ಶೋ ರೂಂನಲ್ಲಿ 2 ಐಫೋನ್’ಗಳು ನಾಪತ್ತೆ, ಸಿಸಿಟಿವಿಯಿಂದ ಹೊರಬಿತ್ತು ಸತ್ಯ

Reliance-Digital-Showroom-Shimoga

ಶಿವಮೊಗ್ಗ | ಶೋ ರೂಂನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಎರಡು ಐಫೋನ್ (iphone)ಮೊಬೈಲ್’ಗಳನ್ನು ಕಳವು ಮಾಡಲಾಗಿದೆ. ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿರುವ ರಿಲಾಯನ್ಸ್ ಡಿಜಿಟಲ್ ಶೋ ರೂಂನಲ್ಲಿ ಘಟನೆ ಸಂಭವಿಸಿದೆ. ಆಪಲ್ ಐಫೋನ್-12 ಕಳವು ಬೆಳಗ್ಗೆ 10.45ರ ಹೊರತ್ತಿಗೆ ಶೋ ರೂಂಗೆ ಬಂದಿದ್ದ ವ್ಯಕ್ತಿಯೊಬ್ಬ ಮೊಬೈಲ್ ಫೋನ್ ಪರಿಶೀಲನೆ ನಡೆಸುತ್ತಿದ್ದ. ಕೌಂಟರ್’ನಲ್ಲಿದ್ದ ಆಪಲ್ ಐ-ಫೋನ್ 12 (iphone) ಮಾಡೆಲ್’ನ ಎರಡು ಮೊಬೈಲ್’ಗಳನ್ನು ಕದ್ದು, ತಾನು ತಂದಿದ್ದ ಬ್ಯಾಗಿನಲ್ಲಿ ಹಾಕಿಕೊಂಡು ಹೋಗಿದ್ದಾನೆ. ಕಳ್ಳತನವಾದ … Read more

ಬೆಳಗಾಗುವುದರಲ್ಲಿ ಬೈಕ್ ನಾಪತ್ತೆ, ಡಿಕ್ಕಿಯಲ್ಲಿತ್ತು ನಾಲ್ಕು ಬ್ಯಾಂಕುಗಳ ಚೆಕ್ ಬುಕ್

bike theft reference image

ಶಿವಮೊಗ್ಗ | ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಲಾಗಿದೆ. ಆ ಬೈಕಿನ ಡಿಕ್ಕಿಯಲ್ಲಿ ನಾಲ್ಕು ಬ್ಯಾಂಕುಗಳ ಚೆಕ್ ಬುಕ್ (CHEQUE BOOK), ಪಾಸ್ ಬುಕ್ಕುಗಳಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ. ಎಲ್.ಬಿ.ಎಸ್ ನಗರದ ಪವನ್ ಎಂಬುವವರಿಗೆ ಸೇರಿದ ಸುಜೂಕಿ ಆಕ್ಸಿಸ್ ಬೈಕನ್ನು ಕಳ್ಳತನ ಮಾಡಲಾಗಿದೆ. ಜು.20ರಂದು ಕೆಲಸ ಮುಗಿಸಿ ರಾತ್ರಿ ಬೈಕನ್ನು ತಂದು ಮನೆ ಮುಂದೆ ನಿಲ್ಲಿಸಲಾಗಿತ್ತು. ಬೆಳಗ್ಗೆ ಬಂದು ನೋಡಿದಾಗ ಬೈಕ್ ಇರಲಿಲ್ಲ. ಬೈಕನ್ನು ಎಲ್ಲೆಡೆ ಹುಡುಕಾಡಿದ ಪವನ್ ಅವರು ಬಳಿಕ ವಿನೋಬನರ ಠಾಣೆಗೆ … Read more

