ಸಿಗಂದೂರು ರಸ್ತೆಯ ಆವಿನಹಳ್ಳಿ ಸರ್ಕಲ್ ಬಳಿ ಓಮ್ನಿ ಕಾರಿಗೆ ಡಿಕ್ಕಿ ಹೊಡೆದು ಪರಾರಿಯಾದ ವಾಹನ
ಸಾಗರ: ವಾಹನವೊಂದು ಓಮ್ನಿ ಕಾರಿಗೆ (CAR) ಡಿಕ್ಕಿ ಹೊಡೆದ ಪರಿಣಾಮ ಚಾಲಕ ಗಾಯಗೊಂಡಿದ್ದಾರೆ. ಸಾಗರ ತಾಲೂಕಿನ ಸಿಗಂದೂರ ರಸ್ತೆಯ ಆವಿನಹಳ್ಳಿ ಸರ್ಕಲ್ ಬಳಿ ಘಟನೆ ಸಂಭವಿಸಿದೆ. ಓಮ್ನಿ ಕಾರಿನಲ್ಲಿದ್ದ ಸಾಗರದ ಜಯಣ್ಣ (80) ಎಂಬುವವರು ಗಾಯಗೊಂಡಿದ್ದಾರೆ. ಅವರನ್ನು ಸಾಗರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತಪಡಿಸಿದ ವಾಹನದ ಚಾಲಕ ಘಟನೆ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಶಿವಮೊಗ್ಗ ಸಿಟಿ ಕೇಸರಿಮಯ, ಎಲ್ಲೆಲ್ಲಿ ಹೇಗಿದೆ ಅಲಂಕಾರ? … Read more