ಶಿವಮೊಗ್ಗಕ್ಕೆ ಕೇಂದ್ರ ರಕ್ಷಣಾ ಸಚಿವೆ, ಸೆಲ್ಫಿಗೆ ಮುಗಿಬಿದ್ರು ಬಿಜೆಪಿ ಕಾರ್ಯಕರ್ತರು, ಸಮಾವೇಶದಲ್ಲಿ ಏನೆಲ್ಲ ಹೇಳಿದ್ರು ಗೊತ್ತಾ ಮಿನಿಸ್ಟರ್?
ಶಿವಮೊಗ್ಗ ಲೈವ್.ಕಾಂ | 15 ಏಪ್ರಿಲ್ 2019 ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರವಾಗಿ ಪ್ರಚಾರ ನಡೆಸಲು, ರಕ್ಷಣ ಸಚಿವೆ ನಿರ್ಮಲಾ ಸೀತಾರಾಮನ್ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಎನ್ಇಎಸ್ ಮೈದಾನದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಅವರು ಪಾಲ್ಗೊಂಡಿದ್ದರು. ಇಂದಿರಾ ಕಾಲದಿಂದಲೂ ಗರೀಭಿ ಹಠಾವೋ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಮೋದಿ ಅವರಂತಹ ಅಪರೂಪದ ಮಾಣಿಕ್ಯ ನಮಗೆ ಸಿಕ್ಕಿದೆ. ಅವರು ತಮ್ಮನ್ನು ಪ್ರಧಾನ ಮಂತ್ರಿ ಅನ್ನದೆ, ಪ್ರಧಾನ ಸೇವಕ ಎಂದು ಹೇಳಿಕೊಳ್ಳುತ್ತಿದ್ದಾರೆ. ಅಂತಹ ಮಾಣಿಕ್ಯವನ್ನು ಪ್ರಧಾನ ಮಂತ್ರಿಯಾಗಿ ಉಳಿಸಿಕೊಳ್ಳಬೇಕಿದೆ … Read more