ಬೆಳಗ್ಗೆ ಶಾಲೆಗೆ ಬಂದ ಶಿಕ್ಷಕರಿಗೆ ಕಾದಿತ್ತು ಶಾಕ್, ಮುಖ್ಯ ಶಿಕ್ಷಕಿಯಿಂದ ಪೊಲೀಸರಿಗೆ ದೂರು

crime name image

ಶಿವಮೊಗ್ಗ | ಶಾಲೆಯೊಂದರ ಕೊಠಡಿಗಳ ಮುಂದೆ ಅಳವಡಿಸಿದ್ದ ಕರೆಂಟ್ ವಯರ್’ಗಳನ್ನು (WIRE THEFT) ಕಳ್ಳರು ಕದ್ದೊಯ್ದಿದ್ದಾರೆ. ಈ ಸಂಬಂಧ ಶಾಲೆಯ ಮುಖ್ಯ ಶಿಕ್ಷಕಿ ದೂರು ನೀಡಿದ್ದಾರೆ. ನಗರದ ಕೆ.ಆರ್.ಪುರಂನ ಕೆಪಿಎಸ್ ಶಾಲೆಯಲ್ಲಿ ಘಟನೆ ಸಂಭವಿಸಿದೆ. ಭಾನುವಾರ ಶಾಲೆಗೆ ರೆಜೆ ಇತ್ತು. ಸೋಮವಾರ ಬೆಳಗ್ಗೆ ಶಾಲೆಗೆ ಬಂದು ನೋಡಿದಾಗ ವಯರ್ (WIRE THEFT) ಕಳ್ಳತನವಾಗಿರುವುದು ಗೊತ್ತಾಗಿದೆ. ಘಟನೆ ಕುರಿತು ಎಸ್.ಡಿ.ಎಂ.ಸಿ ಸದಸ್ಯರಿಗೆ ಮಾಹಿತಿ ನೀಡಿದ ಶಾಲೆ ಸಿಬ್ಬಂದಿ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸುಮಾರು 30 ಸಾವಿರ … Read more

ಕೂಲಿ ಕೆಲಸಕ್ಕೆ ಹೋದವರ ಮನೆಯಲ್ಲಿದ್ದ ಚಿನ್ನಾಭರಣ ನಾಪತ್ತೆ

theft case general image

ಸಾಗರ | ಕೂಲಿ ಕಾರ್ಮಿಕರೊಬ್ಬರ ಮನೆಗೆ ನುಗ್ಗಿರುವ ಕಳ್ಳರು ಚಿನ್ನಾಭರಣವನ್ನು ಕಳ್ಳತನ (THEFT) ಮಾಡಿದ್ದಾರೆ. ತಾಲೂಕಿನ ಬೊಮ್ಮತ್ತಿಯಲ್ಲಿನ ಕೂಲಿ ಕಾರ್ಮಿಕರ ಮನೆಯಲ್ಲಿ 70 ಸಾವಿರ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳ ಕಳವು ಮಾಡಲಾಗಿದ್ದು, ಈ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಬೊಮ್ಮತ್ತಿಯ ರಾಮಪ್ಪ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಬೀರುವಿನಲ್ಲಿ ಇಡಲಾಗಿದ್ದ 12 ಗ್ರಾಂ ತೂಕದ 4 ಜತೆ ಬಂಗಾರದ ಓಲೆ, 10 ಗ್ರಾಂ ತೂಕದ 2 ಜತೆ ಬೆಳ್ಳಿಯ ಗೆಜ್ಜೆಗಳನ್ನು ಕಳ್ಳತನ … Read more

ನಂಜಪ್ಪ ಆಸ್ಪತ್ರೆ ಬಳಿ ಬೈಕ್ ಕಳ್ಳತನ ಕೇಸ್, ಸಿಕ್ಕಿಬಿತ್ತು ‘ಬ್ರಹ್ಮಾಂಡ’ ಟೀಮ್

Bike-theives-arrest-in-Shimoga-Jayanagara-police-station.

SHIVAMOGGA LIVE NEWS | SHIMOGA | 26 ಜುಲೈ 2022 ಶಿವಮೊಗ್ಗದ ನಂಜಪ್ಪ ಆಸ್ಪತ್ರೆ ಹಿಂಭಾಗ ಬೈಕ್ ಕಳವು (BIKE THEFT) ಪ್ರಕರಣದ ತನಿಖೆ ನಡೆಸಿದ ಪೊಲೀಸರು ಅಪ್ರಾಪ್ತ ಸೇರಿ ಮೂವರನ್ನು ಬಂಧಿಸಿದ್ದಾರೆ. ಕಳ್ಳತನ ಮಾಡಿದ್ದ 10 ಬೈಕ್’ಗಳನ್ನು ವಶಕ್ಕೆ ಪಡೆದಿದ್ದಾರೆ. ಹೊಸಮನೆ ಬಡಾವಣೆಯ ರಾಹುಲ್ ಅಲಿಯಾಸ್ ಬ್ರಹ್ಮಾಂಡ (21), ಕಾಮಾಕ್ಷಿ ಬೀದಿಯ ಹರ್ಷ (18) ಮತ್ತು ಓರ್ವ ಅಪ್ರಾಪ್ತನನ್ನು ಬಂಧಿಸಲಾಗಿದೆ. ನಂಜಪ್ಪ ಆಸ್ಪತ್ರೆ ಹಿಂಭಾಗ ಬೈಕ್ ಕಳ್ಳತನವಾಗಿತ್ತು (BIKE THEFT). ಈ ಸಂಬಂಧ ಜಯನಗರ … Read more

