ಅಡಿಕೆ ಬೆಳೆಗಾರರ ಗಮನಕ್ಕೆ, ಭದ್ರಾವತಿ ಆಕಾಶವಾಣಿಯಿಂದ ಫೋನ್‌ ಇನ್‌, ಯಾವಾಗ?

111023-Bhadravathi-Radio-FM-Radio.webp

ಭದ್ರಾವತಿ: ಸೆಪ್ಟೆಂಬರ್‌ 2 ರಂದು ಸಂಜೆ 6.51 ರಿಂದ 7.30ರವರೆಗೆ ‘ಹಲೋ ಆಕಾಶವಾಣಿʼ ನೇರ ಫೋನ್ ಇನ್ (Phone In) ಕಾರ್ಯಕ್ರಮ ಆಕಾಶವಾಣಿ ಭದ್ರಾವತಿಯಿಂದ ಪ್ರಸಾರವಾಗಲಿದೆ. ಅಡಕೆ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ಸಂಪನ್ಮೂಲ ವ್ಯಕ್ತಿ ನರಸಿಂಹರಾಜಪುರ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ರೋಹಿತ್ ಎಮ್. ಜಿ ಅವರು ಫೋನ್ ಇನ್ ನೇರ ಪ್ರಸಾರದಲ್ಲಿ ಮಾಹಿತಿ ನೀಡುತ್ತಾರೆ. ಫೋನ್ ಮಾಡಲು ದೂರವಾಣಿ ಸಂಖ್ಯೆ: 08282-270282, 270283 (ವಾಟ್ಸಪ್ ಮೆಸೆಜ್ ಮಾಡಲು ದೂರವಾಣಿ ಸಂಖ್ಯೆ: 9481572600). … Read more

ಕಾರಿನಲ್ಲಿ ಬಂದು ಹೆದ್ದಾರಿಯಲ್ಲಿ ಕ್ಯಾಂಟರ್‌ ಲಾರಿ ಅಡ್ಡಗಟ್ಟಿ ₹4 ಲಕ್ಷಕ್ಕೆ ಡಿಮಾಂಡ್‌, ಡ್ರೈವರ್‌ ಮೇಲೆ ಹಲ್ಲೆ

Police-Van-Jeep-at-Shimoga-Nehru-Road

ಸೊರಬ: ಅಕ್ಕಿ ಸಾಗಿಸುತ್ತಿದ್ದ ಕ್ಯಾಂಟರ್‌ ಲಾರಿಯನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿ, ₹4 ಲಕ್ಷಕ್ಕೆ ಬೇಡಿಕೆ ಇಡಲಾಗಿದೆ. ಸೊರಬ ತಾಲೂಕು ಬಿಳುವಾಣಿ ಮತ್ತು ಗೇರುಕೊಪ್ಪ ಮಧ್ಯೆ ಘಟನೆ ನಡೆದಿದೆ. ಕ್ಯಾಂಟರ್‌ ಚಾಲಕ ಉಮೇಶ್‌ ಮೇಲೆ ಹಲ್ಲೆ ನಡೆಸಲಾಗಿದೆ. ಎರಡು ಕಾರುಗಳಲ್ಲಿ ಬಂದ 9 ಮಂದಿ ಕ್ಯಾಂಟರ್‌ ಲಾರಿಯನ್ನು ಅಡ್ಡಗಟ್ಟಿದ್ದರು. ₹4 ಲಕ್ಷ ಹಣ ಕೊಡಿಸುವಂತೆ ತಿಳಿಸಿದ್ದರು. ಅಲ್ಲದೆ ಚಾಲಕ ಉಮೇಶ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಚಾಲಕ ತಪ್ಪಿಸಿಕೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಸಂಬಂಧ … Read more

ಶಿವಮೊಗ್ಗದ ಒಂದು ಕಾರಿಗೆ ₹88,500 ದಂಡ, ಎಷ್ಟು ಕೇಸ್‌ ಇತ್ತು? ಪಾವತಿಸಿದ್ದೆಷ್ಟು?

