಪ ಹೊರಿಸುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯ ಸಹಾಯಕ ಕಂದಾಯ ಅಧಿಕಾರಿ ರಂಗಸ್ವಾಮಿ.ಎಸ್.ಕೆ ಎಂಬುವವರು ದೂರು ನೀಡಿದ್ದಾರೆ. ಫೆಬ್ರವರಿ 2 ರಂದು ರಂಗಸ್ವಾಮಿ ಅವರು ಕಚೇರಿಯಲ್ಲಿದ್ದಾಗ ಅವರ ಮೊಬೈಲ್‌ಗೆ ಅಪರಿಚಿತ ನಂಬರ್‌ನಿಂದ ವಾಟ್ಸಾಪ್ ವಾಯ್ಸ್ ಕಾಲ್ ಬಂದಿತ್ತು. ಆ ನಂಬರ್‌ನ ಪ್ರೊಫೈಲ್‌ನಲ್ಲಿ LOKAYUKTA RAVIPRAKASH C.I KSP ಎಂಬ ಹೆಸರಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. … Read more

ಮತ್ತೆ ಕೈಕೊಟ್ಟ ಲೈಟುಗಳು, ವಾರ ಕಳೆದರು ಇತ್ತ ಮುಖ ಮಾಡದ ಅಧಿಕಾರಿಗಳು

No lights in Savalanga Road underpass

ಶಿವಮೊಗ್ಗ: ಸವಳಂಗ ರಸ್ತೆಯ ಉಷಾ ನರ್ಸಿಂಗ್‌ ಹೋಂ ಸಮೀಪದ ಫ್ಲೈವರ್‌ನ ಅಂಡರ್‌ಪಾಸ್‌ನಲ್ಲಿ (Underpass) ಮತ್ತೆ ವಿದ್ಯುತ್‌ ದೀಪಗಳು ಹಾಳಾಗಿವೆ. ಈ ಬಾರಿ ಲೈಟ್‌ಗಳು ಬೆಳಗದೆ ಒಂದು ವಾರ ಕಳೆದರು ಅಧಿಕಾರಿಗಳು ಇತ್ತ ಮುಖ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ » ಅಡಿಕೆ ಸುಲಿಯಲು ಬಂದಿದ್ದ ಕಾರ್ಮಿಕನಿಂದ ಮಾಲೀಕರ ಬೊಲೆರೋ ವಾಹನ ಕಳ್ಳತನ ಅಂಡರ್‌ ಪಾಸ್‌ನಲ್ಲಿ ಲೈಟ್‌ ಇಲ್ಲದೆ ಜನ ಓಡಾಡುವುದಕ್ಕೆ ಆತಂಕ ಪಡುತ್ತಿದ್ದಾರೆ. ಉಷಾ ನರ್ಸಿಂಗ್‌ ಹೋಂ ಕಡೆಯಿಂದ ಅಂಡರ್‌ಪಾಸ್‌ಗೆ ಹೋಗುವ ಎಡ ಬದಿಯಲ್ಲಿ ವಿದ್ಯುತ್‌ … Read more