ತ್ಯಾಗರ್ತಿ ಸಮೀಪ ಬೆಳಗೆದ್ದು ಜಮೀನಿಗೆ ತೆರಳಿದ್ದ ರೈತನಿಗೆ ಕಾದಿತ್ತು ಆಘಾತ
SHIVAMOGGA LIVE NEWS | 15 APRIL 2024 SAGARA : ಜಮೀನಿನಲ್ಲಿ ಇಟ್ಟಿದ್ದ ಸುಮಾರು 20 ಕ್ವಿಂಟಾಲ್ ಬೀಜದ ಶುಂಠಿ ಕಳ್ಳತನವಾಗಿದೆ. ಸಾಗರ ತಾಲೂಕು ತ್ಯಾಗರ್ತಿ ಸಮೀಪದ ಮತ್ತಿಕೆರೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಸತ್ಯನಾರಾಯಣ ಎಂಬುವವರು ತಮ್ಮ ಜಮೀನಲ್ಲಿ ಸುಮಾರು 20 ಕ್ವಿಂಟಾಲ್ ಬೀಜದ ಶುಂಠಿ ಇಟ್ಟಿದ್ದರು. ಏ.13ರಂದು ಬೆಳಗ್ಗೆ ಜಮೀನಿಗೆ ತೆರಳಿದ್ದಾಗ ಶುಂಠಿ ಕಳ್ಳತನವಾಗಿತ್ತು. ಘಟನೆ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ – ಶಿವಮೊಗ್ಗದಲ್ಲಿ ಸಿಡಿಲಿಗೆ ಎರಡು ದನಗಳು ಸಾವು