ಶಿವಮೊಗ್ಗದ ಉಪನೋಂದಣಾಧಕಾರಿ ಕಚೇರಿ ಸ್ಥಳಾಂತರ, ಇಲ್ಲಿದೆ ಹೊಸ ವಿಳಾಸ

Shimoga-News-update

ಶಿವಮೊಗ್ಗ: ಈವರೆಗೆ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಉಪನೋಂದಣಾಧಿಕಾರಿಗಳ ಕಚೇರಿಯು (Office) ಈಗ ಹೊಸ ವಿಳಾಸಕ್ಕೆ ಸ್ಥಳಾಂತರಗೊಂಡಿದೆ. ಸಾಗರ ರಸ್ತೆಯಲ್ಲಿರುವ ಎಪಿಎಂಸಿ ವಾಣಿಜ್ಯ ಸಂಕೀರ್ಣದ ಮೊದಲನೇ ಮಹಡಿಯಲ್ಲಿರುವ ಮಳಿಗೆ ಸಂಖ್ಯೆ 108 ಮತ್ತು 109ಕ್ಕೆ ಉಪ ನೋಂದಣಾಧಿಕಾರಿ ಕಚೇರಿ ಸ್ಥಳಾಂತರಗೊಂಡಿದೆ. ಹಿರಿಯ ಉಪನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುವಂತೆ, ಈ ಹೊಸ ಕಚೇರಿಯಲ್ಲಿ ಜೂನ್ 9ರಿಂದ ಕಾರ್ಯಾರಂಭ ಮಾಡಲಿದೆ. ಇದನ್ನೂ ಓದಿ » ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ, ಶಿವಮೊಗ್ಗದಲ್ಲಿ ಅಣ್ಣ, ತಮ್ಮನ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು

ವಿಧಾನಸಭೆಯಲ್ಲಿ ಶಿವಮೊಗ್ಗ ಉಪ ನೋಂದಣಾಧಿಕಾರಿ ಕಚೇರಿ ಕುರಿತು ಮಹತ್ವದ ಚರ್ಚೆ

MLA-Channabasappa-and-minister-Krishna-Byregowda

SHIVAMOGGA LIVE NEWS | 22 JULY 2024 SHIMOGA : ವಿನೋಬನಗರದಲ್ಲಿರುವ ಉಪ ನೋಂದಣಾಧಿಕಾರಿ (Sub Registrar) ಕಚೇರಿ ಸ್ಥಳಾಂತರ ವಿಚಾರ ಇವತ್ತು ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಯಾಯ್ತು. ಈ ಸಂಬಂಧ ಶಾಸಕ ಎಸ್‌.ಎನ್.ಚನ್ನಬಸಪ್ಪ ಸದನಲ್ಲಿ ಪ್ರಸ್ತಾಪಿಸಿದರು. ಚನ್ನಬಸಪ್ಪ ಪ್ರಸ್ತಾಪ ಮಾಡಿದ್ದೇನು? ಉಪ ನೋಂದಣಾಧಿಕಾರಿ ಕಚೇರಿ ಕಟ್ಟಡ ಅತ್ಯಂತ ಇಕ್ಕಟ್ಟಾಗಿದೆ. ಎಪಿಎಂಸಿ ಆವರಣಕ್ಕೆ ಅದನ್ನು ಸ್ಥಳಾಂತರ ಮಾಡಬೇಕು ಎಂದು ಬೆಳಗಾವಿ ಅಧಿವೇಶನದಲ್ಲಿಯೇ ಪ್ರಸ್ತಾಪಿಸಿದ್ದೆ. ಆದರೆ ಒಂದೂವರೆ ವರ್ಷವಾದರೂ ಸ್ಥಳಾಂತರವಾಗಿಲ್ಲ. ನಾಗರಿಕರ ಹಿತದೃಷ್ಟಿಯಿಂದ ಕೂಡಲೆ ಸ್ಥಳಾಂತರ ಮಾಡಿ ಎಂದು … Read more