ಶಿವಮೊಗ್ಗ ಫ್ರೀಡಂ ಪಾರ್ಕ್‌ನಲ್ಲಿ ಕರಕುಶಲ ಉತ್ಸವ, ಸಿರಿಧಾನ್ಯ ಮೇಳ, ಫಲಪುಷ್ಪ ಪ್ರದರ್ಶನ, ಏನೇನಿದೆ?

Crafts-mela-and-flower-show-in-shimoga

ಶಿವಮೊಗ್ಗ: ನಗರದ ಫ್ರೀಡಂ ಪಾರ್ಕ್‌ನಲ್ಲಿ ಮಲೆನಾಡ ಕರಕುಶಲ ಉತ್ಸವ, ಸಿರಿಧಾನ್ಯ ಮೇಳ, ಪುಷ್ಪಸಿರಿ ಫಲಪುಷ್ಟ ಪ್ರದರ್ಶನಕ್ಕೆ (Flower Show) ಆರಂಭವಾಗಿದೆ. ಇಂದಿನಿಂದ ಜನವರಿ 27ವರೆಗೆ ಈ ಮೇಳ ಇರಲಿದೆ. ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಜಿಲ್ಲಾ ಉದ್ಯಾನ ಕಲಾ ಸಂಘದ ವತಿಯಿಂದ ಮೇಳ ಆಯೋಜಿಸಲಾಗಿದೆ. ಮೊದಲ ದಿನವೇ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೇಳದಲ್ಲಿ ಏನೇನಿದೆ? ಹೂಗಳಿಂದ ಅಲಂಕೃತವಾದ ನಮ್ಮ ಶಿವಮೊಗ್ಗ ಸೆಲ್ಫಿ ಪಾಯಿಂಟ್‌, ಶಿವಪ್ಪನಾಯಕನ ಪ್ರತಿಮೆ, ಬಳ್ಳಿಗಾವಿಯ ಕೇದಾರೇಶ್ವರ ದೇವಸ್ಥಾನ, ಜೋಗ ಜಲಪಾತ ಗಮನ ಸೆಳೆಯುತ್ತಿವೆ. … Read more