ಡೇಂಜರ್‌ ರೋಡ್‌ ಆಗುತ್ತಿದೆ ಶಿವಮೊಗ್ಗದ ಕಾಂಕ್ರಿಟ್‌ ರಸ್ತೆ, ಯಾಕೆ? ಇಲ್ಲಿದೆ 4 ಪ್ರಮುಖ ಪಾಯಿಂಟ್‌

Pot-Holes-in-BH-Road-Concrete-Road

SHIVAMOGGA LIVE | 18 JULY 2023 SHIMOGA : ನಗರದ ಪ್ರಮುಖ ಕಾಂಕ್ರಿಟ್‌ ರಸ್ತೆಯಲ್ಲಿ ಗಜಗಾತ್ರದ ಗುಂಡಿಗಳು (Pot Holes) ಸೃಷ್ಟಿಯಾಗಿವೆ. ಅಲ್ಲಲ್ಲಿ ಕಂಬಿಗಳು ಮೇಲೆದ್ದು ಕಾಣಿಸುತ್ತಿವೆ. ತುರ್ತಾಗಿ ರಿಪೇರಿ ಮಾಡದೆ ಇದ್ದರೆ ಇನ್ನು ಕೆಲವೆ ಸಮಯದಲ್ಲಿ ಈ ರಸ್ತೆಯಲ್ಲಿ ವಾಹನ ಸವಾರರ ಜೀವಕ್ಕೆ ಕುತ್ತು ಉಂಟಾಗಲಿದೆ. ಬಿ.ಎಸ್.ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಶಿವಮೊಗ್ಗದ ಬಿ.ಹೆಚ್‌.ರಸ್ತೆಯ ಅಗಲೀಕರಣ ಮಾಡಿ, ಕಾಂಕ್ರಿಟ್‌ ರಸ್ತೆ ನಿರ್ಮಿಸಲಾಯಿತು. ಶಂಕರಮಠ ಸರ್ಕಲ್‌ನಿಂದ ಶಿವಮೊಗ್ಗದ ಬಸ್‌ ನಿಲ್ದಾಣದವರೆಗೆ ಗಟ್ಟಿಮುಟ್ಟು ಕಾಂಕ್ರಿಟ್‌ ರಸ್ತೆ … Read more

ಮೇಗರವಳ್ಳಿ ಸಮೀಪ ಕಾರು, ಖಾಸಗಿ ಬಸ್‌ ಡಿಕ್ಕಿ, ಕಾರಿನ ಮುಂಭಾಗ ನುಜ್ಜುಗುಜ್ಜು

Private-Bus-and-Car-Mishap-at-Megaravalli-in-Thirthahalli-Taluk

SHIVAMOGGA LIVE | 18 JULY 2023 THIRTHAHALLI : ಖಾಸಗಿ ಬಸ್‌ ಮತ್ತು ಕಾರು ಡಿಕ್ಕಿಯಾಗಿ (Mishap) ಇಬ್ಬರು ಗಾಯಗೊಂಡಿದ್ದಾರೆ. ತೀರ್ಥಹಳ್ಳಿ ತಾಲೂಕು ಮೇಗರವಳ್ಳಿ ಸಮೀಪ ಘಟನೆ ಸಂಭವಿಸಿದೆ. ಕುಟುಂಬವೊಂದು ಹಾಲಾಡಿಯಿಂದ ಕಾರಿನಲ್ಲಿ ಶಿವಮೊಗ್ಗದ ಆಸ್ಪತ್ರೆಗೆ ತೆರಳುತ್ತಿದ್ದರು. ಖಾಸಗಿ ಬಸ್‌ ತೀರ್ಥಹಳ್ಳಿಯಿಂದ ಬಿದರಗೋಡು ಕಡೆಗೆ ಹೋಗುತ್ತಿತ್ತು. ಮೇಗರವಳ್ಳಿ ಬಳಿ ಮುಖಾಮುಖಿ ಡಿಕ್ಕಿಯಾಗಿವೆ (Mishap). ಕಾರು ಚಾಲಕ ಸೇರಿ ಇಬ್ಬರು ಗಾಯಗೊಂಡಿದ್ದಾರೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಬಸ್ಸಿನ ಎಡ ಭಾಗಕ್ಕೆ ಹಾನಿಯಾಗಿದೆ. ಗಾಯಾಳುಗಳಿಗೆ ಮೇಗರವಳ್ಳಿ ಆಸ್ಪತ್ರೆಯಲ್ಲಿ ಪ್ರಾಥಮಿಕ … Read more

