ಅಡಕೆ ಧಾರಣೆ | 13 ಏಪ್ರಿಲ್ 2023 | ಶಿವಮೊಗ್ಗ, ಸಾಗರ, ತುಮಕೂರು ಸೇರಿದಂತೆ ಎಲ್ಲೆಲ್ಲಿ ಎಷ್ಟಿದೆ ಅಡಕೆ ರೇಟ್?

Areca Price in Shimoga APMC

SHIVAMOGGA LIVE NEWS | 13 APRIL 2023 SHIMOGA : ಶಿವಮೊಗ್ಗ, ಸಾಗರ, ಚನ್ನಗಿರಿ, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಕೆ ಧಾರಣೆ (ADIKE RATE). ಶಿವಮೊಗ್ಗ ಮಾರುಕಟ್ಟೆ ಗೊರಬಲು 21000 33969 ಬೆಟ್ಟೆ 44400 51829 ರಾಶಿ 32089 46199 ಸರಕು 42769 80877 ಸಾಗರ ಮಾರುಕಟ್ಟೆ ಕೆಂಪುಗೋಟು 14989 34899 ಕೋಕ 12319 32299 ಚಾಲಿ 32099 36200 ಬಿಳೆ ಗೋಟು 25811 30199 ರಾಶಿ 34899 46399 ಸಿಪ್ಪೆಗೋಟು … Read more

ಶಿವಮೊಗ್ಗದಿಂದ ಜೀರೋ ಟ್ರಾಫಿಕ್‌ನಲ್ಲಿ ವಿಶೇಷ ಆಂಬುಲೆನ್ಸ್‌ನಲ್ಲಿ ಡಾ.ವಿನಯ್ ಬೆಂಗಳೂರಿಗೆ ಶಿಫ್ಟ್

Dr-Vinay-Shifted-to-Bangalore-from-Nanjappa-Hospital-in-Zero-Traffic

SHIVAMOGGA LIVE NEWS | 13 APRIL 2023 SHIMOGA : ನ್ಯಾಮತಿ ತಾಲೂಕು ಜೀನಹಳ್ಳಿಯಲ್ಲಿ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಗೆ ತುತ್ತಾಗಿದ್ದ ಸಕ್ರೆಬೈಲು ಬಿಡಾರದ ವೈದ್ಯ ಡಾ.ವಿನಯ್ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವಿಶೇಷ ಆಂಬುಲೆನ್ಸ್ ಮೂಲಕ ಜೀರೋ ಟ್ರಾಫಿಕ್‍ನಲ್ಲಿ (Zero Traffic) ಡಾ.ವಿನಯ್‍ ಅವರನ್ನು ಶಿಫ್ಟ್‍ ಮಾಡಲಾಗುತ್ತಿದೆ. ಕಾಡಾನೆ ದಾಳಿಗೆ ಡಾ.ವಿನಯ್‍ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದರಿಂದ ಅವರನ್ನು ಬೆಂಗಳೂರಿನ (Zero Traffic) … Read more

ಶಿವಮೊಗ್ಗ ಸೇತುವೆ ಮೇಲೆ ಕಾರು ಡಿಕ್ಕಿಯಾಗಿ ತುಂಗಾ ನದಿಗೆ ಬಿದ್ದಿದ್ದ ಬೈಕ್ ಸವಾರ ಸಾವು

Youth-pushed-from-tunga-bridge-over-an-altercation

SHIVAMOGGA LIVE NEWS | 13 APRIL 2023 SHIMOGA : ಹಳೆ ಸೇತುವೆಯಿಂದ ತುಂಗಾ ನದಿಗೆ ಬಿದ್ದಿದ್ದ ಬೈಕ್ ಸವಾರ (Bike Rider) ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮತ್ತೊಬ್ಬ ಸವಾರನಿಗೆ ಚಿಕಿತ್ಸೆ ಮುಂದುವರೆದಿದೆ. ಭದ್ರವಾವತಿಯ ದಿವ್ಯರಾಜ್ (36) ಮೃತಪಟ್ಟಿದ್ದಾರೆ. ಸಹ ಸವಾರ ಸಂತೋಷ್ (26) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೇಗಾಯ್ತು ಅಪಘಾತ? ತುಂಗಾ ನದಿ ಹಳೆ ಸೇತುವೆ ಮೇಲೆ ಓಮ್ನಿ ಕಾರು ಬೈಕಿಗೆ ಡಿಕ್ಕಿಯಾಗಿ ದಿವ್ಯರಾಜ್ (Bike Rider) ಅವರು ಹೊಳೆಗೆ ಬಿದ್ದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ … Read more