Traffic-Police-standing-in-front-of-police-jeep

ಶಿವಮೊಗ್ಗ: ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಕಾರೊಂದಕ್ಕೆ (Car) ₹88,500 ದಂಡ ವಿಧಿಸಲಾಗಿದೆ. ರಿಯಾಯಿತಿ ದರದ ಅವಕಾಶ ಪಡೆದ ಕಾರು ಚಾಲಕ ಈಗ ಅರ್ಧ ಮೊತ್ತದ ದಂಡ ಪಾವತಿಸಿದ್ದಾರೆ. ಶಿವಮೊಗ್ಗ ನೋಂದಣಿಯ ಕಾರೊಂದರ ವಿರುದ್ಧ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ 44 ಪ್ರಕರಣಗಳಿದ್ದವು. ಒಟ್ಟು ₹88,500 ದಂಡ ಪಾವತಿಸಬೇಕಿತ್ತು. ಸರ್ಕಾರ ಘೋಷಿಸಿರುವ ರಿಯಾಯಿತಿ ದರದ ಅವಕಾಶ ಪಡೆದ ಕಾರು ಮಾಲೀಕ ₹44,250 ದಂಡ ಪಾವತಿಸಿದ್ದಾರೆ. ಸಿಗ್ನಲ್‌ ಜಂಪ್‌, ಅತಿ ವೇಗದ ಚಾಲನೆ, ಕಾರು ಚಾಲನೆ ವೇಳೆ ಮೊಬೈಲ್‌ ಬಳಕೆ ಸೇರಿದಂತೆ … Read more

ತೀರ್ಥಹಳ್ಳಿಯ ವ್ಯಕ್ತಿಗೆ 20 ವರ್ಷ ಜೈಲು, ₹75,000 ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಏನಿದು ಪ್ರಕರಣ?

Shivamogga-Court-Balaraja-Urs-Road

ಶಿವಮೊಗ್ಗ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ದೃಢಪಟ್ಟ ಹಿನ್ನೆಲೆ ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ (Jail) ವಾಸ, 75 ಸಾವಿರ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಬಾಲಕಿಗೆ 4 ಲಕ್ಷ ರೂ. ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ತೀರ್ಥಹಳ್ಳಿ ತಾಲೂಕಿನ ವ್ಯಕ್ತಿಯೊಬ್ಬ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು 17 ವರ್ಷದ ಅಪ್ರಾಪ್ತೆ ನೀಡಿದ ದೂರಿನ ಮೇರೆಗೆ ಆತನ ವಿರುದ್ಧ … Read more

ಶಿವಮೊಗ್ಗದಲ್ಲಿ ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ, ದಾಖಲಾಯ್ತು FIR, ಯಾರ ವಿರುದ್ಧ? ಈತನಕ ಏನಾಯ್ತು?

Mc-gann-hospital-mother-and-child-ward

ಓದುಗರ ಗಮನಕ್ಕೆ: ಅಪ್ರಾಪ್ತರ (Student) ಪ್ರಕರಣ ಆಗಿರುವುದರಿಂದ ಅವರ ಹೆಸರು, ವಿಳಾಸ ಮತ್ತು ಗುರುತು ಬಹಿರಂಗ ಆಗುವಂತಹ ಯಾವುದೇ ಮಾಹಿತಿ ಪ್ರಕಟಿಸುವಂತಿಲ್ಲ. ಆದ್ದರಿಂದ ಈ ಸುದ್ದಿಯಲ್ಲಿ ಅಂತಹ ಯಾವುದೇ ಅಂಶಗಳಿಲ್ಲ. ಶಿವಮೊಗ್ಗ: 9ನೇ ತರಗತಿ ವಿದ್ಯಾರ್ಥಿನಿ ಮಗುವಿನ ಜನ್ಮ ನೀಡಿದ ಪ್ರಕರಣ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ವಿದ್ಯಾರ್ಥಿನಿಯ ಸಹೋದರನ ವಿರುದ್ಧವೇ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಪ್ರಕರಣದ ಕುರಿತು ಇಲ್ಲಿದೆ ಪ್ರಮುಖಾಂಶ ಇದನ್ನೂ ಓದಿ » ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ … Read more

ಭದ್ರಾ ನದಿಗೆ ರೈತರಿಂದ ಬಾಗಿನ, ರೈತ ಸಂಘದ ರಾಜ್ಯಾಧ್ಯಕ್ಷರಿಂದ ರೈತರು, ಸರ್ಕಾರಕ್ಕೆ 3 ಪಾಯಿಂಟ್‌ ಸೂಚನೆ

