ಶೃಂಗೇರಿಯಲ್ಲಿ ತೀರ್ಥಹಳ್ಳಿ ಮೂಲದ ವಿದ್ಯಾರ್ಥಿನಿಗೆ ಹೃದಯಾಘಾತ, ಸಾವು
ಶೃಂಗೇರಿ: ಹೃದಯಾಘಾತದಿಂದ (heart attack) ವಿದ್ಯಾರ್ಥಿನಿಯೊಬ್ಬರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ತೀರ್ಥಹಳ್ಳಿ ಮೂಲದ ದಿಶಾ (22) ಮೃತರು. ತೀರ್ಥಹಳ್ಳಿಯ ಪಡುವಳ್ಳಿ ಗ್ರಾಮದ ದಿಶಾ, ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ. ಪದವಿ ವ್ಯಾಸಂಗ ಮಾಡುತ್ತಿದ್ದರು. ಶೃಂಗೇರಿಯ ಬಿಸಿಎಂ ಹಾಸ್ಟೆಲ್ನಲ್ಲಿ ಇದ್ದರು. ಇಂದು ಹಾಸ್ಟೆಲ್ನಲ್ಲಿ ದಿಶಾಗೆ ತೀವ್ರ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ » ವಿದ್ಯುತ್ ಗ್ರಿಡ್ನಿಂದ ಹಾರಿದ ಕಿಡಿಗೆ ಜಮೀನಿನಲ್ಲಿದ್ದ ಜೋಳ ಸಂಪೂರ್ಣ ಭಸ್ಮ