BREAKING NEWS | ತೀರ್ಥಹಳ್ಳಿಯ ಮೂರು ಸಹಕಾರ ಸಂಸ್ಥೆಗಳ ಮೇಲೆ ಐಟಿ ದಾಳಿ

breaking news graphics

SHIVAMOGGA LIVE NEWS | 12 APRIL 2023 THIRTHAHALLI : ಮೂರು ಸಹಕಾರ ಸೊಸೈಟಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ (IT raid) ನಡೆಸಿದ್ದಾರೆ. ದಾಳಿ ನಡೆಸಿದ ಅಧಿಕಾರಿಗಳು ಹಣಕಾಸು ವ್ಯವಹಾರ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ತೀರ್ಥಹಳ್ಳಿ ಪಟ್ಟಣದಲ್ಲಿರುವ ಸಹಕಾರ ಸೊಸೈಟಿಗಳ ಮೇಲೆ ದಾಳಿಯಾಗಿದೆ (IT raid). ವಿಚಾರ ತಿಳಿಯುತ್ತಿದ್ದಂತೆ ತೀರ್ಥಹಳ್ಳಿ ತಹಶೀಲ್ದಾರ್‌, ಡಿವೈಎಸ್‌ಪಿ ಮತ್ತು ಚುನಾವಣಾಧಿಕಾರಿಗಳು ಸಹಕಾರ ಸೊಸೈಟಿಗಳ ಬಳಿ ದೌಡಾಯಿಸಿದ್ದಾರೆ. ದಾಳಿ ಕುರಿತು ಹೆಚ್ಚಿನ ಮಾಹಿತಿ … Read more

ಕಾಂಗ್ರೆಸ್‌ ನಾಯಕ ಕಾಗೋಡು ತಿಮ್ಮಪ್ಪ ಪುತ್ರಿ ಡಾ.ರಾಜನಂದಿನಿ ದಿಢೀರ್‌ ಬಿಜೆಪಿ ಸೇರ್ಪಡೆ, ಕಾರಣವೇನು? ಮುಂದೇನು?

Dr-rajanandini-Joins-BJp-in-Bangalore

SHIVAMOGGA LIVE NEWS | 12 APRIL 2023 SAGARA / BENGALURU : ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿ ಡಾ.ರಾಜನಂದಿನಿ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಡಾ.ರಾಜನಂದಿನಿ ಅವರು ಬಿಜೆಪಿ ಸದಸ್ಯತ್ವ (Join BJP) ಪಡೆದರು. ಡಾ.ರಾಜನಂದಿನಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದರು. ಅವರೊಂದಿಗೆ ಚರ್ಚೆ ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದರು. … Read more

ಶಿವಮೊಗ್ಗ ಬಿಜೆಪಿ ಕಚೇರಿ ಮುಂದೆ ರಸ್ತೆ ತಡೆ, ಟೈರ್‌ಗೆ ಬೆಂಕಿ ಹಚ್ಚಲು ಯತ್ನ, ವಿವಿಧ ಜವಾಬ್ದಾರಿಗೆ ರಾಜೀನಾಮೆ

Eshwarappa-followers-protest-in-front-of-BJP-office

SHIVAMOGGA LIVE NEWS | 12 APRIL 2023 SHIMOGA : ಈಶ್ವರಪ್ಪ ನಿವೃತ್ತಿ ನಿರ್ಧಾರದ ಹಿನ್ನೆಲೆ ಅವರ ಬೆಂಬಲಿಗರ ಆಕ್ರೋಶ ತೀವ್ರ ಸ್ವರೂಪ ಪಡೆದುಕೊಂಡಿದೆ. ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ (Protest) ನಡೆಸಿ, ಟೈರ್‌ಗೆ ಬೆಂಕಿ ಹಚ್ಚಲು ಯತ್ನಿಸಿ ಸಿಟ್ಟು ಹೊರಹಾಕಿದ್ದಾರೆ. ಪಕ್ಷ ನೀಡಿದ್ದ ಜವಾಬ್ದಾರಿಗೆ ರಾಜೀನಾಮೆ ನೀಡಿದ್ದಾರೆ. ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿ ಬಳಿ ಈಶ್ವರಪ್ಪ ಅವರ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಈಶ್ವರಪ್ಪ ಅವರು ನಿವೃತ್ತಿ ನಿರ್ಧಾರ ಕೈಬಿಡಬೇಕು. ಪಕ್ಷದ ಹೈಕಮಾಂಡ್‌ ಈಶ್ವರಪ್ಪ ಅವರಿಗೇ … Read more

ಶಿವಮೊಗ್ಗದಲ್ಲಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆ ಅಡ್ಡಗಟ್ಟಿ ಕತ್ತು ಹಿಸುಕಲು ಯತ್ನ

crime name image

SHIVAMOGGA LIVE NEWS | 12 APRIL 2023 SHIMOGA : ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಅಡ್ಡಗಟ್ಟಿದ ಇಬ್ಬರು ಆಕೆಯನ್ನು ಅವಾಚ್ಯವಾಗಿ ನಿಂದಿಸಿ, ಕುತ್ತು ಹಿಸುಕಿದ್ದಾರೆ. ಜನ ಸೇರಿದ್ದರಿಂದ ಮಹಿಳೆಯನ್ನು (Woman) ಬಿಟ್ಟು ಪರಾರಿಯಾಗಿದ್ದಾರೆ ಎಂದು ದೂರು ದಾಖಲಾಗಿದೆ. ಬಸವನಗುಡಿಯ 4ನೇ ತಿರುವಿನಲ್ಲಿ ಘಟನೆ ಸಂಭವಿಸಿದೆ. ಗೃಹಿಣಿಯೊಬ್ಬರು ತಮ್ಮ ಮಕ್ಕಳು ಓದುತ್ತಿರುವ ಖಾಸಗಿ ಶಾಲೆಗೆ ತೆರಳಿ, ಮನೆಗೆ ಮರಳುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು, ಮಹಿಳೆಯನ್ನು (Woman) ಅಡ್ಡಗಟ್ಟಿ ಕತ್ತು ಹಿಸುಕಿದ್ದಾರೆ. ಮಾನಭಂಗಕ್ಕೂ … Read more