ಗುಟ್ಕಾ ಜಗಿದು ಕಂಡಲ್ಲೆಲ್ಲ ಉಗುಳುವವರೆ ಹುಷಾರ್‌, ಕೋರ್ಟಲ್ಲಿ ಗೋಡೆಗೆ ಉಗಿದವನಿಗೆ ತಕ್ಕ ಪಾಠ ಕಲಿಸಿದ ಜಡ್ಜ್‌

Bhadravathi-Judge-Punishes-youth-for-spitting-gutka-in-court-premises

SHIVAMOGGA LIVE | 18 JULY 2023 BHADRAVATHI : ಗುಟ್ಕಾ ತಿಂದು ಕಂಡ ಕಂಡಲ್ಲಿ ಉಗುಳುವವರಿಗೇನು (spitting gutka) ಕಮ್ಮಿಯಿಲ್ಲ. ನ್ಯಾಯಾಲಯದ ಆವರಣದಲ್ಲಿ ಗುಟ್ಕಾ ಜಗಿದು ಗೋಡೆಗೆ ಉಗಿದ ವ್ಯಕ್ತಿಯೊಬ್ಬನಿಗೆ ನ್ಯಾಯಾಧೀಶರು ತಕ್ಕ ಪಾಠ ಕಲಿಸಿದ್ದಾರೆ. ಆತನಿಂದಲೇ ಗೋಡೆ ಸ್ವಚ್ಛಗೊಳಿಸಿದ್ದಾರೆ. ಭದ್ರಾವತಿ ನ್ಯಾಯಾಲಯದಲ್ಲಿ ಸೋಮವಾರ ಘಟನೆ ಸಂಭವಿಸಿದೆ. ಹಿರಿಯ ಸಿವಿಲ್‌ ನ್ಯಾಯಾಲಯದ ಹೊರ ಆವರಣದಲ್ಲಿ ವ್ಯಕ್ತಿಯೊಬ್ಬ ಗುಟ್ಕಾ ಜಗಿದು ಗೋಡೆ ಮೇಲೆ ಉಗುಳಿದ್ದ (spitting gutka). ಇದನ್ನು ಗಮನಿಸಿದ ನ್ಯಾಯಾಧೀಶರು ಆತನನ್ನು ಕರೆಸಿ ಬುದ್ದಿವಾದ ಹೇಳಿದ್ದಾರೆ. … Read more