ಬೀಗ ಹಾಕಿದ್ದ ಮನೆ ಮುಂದೆ ಬೆಳಗ್ಗೆ 4 ಗಂಟೆಗೆ ಅನುಮಾನಾಸ್ಪದ ವರ್ತನೆ, ಇಬ್ಬರು ಅರೆಸ್ಟ್

vinobanagara polic station and police jeep

SHIVAMOGGA LIVE NEWS | SHIMOGA | 20 ಜುಲೈ 2022 ಬೀಗ ಹಾಕಿದ ಮನೆಯೊಂದರ ಮುಂದೆ (HOUSE THEFT ATTEMPT) ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸಮರ್ಪಕ ಉತ್ತರ ನೀಡದ ಹಿನ್ನೆಲೆ ಬೆಂಗಳೂರಿನ (BANGALORE) ಓರ್ವ ಸೇರಿ ಇಬ್ಬರನ್ನು ಬಂಧಿಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಬೊಮ್ಮನಕಟ್ಟೆ ಜಿ ಬ್ಲಾಕ್’ನಲ್ಲಿ (BOMMANAKATTE) ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭ, ಇಬ್ಬರು ವ್ಯಕ್ತಿಗಳು ಬೀಗ ಹಾಕಿದ ಮನೆಯೊಂದರ ಮುಂದೆ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು. ಪೊಲೀಸರನ್ನು (POLICE) ಕಂಡು … Read more

ಅಂಗಡಿಯ ಗೋಡೆ ಕೊರೆದು ಕೆಜಿಗಟ್ಟಲೆ ಚಿನ್ನ, ಬೆಳ್ಳಿ ಆಭರಣಗಳು ಕಳವು, ಸಿಸಿಟಿವಿ ಹೊತ್ತೊಯ್ದ ಖದೀಮರು

Bhadravathi-Gold-Shop-theft-Channagiri-Road

SHIVAMOGGA LIVE NEWS | BHADRAVATHI | 11 ಜುಲೈ 2022 ಚಿನ್ನಾಭರಣದ ಅಂಗಡಿಯೊಂದಕ್ಕೆ (JEWELLERY SHOP) ಕನ್ನ ಕೊರೆದು ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಕಳವು (THEFT) ಮಾಡಲಾಗಿದೆ. ಗ್ಯಾಸ್ ಕಟರ್, ದೊಡ್ಡ ರಾಡ್ ಬಳಸಿ ಕನ್ನ ಹಾಕಲಾಗಿದೆ. ಭದ್ರಾವತಿಯ (BHADRAVATHI) ಚನ್ನಗಿರಿ ರಸ್ತೆಯಲ್ಲಿ ಇರುವ ಎಸ್.ಎಸ್.ಜ್ಯುವೆಲರ್ಸ್ ಚಿನ್ನಾಭರಣ ಮಳಿಗೆಯ ಕನ್ನ ಕರೆದು ಕಳವು ಮಾಡಲಾಗಿದೆ. ಕನ್ನ ಕೊರೆದ ಖದೀಮರು ಚಿನ್ನಾಭರಣ ಮಳಿಗೆಯ ಹಿಂಭಾಗದಲ್ಲಿ ಗೋಡೆ ಕೊರೆದು ಕಳ್ಳರು ಒಳ ನುಗ್ಗಿದ್ದಾರೆ. ಅಂದಾಜು 1.25 ಕೆ.ಜಿ. … Read more