Bagina-to-Bhadra-river-by-HR-Basavarajappa

ಭದ್ರಾವತಿ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಹೆಚ್‌.ಆರ್.ಬಸವರಾಜಪ್ಪ ನೇತೃತ್ವದಲ್ಲಿ ರೈತರು ಭದ್ರಾ ನದಿಗೆ (Bhadra River) ಭಾನುವಾರ ಬಾಗಿನ ಅರ್ಪಿಸಿದರು.  ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಏನಿದೆ ಅಲರ್ಟ್‌? ಇಲ್ಲಿದೆ ರಿಪೋರ್ಟ್‌ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಹಿಟ್ಟೂರು ರಾಜು, ಪ್ರಮುಖರಾದ ಟಿ.ಎಂ. ಚಂದ್ರಪ್ಪ, ಮುನಿಯಪ್ಪ, ಚಿಕ್ಕಬ್ಬಿಗೆರೆ ನಾಗರಾಜ್, ಭಾಗ್ಯಾ ರಾಘವೇಂದ್ರ, ಮರುಳಸಿದ್ದಯ್ಯ, ಮಲ್ಲಿಕಾರ್ಜುನ, ಕುಮಾರಯ್ಯ, ಪುಷ್ಪಾ, ಕೆ. ರಾಘವೇಂದ್ರ, ಹುಲಿಮಟ್ಟಿ ಜಯಣ್ಣ, ಪಿ.ಶೇಖರಪ್ಪ, ಎಂ.ಡಿ. ನಾಗರಾಜ್, ಜಿ.ಎನ್. ಪಂಚಾಕ್ಷರಿ, ಉಪಾಧ್ಯಕ್ಷ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಏನಿದೆ ಅಲರ್ಟ್‌? ಇಲ್ಲಿದೆ ರಿಪೋರ್ಟ್‌

WEATHER-REPORT-SHIMOGA-

ಹವಾಮಾನ ವರದಿ: ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿದೆ. ಶಿವಮೊಗ್ಗದಲ್ಲಿಯು ಮಳೆ ಪ್ರಮಾಣ ತಗ್ಗಿದೆ. ಭಾನುವಾರ ಜಿಲ್ಲೆಯ ವಿವಿಧೆಡೆ ಕೆಲವು ಹೊತ್ತು ಜೋರು ಮಳೆಯಾಗಿದೆ. ಇಡೀ ದಿನ ಮೋಡ ಕವಿದ ವಾತಾವರಣ ಇತ್ತು. (Weather) ಇವತ್ತೂ ಶಿವಮೊಗ್ಗ ಜಿಲ್ಲೆಯಲ್ಲಿ ಅಲ್ಲಲ್ಲಿ ಕೆಲವು ಹೊತ್ತು ಸಾಧಾರಣದಿಂದ ಜೋರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಕರಾವಳಿ ಭಾಗಕ್ಕೆ ಯಲ್ಲೋ ಅಲರ್ಟ್‌ ಪ್ರಕಟವಾಗಿದೆ. ಕರಾವಳಿ ಜಿಲ್ಲೆಗಳೊಂದಿಗೆ ಹೊಂದಿಕೊಂಡಿರುವ ಶಿವಮೊಗ್ಗ ಜಿಲ್ಲೆಯ ಕೆಲವು ಭಾಗದಲ್ಲಿ ಮಳೆಯಾಗುವ ಅಂದಾಜಿದೆ. ಎಲ್ಲೆಲ್ಲಿ ಎಷ್ಟಿರುತ್ತೆ … Read more

ರಾಗಿಗುಡ್ಡದಲ್ಲಿ 17 ಗಣಪತಿಗಳ ಅದ್ಧೂರಿ ಮೆರವಣಿಗೆ, ಎಲ್ಲೆಲ್ಲೂ ಬಿಗಿ ಬಂದೋಬಸ್ತ್‌, ಹೇಗಿದೆ ರಾಜಬೀದಿ ಉತ್ಸವ?