ಅಂಗನವಾಡಿ ಬೀಗ ಮುರಿದ ಕಳ್ಳರು, ಮಕ್ಕಳ ಪಾಲಿನ ಬೇಳೆ ಚೆಲ್ಲಿ, ಮೊಟ್ಟೆ ಒಡೆದು ಹಾಕಿದ ಖದೀಮರು

Anganavadi-Theft-Attempt-at-Sagara

SHIVAMOGGA LIVE | 18 JULY 2023 SAGARA : ಅಂಗಡಿಯೊಂದರ ಬಾಗಿಲಿನ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಲಾಗಿದೆ. ಈ ವೇಳೆ ಅಂಗನವಾಡಿಯಲ್ಲಿದ್ದ ಬೇಳೆ ಚೀಲ ಹರಿಯಲಾಗಿದೆ. ಮಕ್ಕಳಿಗೆ ಕೊಡಲು ಇಟ್ಟಿದ್ದ ಮೊಟ್ಟೆಗಳನ್ನು ಒಡೆದು ಹಾಕಲಾಗಿದೆ. ಸಾಗರ ಪಟ್ಟಣದ ಅರಳಿಕಟ್ಟೆ ಉರ್ದು ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿರುವ ಅಂಗನವಾಡಿಯಲ್ಲಿ ಭಾನುವಾರ ತಡರಾತ್ರಿ ಕಳ್ಳತನಕ್ಕೆ ಯತ್ನಿಸಲಾಗಿದೆ. ಕಳ್ಳರು ಅಂಗನವಾಡಿ ಕೇಂದ್ರದಲ್ಲಿದ್ದ ಬೇಳೆ ಚೀಲವನ್ನು ಹರಿದು ಬೇಳೆಯನ್ನು ಚೆಲ್ಲಿದ್ದಾರೆ. ಮೊಟ್ಟೆಗಳ ಒಡೆದು ಹಾಕಿದ್ದಾರೆ. ಇದನ್ನೂ ಓದಿ – ಶಿವಮೊಗ್ಗ KSRTC ಬಸ್‌ … Read more

ಶಿವಮೊಗ್ಗ KSRTC ಬಸ್‌ ನಿಲ್ದಾಣದ ಬಳಿ ಬೆಳಗ್ಗೆ ಯುವತಿ ‘ಕಿಡ್ನಾಪ್‌’, ಸಂಜೆ ವೇಳೆಗೆ ಪ್ರಕರಣಕ್ಕೆ ಟ್ವಿಸ್ಟ್‌, ಏನದು?

KSRTC-Bus-Stand-in-Shimoga

SHIVAMOGGA LIVE | 18 JULY 2023 SHIMOGA : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಕಪ್ಪು ಇನ್ನೋವಾ (Innova) ಕಾರಿನಲ್ಲಿ ಯುವತಿಯ ಕಿಡ್ನಾಪ್‌ ಪ್ರಕರಣ ಸುಖಾಂತ್ಯ ಕಂಡಿದೆ. ಪ್ರೀತಿಸಿ ಮದುವೆಯಾಗಿರುವ ಹುಡುಗನ ಜೊತೆ ತೆರಳಿದ್ದಾಗಿ ಯುವತಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ. ಆದ್ದರಿಂದ ಇಬ್ಬರನ್ನು ಬಿಟ್ಟು ಕಳುಹಿಸಲಾಗಿದೆ. ಏನಿದು ಕಿಡ್ನಾಪ್‌ ಕೇಸ್‌? ಶಿವಮೊಗ್ಗದ ಬಡಾವಣೆಯೊಂದರ ಯುವತಿ ತನ್ನ ತಾಯಿಯೊಂದಿಗೆ ಸಾಗರದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪ ಇನ್ನೋವಾ ಕಾರಿನಲ್ಲಿ ಬಂದವರು ಯುವತಿಯನ್ನು … Read more

ಅಡಿಕೆ ರೇಟ್‌ | 17 ಜುಲೈ 2023 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್‌?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE | 17 JULY 2023 SHIMOGA : ಶಿವಮೊಗ್ಗ, ಸಾಗರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಶಿವಮೊಗ್ಗ ಮಾರುಕಟ್ಟೆ ಗೊರಬಲು 18000 43050 ಬೆಟ್ಟೆ 46599 55052 ರಾಶಿ 43728 55699 ಸರಕು 55069 84130 ಸಾಗರ ಮಾರುಕಟ್ಟೆ ಕೆಂಪುಗೋಟು 28119 42009 ಕೋಕ 26099 36989 ಚಾಲಿ 31099 39999 ಬಿಳೆ ಗೋಟು 12099 34209 ರಾಶಿ 44199 55099 ಸಿಪ್ಪೆಗೋಟು 18299 22455 ಕುಂದಾಪುರ … Read more