ಬಿಜೆಪಿ ಪಟ್ಟಿ, ಭದ್ರಾವತಿಯಲ್ಲಿ ಅಭ್ಯರ್ಥಿ ಮನೆ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿದ ಬೆಂಬಲಿಗರು

Celebration-at-Mangote-Village-in-Bhadravathi

SHIVAMOGGA LIVE NEWS | 12 APRIL 2023 BHADRAVATHI : ವಿಧಾನಸಭೆ ಚುನಾವಣೆಗೆ ಭದ್ರಾವತಿಯಲ್ಲಿ ಮಂಗೋಟೆ ರುದ್ರೇಶ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ವಿಚಾರ ತಿಳಿಯುತ್ತಿದ್ದಂತೆ ಮಂಗೋಟೆ ಗ್ರಾಮದಲ್ಲಿ ಅವರ ಆಪ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು (Celebration). ಭದ್ರಾವತಿಯ ಮಂಗೋಟೆ ಗ್ರಾಮದಲ್ಲಿ ರುದ್ರೇಶ್ ಅವರ ಮನೆ ಬಳಿ ಗ್ರಾಮಸ್ಥರು, ಕುಟುಂಬದವರು ಸಂಭ್ರಮಾಚಾರಣೆ ಮಾಡಿದರು. ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿಕೊಂಡು ಖುಷಿಪಟ್ಟರು (Celebration). ಮಂಗೋಟೆ ರುದ್ರೇಶ್‍ ಅವರ ಪರವಾಗಿ ಘೋಷಣೆ ಕೂಗಿದರು. ಇದನ್ನೂ ಓದಿ … Read more

ತುಂಗಾ ನದಿ ಹಳೆ ಸೇತುವೆಯಿಂದ ಯುವಕನನ್ನು ದಬ್ಬಿದ ಬೈಕ್ ಸವಾರ, ಗಂಭೀರ ಗಾಯ

Youth-pushed-from-tunga-bridge-over-an-altercation

SHIVAMOGGA LIVE NEWS | 12 APRIL 2023 SHIMOGA : ತುಂಗಾ ನದಿ (Bridge) ಹಳೆ ಸೇತುವೆಯಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾರ್ವಜನಿಕರು ಆತನನ್ನು ರಕ್ಷಣೆ ಮಾಡಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ವೇಳೆ ಜಗಳವಾಗಿ ನೂಕಾಟ, ತಳ್ಳಾಟದ ವೇಳೆ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸೇತುವೆ ಮೇಲೆ ಅಪಘಾತ ಹಳೆ ಸೇತುವೆ (Bridge) ಮೇಲೆ ಓಮ್ನಿ ಕಾರು ಮತ್ತು ದ್ವಿಚಕ್ರ ವಾಹನದ ಮಧ್ಯೆ ಅಪಘಾತ ಸಂಭವಿಸಿದೆ. ಬೈಕ್ ಸವಾರ ಮತ್ತು ಕಾರು … Read more

ಶಿವಮೊಗ್ಗ ಸಿಟಿಯಲ್ಲಿ ಮುಂದುವರೆದ ಸಸ್ಪೆನ್ಸ್‌, ಜನರಲ್ಲಿ ಹೆಚ್ಚಿದ ಕುತೂಹಲ, ರಾಜಕೀಯ ಲೆಕ್ಕಾಚಾರ ಚುರುಕು

City-Center-Mall-Shimoga-City-Night-View.

SHIVAMOGGA LIVE NEWS | 11 APRIL 2023 SHIMOGA : ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಆರು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಆದರೆ ಶಿವಮೊಗ್ಗ ನಗರ ಕ್ಷೇತ್ರದ ವಿಚಾರದಲ್ಲಿ ಹೈಕಮಾಂಡ್‌ ಸಸ್ಪೆನ್ಸ್‌ (suspense) ಉಳಿಸಿದೆ. ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಹಾಗಾಗಿ ಶಿವಮೊಗ್ಗ ನಗರದಲ್ಲಿ ಬಿಜೆಪಿ ಯಾರನ್ನು ಕಣಕ್ಕಿಳಿಸಲಿದೆ ಎಂಬ ಕುತೂಹಲವಿತ್ತು. ಆದರೆ ಈ ಸಸ್ಪೆನ್ಸ್‌  (suspense) ಅನ್ನು ಮುಂದಿನ ಪಟ್ಟಿವರೆಗೆ ಬಿಜೆಪಿ ಹೈಕಮಾಂಡ್‌ … Read more