Ragigudda-Ganesha-Procession

ಶಿವಮೊಗ್ಗ: ರಾಗಿಗುಡ್ಡದಲ್ಲಿ ಇವತ್ತು 17 ಗಣಪತಿಗಳ ಸಾಮೂಹಿಕ ವಿಸರ್ಜನೆ (Procession) ಮಾಡಲಾಗುತ್ತಿದೆ. ಇದಕ್ಕೂ ಮೊದಲು ವಿವಿಧ ರಸ್ತೆಗಳಲ್ಲಿ ಗಣಪತಿ ಮೂರ್ತಿಗಳ ಮೆರವಣಿಗೆ ನಡೆಯುತ್ತಿದೆ. ಈ ಹಿನ್ನೆಲೆ ರಾಗಿಗುಡ್ಡದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ರಾಗಿಗುಡ್ಡ – ಶಾಂತಿನಗರ ಬಡಾವಣೆಯ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ 17 ಗಣಪತಿಗಳನ್ನು ಇವತ್ತು ವಿಸರ್ಜನೆ ಮಾಡಲಾಗುತ್ತಿದೆ. ಪ್ರತಿ ರಸ್ತೆಯಿಂದ ಗಣಪತಿ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ವಿಸರ್ಜಿಸಲಾಗುತ್ತದೆ. ಮೆರವಣಿಗೆಯಲ್ಲಿ ವಿವಿಧ ವಾದ್ಯಗಳು, ಡೊಳ್ಳಿನ ಶಬ್ದಕ್ಕೆ ಯುವಕರು ಡಾನ್ಸ್‌ ಮಾಡುತ್ತಿದ್ದಾರೆ. ರಾಗಿಗುಡ್ಡ ಸೇರಿದಂತೆ ಸುತ್ತಮುತ್ತಲ ಬಡಾವಣೆಯ ನಿವಾಸಿಗಳೂ … Read more

ನವಿಲು, ಹುಲಿ ದತ್ತು ಪಡೆದ ಶಿವಮೊಗ್ಗದ ಕಾಲೇಜು, ಎಷ್ಟು ಅವಧಿಗೆ?

NES-Advanced-Studies-college-adopt-tiger

ಶಿವಮೊಗ್ಗ: ನಗರದ ಎನ್ಇಎಸ್ ಇನ್ಸ್‌ಟಿಟ್ಯೂಟ್‌ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜು ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿರುವ ಹುಲಿ ಮತ್ತು ನವಿಲನ್ನು ದತ್ತು ಪಡೆದಿದೆ. ಕಾಲೇಜಿನ ಸಭಾಂಗಣದಲ್ಲಿ ನಡೆದ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕಲ್ಯಾಣ ಸಮಿತಿಯ ವತಿಯಿಂದ ಹುಲಿ ಸಿಂಹಧಾಮದ ನಿರ್ದೇಶಕ ಬಿ.ಆರ್.ಅಮರಕ್ಷರ್ ಅವರಿಗೆ ಹಸ್ತಾಂತರಿಸಲಾಯಿತು. ಹುಲಿ ಸಿಂಹಧಾಮದಲ್ಲಿರುವ ಒಂದು ಹುಲಿಯನ್ನು ಒಂದು ತಿಂಗಳ ಅವಧಿಗೆ ಮತ್ತು ನವಿಲನ್ನು ಒಂದು ವರ್ಷದ ಅವಧಿಯ ನಿರ್ವಹಣೆ, ಆಹಾರ ಮತ್ತು ಆರೈಕೆಗಾಗಿ ನಿರ್ದಿಷ್ಟ ಮೊತ್ತವನ್ನು ಹಸ್ತಾಂತರ ಮಾಡಲಾಗಿದೆ. ಪರಿಸರ ಮತ್ತು ಮಾನವನ … Read more

ಭದ್ರಾವತಿಯಲ್ಲಿ ಚಿನ್ನಾಭರಣ ಕಳ್ಳತನ, ಬೆಂಗಳೂರು ಕೆಂಗೇರಿಯ ಮಹಿಳೆ ಸೇರಿ ಇಬ್ಬರ ಬಂಧನ

New-town-police-nab-two-from-kengeri

ಭದ್ರಾವತಿ: ಮನೆಯ ಬೀರುವಿನಲ್ಲಿದ್ದ 95 ಗ್ರಾಂ ಬಂಗಾರದ ಆಭರಣ ಕಳವು ಮಾಡಿದ್ದ ಇಬ್ಬರನ್ನು ಪೇಪರ್‌ ಟೌನ್‌ ಪೊಲೀಸರು ಬಂಧಿಸಿದ್ದಾರೆ (Arrest). ಇವರಿಂದ ₹7.82 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಕೆಂಗೇರಿ ನಿವಾಸಿ ಆರ್.ಮಂಜುಳಾ(21) ಮತ್ತು ಸುಜೈನ್ ಖಾನ್ (24 ) ಬಂಧಿತರು. ಕಳೆದ ಆ.18ರಂದು ಭದ್ರಾವತಿಯ ಐದನೇ ವಾರ್ಡ್‌ನ ಚಂದ್ರಮ್ಮ ಎಂಬುವರ ಮನೆಗೆ ಬಂದಿದ್ದ ಇವರು ಬೀರುವಿನಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದರು. ಈ ಬಗ್ಗೆ ಚಂದ್ರಮ್ಮ ಅವರು ಪೇಪರ್ ಟೌನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. … Read more