ಹಿನ್ನೀರಿಗೆ ಹಾರಿ ರೈತ ಆತ್ಮಹತ್ಯೆ, ಕಾರಣವೇನು?
ತೀರ್ಥಹಳ್ಳಿ : ಯುವ ರೈತನೋರ್ವ (Farmer) ವಾರಾಹಿ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಮರ ಬಳಿ ಘಟನೆ ಸಂಭವಿಸಿದೆ. ಹಾಗಲಮನೆಯ ರೈತ ಕೌಶಿಕ್ (30) ಮೃತರು. ಕೌಶಿಕ್ ಅವಿವಾಹಿತರಾಗಿದ್ದು, ತಾಯಿಯೊಂದಿಗೆ ವಾಸವಾಗಿದ್ದರು. ಕೃಷಿಗಾಗಿ ವಿವಿಧೆಡೆ ಸಾಲ ಮಾಡಿದ್ದರು. ಇನ್ನೊಂದೆಡೆ ಅಡಿಕೆಗೆ ಎಲೆ ಚುಕ್ಕೆ ರೋಗ ಬಂದಿದ್ದರಿಂದ ಕಂಗೆಟ್ಟಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ » ಜೆಎನ್‌ಎನ್ ಕಾಲೇಜಿನಲ್ಲಿ ಸದೃಡ … Read more