ಕೈದಿ ಭೇಟಿಗೆ ಬಂದ ವ್ಯಕ್ತಿ ತಂದಿದ್ದ ಟವಲ್ ಚೆಕ್ ಮಾಡಿದ ಭದ್ರತಾ ಸಿಬ್ಬಂದಿಗೆ ಶಾಕ್, ಏನಿತ್ತು ಟವಲ್ನಲ್ಲಿ?
ಶಿವಮೊಗ್ಗ: ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿರುವ ಕೈದಿಯ ಭೇಟಿಗೆ ಬಂದಿದ್ದ ವ್ಯಕ್ತಿಯೊಬ್ಬ ಟವಲ್ನಲ್ಲಿ (towel) ಗಾಂಜಾ ಅಡಗಿಸಿ ಜೈಲಿನೊಳಗೆ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಫೆಬ್ರವರಿ 13ರ ಸಂಜೆ ಘಟನೆ ನಡೆದಿದೆ. ಕೈದಿ ಮಹ್ಮದ್ ಅಫ್ಜಲ್ ಭೇಟಿಗೆ ಭದ್ರಾವತಿಯ ಹೊಸೂರು ನಿವಾಸಿ ಅಬ್ದುಲ್ ರಜಾಕ್ ಎಂಬಾತ ಬಂದಿದ್ದ. ಕಾರಾಗೃಹದ ಆಕ್ಸೆಸ್ ಕಂಟ್ರೋಲ್ ಪಾಯಿಂಟ್ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ, ಅಬ್ದುಲ್ ರಜಾಕ್, ಕೈದಿ ಮಹ್ಮದ್ ಅಫ್ಜಲ್ಗೆ ಕೊಡಲು ತಂದಿದ್ದ ಬಟ್ಟೆಗಳ ತಪಾಸಣೆ ನಡೆಸಿದರು. ಒಂದು ಟವಲ್ನ ಪಟ್ಟಿಯಲ್ಲಿ ಅನುಮಾನಾಸ್ಪದ ವಸ್ತು ಇರುವುದು ಕಂಡುಬಂದಿದೆ. … Read more