ಮಂಗನ ಕಾಯಿಲೆ ಭಯ, ಮುಪ್ಪಾನೆಯಲ್ಲಿ ಚಾರಣ ನಿರ್ಬಂಧ, ಸಿಗಂದೂರು ಭಕ್ತರಿಗೂ ಸದ್ಯದಲ್ಲೇ ಮಾರ್ಗಸೂಚಿ
ಶಿವಮೊಗ್ಗ ಲೈವ್.ಕಾಂ | 1 ಜನವರಿ 2019 ದಿನೇ ದಿನೇ ಮಲೆನಾಡಿನಲ್ಲಿ ಮಂಗನ ಕಾಯಿಲೆ ಆತಂಕ ಹೆಚ್ಚಾಗುತ್ತಿದೆ. ಈ ನಡುವೆ ಶರಾವತಿ ಕಣಿವೆ ಅಭಯಾಯರಣ್ಯದ ಮುಪ್ಪಾನೆ ಪ್ರಕೃತಿ ಶಿಬಿರ ಅರಣ್ಯ ವ್ಯಾಪ್ತಿಯಲ್ಲಿ, ಚಾರಣಕ್ಕೆ ನಿರ್ಬಂಧ ವಿಧಿಸಲಾಗಿದೆ. ಜಿಲ್ಲಾ ವನ್ಯಜೀವಿ ವಿಭಾಗದ ವತಿಯಿಂದ ಈ ಆದೇಶ ಹೊರಡಿಸಲಾಗಿದೆ. ಮುಪ್ಪಾನೆ ಭಾಗದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿರುವ ಹಿನ್ನೆಲೆ, ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಜ.1ರಿಂದ ಮುಂದಿನ ಆದೇಶದವರೆಗೂ ಚಾರಣಕ್ಕೆ ನಿರ್ಬಂಧ ವಿಧಿಸಲಾಗಿದೆ. ಸದ್ಯದಲ್ಲೇ ಸಿಗಂದೂರು ಭಕ್ತರಿಗೂ ಮಾರ್ಗಸೂಚಿ … Read more