ಹ್ಯಾಂಡಲ್ ಲಾಕ್ ಮಾಡಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಇಲ್ಲ

bike theft reference image

SHIVAMOGGA LIVE NEWS | SHIMOGA | 8 ಜುಲೈ 2022 ಶಿವಮೊಗ್ಗದಲ್ಲಿ ಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ಹ್ಯಾಂಡಲ್ ಲಾಕ್ ಮಾಡಿ, ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಡಿಯೋ ಬೈಕೊಂದನ್ನು ಕಳ್ಳರು ಕದ್ದೊಯ್ದಿದ್ದಾರೆ. ರೈಲ್ವೆ ನಿಲ್ದಾಣದ ಬಳಿ ಇರುವ ಅಮೀರ್ ಅಹಮದ್ ಕಾಲೋನಿಯ ಮೊಹಮದ್ ರಸೂಲ್ ಅವರಿಗೆ ಸೇರಿದ ಕಪ್ಪು ಡಿಯೋ ಬೈಕ್ ಕಳ್ಳತನವಾಗಿದೆ. ಜುಲೈ 1ರಂದು ಮೊಹಮದ್ ರಸೂಲ್ ಅವರು ಕೆಲಸ ಮುಗಿಸಿ ಬೈಕನ್ನು ತಂದು ಹ್ಯಾಂಡಲ್ ಲಾಕ್ ಮಾಡಿ ರಾತ್ರಿ ಮನೆ ಮುಂದೆ … Read more

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಚಾಕು ತೋರಿಸಿ ಬೆದರಿಕೆ, ಹಣ, ಮೊಬೈಲ್ ಕಸಿದ ದುಷ್ಕರ್ಮಿಗಳು

crime name image

SHIVAMOGGA LIVE NEWS | SHIMOGA | 8 ಜುಲೈ 2022 ದಾರಿ ಕೇಳುವ ನೆಪದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ನಂದಿನಿ ಹಾಲಿನ ಬೂತ್’ನ ಮಾಲೀಕರೊಬ್ಬರಿಗೆ ಚಾಕು ತೋರಿಸಿ ಬೆದರಿಕೆ ಒಡ್ಡಿ, ಮೊಬೈಲ್, ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಮೋಹನ್ ಕುಮಾರ್ ಎಂಬುವವರು ಮೊಬೈಲ್, ಹಣ ಕಳೆದುಕೊಂಡಿದ್ದಾರೆ. ಇವರು ಕುವೆಂಪು ರಸ್ತೆಯಲ್ಲಿ ನಂದಿನಿ ಹಾಲಿನ ಬೂತ್ ನಡೆಸುತ್ತಿದ್ದಾರೆ. ಜುಲೈ 6ರಂದು ಬೆಳಗಿನ ಜಾವ 4.30ರ ಹೊತ್ತಿಗೆ ಮೋಹನ್ ಕುಮಾರ್ ಅವರ ನಂದಿನಿ ಹಾಲಿನ ಬೂತ್ ಬಳಿ ಇಬ್ಬರು ಯುವಕರು … Read more

ಭದ್ರಾವತಿ ಬಸ್ ನಿಲ್ದಾಣದ ಮುಂದೆ ಬೆಳಗಿನ ಜಾವ ದ್ವಿಚಕ್ರ ವಾಹನ ಕಳ್ಳತನ

bike theft reference image

SHIVAMOGGA LIVE NEWS | BHADRAVATHI | 29 ಜೂನ್ 2022 ಭದ್ರಾವತಿ ಬಸ್ ನಿಲ್ದಾಣದ ಮುಂದೆ ನಿಲ್ಲಿಸಿದ್ದ ಹೋಂಡಾ ಆಕ್ಟೀವಾ ಕಳ್ಳತನವಾಗಿದೆ (BIKE THEFT). ಮಹಿಳೆಯೊಬ್ಬರು ತಮ್ಮ ಮಗನನ್ನು ಕರೆದೊಯ್ಯಲು ಬೆಳಗಿನ ಜಾವ ಬಸ್ ನಿಲ್ದಾಣದ ಬಳಿ ಬಂದಾಗ ಘಟನೆ ಸಂಭವಿಸಿದೆ. ತ್ಯಾಗರಾಜನಗರದ ತಮಿಳು ಸೆಲ್ವಿ ಎಂಬುವವರಿಗೆ ಸೇರಿದ ಹೋಂಡಾ ಆಕ್ಟೀವಾ ಕಳ್ಳತನವಾಗಿದೆ. ತಮಿಳು ಸೆಲ್ವಿ ಅವರ ಮಗ ಬೆಂಗಳೂರಿನಿಂದ KSRTC BUSನಲ್ಲಿ ಭದ್ರಾವತಿಗೆ ಆಗಮಿಸಿದ್ದರು. ಮಗನನ್ನು ಕರೆದುಕೊಂಡು ಬರಲು ಬೆಳಗಿನ ಜಾವ ಬೈಕ್ ತಂದಿದ್ದರು. … Read more