ಟ್ರಾನ್ಸ್‌ಫಾರ್ಮರ್‌ ಆಫ್‌ ಮಾಡಿ ಕರೆಂಟ್‌ ವಯರನ್ನೇ ಕದ್ದ ಖದೀಮರು

Electric-Wire-Theft-at-Sagara-SS-Bhog-village

SHIVAMOGGA LIVE | 17 JULY 2023 SAGARA : ಟ್ರಾನ್ಸ್‌ಫಾರ್ಮರ್‌ ಆಫ್‌ ಮಾಡಿ ರಾತ್ರೋರಾತ್ರಿ ವಿದ್ಯುತ್‌ ತಂತಿ  (Power Cable) ಕಳ್ಳತನ ಮಾಡಲಾಗಿದೆ. ಸುಮಾರು ಒಂದು ಸಾವಿರ ಮೀಟರ್‌ ವಿದ್ಯುತ್‌ ತಂತಿ ಕಳುವಾಗಿದೆ ಎಂದು ಹೇಳಲಾಗುತ್ತಿದೆ. ಏನಿದು ಪ್ರಕರಣ? ಸಾಗರ ತಾಲೂಕು ಎಸ್‌.ಎಸ್.ಭೋಗ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಾಠಿ ಮತ್ತು ಹೊಸಗದ್ದೆ ಸೇರಿದಂತೆ ಇತರೆ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಇಕ್ಕಿಬೀಳು ಗ್ರಾಮದಲ್ಲಿ ಟ್ರಾನ್ಸ್‌ಫಾರ್ಮರ್‌ ಅಳವಡಿಸಲಾಗಿದೆ. ಕಳ್ಳರು ಇಕ್ಕಿಬೀಳು ಟ್ರಾನ್ಸ್‌ಫಾರ್ಮರ್‌ನಲ್ಲಿ ವಿದ್ಯುತ್‌ ಹರಿವು ನಿಲ್ಲಿಸಿ, ಚಾರ್ಜರ್‌ … Read more

BREAKING | ಆಗುಂಬೆ ಘಾಟಿಯಲ್ಲಿ ಕಂದಕಕ್ಕೆ ಬಿದ್ದ ವ್ಯಕ್ತಿ, ಪ್ರಾಣದ ಹಂಗು ತೊರೆದು ರಕ್ಷಿಸಿದ ಯುವಕರು

Person-Rescued-at-agumbe-ghat.

SHIVAMOGGA LIVE | 16 JULY 2023 THIRTHAHALLI : ಆಗುಂಬೆ ಘಾಟಿಯಲ್ಲಿ (Agumbe Ghat) ಸುಮಾರು 20 ಅಡಿ ಕಂದಕಕ್ಕೆ ಬಿದ್ದ ವ್ಯಕ್ತಿಯೊಬ್ಬರನ್ನು ಆಗುಂಬೆಯ ಯುವಕರು ರಕ್ಷಣೆ ಮಾಡಿದ್ದಾರೆ. ಗಂಭೀರ ಗಾಯಗೊಂಡಿರುವ ಆತನನ್ನು ಚಿಕಿತ್ಸೆಗೆಂದು ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೇಗಾಯ್ತು ಘಟನೆ? ಶಿವಮೊಗ್ಗದ ಮೊಹಮ್ಮದ್‌ ಬಾಷಾ ಎಂಬುವವರು ಟೋಯಿಂಗ್‌ ವಾಹನದಲ್ಲಿ ಟ್ರ್ಯಾಕ್ಟರನ್ನು ಟೋಯಿಂಗ್‌ ಮಾಡಿಕೊಂಡು ಬರುತ್ತಿದ್ದರು. 7ನೇ ತಿರುವಿನಲ್ಲಿ ಟೋಯಿಂಗ್‌ ವಾಹನ ಘಾಟಿ ಹತ್ತಲಾಗದೆ ನಿಂತಿದೆ. ವಾಹನದಿಂದ ಕೆಳಗಿಳಿದ ಮೊಹಮ್ಮದ್‌ ಬಾಷಾ, ಚಾಲಕನಿಗೆ ನಿರ್ದೇಶನ ನೀಡುತ್ತಿದ್ದರು. … Read more

