ಶಿವಮೊಗ್ಗದಲ್ಲಿ ಶೆಡ್‌ನಲ್ಲಿ ನೇಣು ಬಿಗಿದುಕೊಂಡ ವ್ಯಕ್ತಿ
ಶಿವಮೊಗ್ಗ : ಇಟ್ಟಿಗೆ ನಿರ್ಮಾಣದ ಶೆಡ್‌ನಲ್ಲಿ (Shed) ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿವಮೊಗ್ಗ ತಾಲೂಕು ತೋಟದಕೆರೆ ಗ್ರಾಮದಲ್ಲಿ ಬುಧವಾರ ಘಟನೆ ಸಂಭವಿಸಿದೆ. ಉಂಬ್ಳೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುರಳಿಹಳ್ಳಿಯ ಜಾನಕಿರಾಮ್ (34) ಮೃತರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಸ್ನೇಹಿತನಿಂದಲೇ ವ್ಯಕ್ತಿಯ ಕೊಲೆ, ಹೇಗಾಯ್ತು ಘಟನೆ?