ಕುತೂಹಲ ಮೂಡಿಸಿದ ಆಯನೂರು ಮಂಜುನಾಥ್‌ ಹೇಳಿಕೆ, ‘ಬಿಟ್ಟು ಬಂದವರನ್ನು ಮತ್ತೆ ಅಪ್ಪಿಕೊಳ್ಳಬೇಕಾಗುತ್ತದೆʼ ಅಂದಿದ್ದೇಕೆ?

KB-Prasanna-Kumar-Ayanuru-Manjunatha-M-Srikanth

SHIVAMOGGA LIVE | 16 JULY 2023 SHIMOGA : ಬಿಟ್ಟು ಬಂದವರನ್ನೆ ಮತ್ತೆ ಅಪ್ಪಿಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ಮುಂದಿನ ದಿನಗಳಲ್ಲಿ ಯಾವ ರೀತಿಯ ಹೊಂದಾಣಿಕೆಯಾಗುತ್ತದೆಯೊ ಗೊತ್ತಿಲ್ಲ. ಈಗಲೆ ಮಾನಸಿಕವಾಗಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಆಯನೂರು ಮಂಜುನಾಥ್‌ ಹೇಳಿಕೆ ನೀಡಿ ಕುತೂಹಲ (Curiosity) ಮೂಡಿಸಿದ್ದಾರೆ. ಇದನ್ನೂ ಓದಿ – ಶಿವಮೊಗ್ಗದಲ್ಲಿ ನೂತನ ಶಾಸಕಿಗೆ ಅಭಿನಂದನೆ, ಕಾರ್ಯಕ್ರಮದಲ್ಲಿ ಯಾರೆಲ್ಲ ಏನೇನು ಹೇಳಿದರು? ಜೆಡಿಎಸ್‌ ಕಚೇರಿಯಲ್ಲಿ ಶಾಸಕಿ ಶಾರದಾ ಪೂರ್ಯಾನಾಯ್ಕ್‌ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ … Read more

ಶಿವಮೊಗ್ಗದಲ್ಲಿ ನೂತನ ಶಾಸಕಿಗೆ ಅಭಿನಂದನೆ, ಕಾರ್ಯಕ್ರಮದಲ್ಲಿ ಯಾರೆಲ್ಲ ಏನೇನು ಹೇಳಿದರು?

Felicitation-for-MLA-Sharada-Puryanaik-in-Shimoga-JDS-Office

SHIVAMOGGA LIVE | 16 JULY 2023 SHIMOGA : ನೂತನ ಶಾಸಕಿ ಮತ್ತು ವಿಧಾನಸಭೆಯ ಜೆಡಿಎಸ್‌ ಪಕ್ಷದ ಉಪ ನಾಯಕಿ ಶಾರದಾ ಪೂರ್ಯಾನಾಯ್ಕ್‌ ಅವರಿಗೆ ಜೆಡಿಎಸ್‌ ಪಕ್ಷದ ವತಿಯಿಂದ ಅಭಿನಂದನೆ (Felicitation) ಸಲ್ಲಿಸಲಾಯಿತು. ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರ ಪರವಾಗಿ ಜೆಡಿಎಸ್‌ ಜಿಲ್ಲಾ‍ಧ್ಯಕ್ಷ ಎಂ.ಶ್ರೀಕಾಂತ್‌ ಅವರು ಅಭಿನಂದನೆ (Felicitation) ಸಲ್ಲಿಸಿದರು. ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರಿಗೆ ಜಿಲ್ಲಾ ಜೆಡಿಎಸ್ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. pic.twitter.com/3VTchVq4RY — Shivamogga Live … Read more