ಹಿಂದೆ ಬರುತ್ತಿದ್ದ ಪೊಲೀಸ್‌ ಜೀಪ್‌ ಕಂಡು ಲಾರಿ ನಿಲ್ಲಿಸಿ ಡ್ರೈವರ್‌ ಎಸ್ಕೇಪ್‌, ಕಾರಣವೇನು?

Police-jeep-in-Shimoga.

ಹೊಸನಗರ: ಪೊಲೀಸ್‌ ಜೀಪ್‌ (Police Vehicle) ಕಂಡು ಚಾಲಕನೊಬ್ಬ ಟಿಪ್ಪರ್‌ ಲಾರಿ ನಿಲ್ಲಿಸಿ ಪರಾರಿಯಾಗಿದ್ದಾನೆ. ಹೊಸನಗರ ತಾಲೂಕು ಮುಂಬಾರು ಸಮೀಪದ ದಿಬ್ಬಣಗಲ್ಲು ಸಮೀಪ ಘಟನೆ ಸಂಭವಿಸಿದೆ. ಹಿಂಬದಿಯಲ್ಲಿ ಪೊಲೀಸ್‌ ಜೀಪ್‌ ಬರುತ್ತಿರುವುದನ್ನು ಕಂಡು ಚಾಲಕ ಟಿಪ್ಪರ್‌ ಲಾರಿಯನ್ನು ವೇಗವಾಗಿ ಚಲಾಯಿಸಿದ್ದಾನೆ. ಸ್ವಲ್ಪ ದೂರದಲ್ಲಿ ಲಾರಿ ನಿಲ್ಲಿಸಿದ ಚಾಲಕ ಪರಾರಿಯಾಗಿದ್ದಾನೆ. ಅನುಮಾನಗೊಂಡು ಟಿಪ್ಪರ್‌ ಲಾರಿ ಪರಿಶೀಲಿಸಿದಾಗ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಲಾರಿ ಚಾಲಕ ಮತ್ತು ಮಾಲೀಕನ ವಿರುದ್ಧ ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … Read more

ಹಸಿರುಮಕ್ಕಿ ಲಾಂಚ್‌ ಬಳಿ ಟಾಟಾ ಏಸ್‌ ಪಲ್ಟಿ, ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮಣಿಪಾಲಕ್ಕೆ ದಾಖಲು, ಹೇಗಾಯ್ತು ಘಟನೆ?

Hasirumakki-Launch-Hasrirumakki-Kolluru-Route

ಹೊಸನಗರ: ಹಸಿರುಮಕ್ಕಿ ಲಾಂಚ್‌ ಸಮೀಪ ಟಾಟಾ ಏಸ್‌ ವಾಹನ (Vehicle) ಪಲ್ಟಿಯಾಗಿ, ಅದರಲ್ಲಿದ್ದವರು ಗಾಯಗೊಂಡಿದ್ದಾರೆ. ಹಸಿರುಮಕ್ಕಿ ಲಾಂಚ್‌ಗಿಂತಲು ಸ್ವಲ್ಪ ದೂರದಲ್ಲಿ ಘಟನೆ ಸಂಭವಿಸಿದೆ. ವೇಗವಾಗಿ ಸಾಗುತ್ತಿದ್ದ ಟಾಟಾ ಏಸ್‌ ವಾಹನಕ್ಕೆ ದನಗಳು ಅಡ್ಡ ಬಂದಿವೆ. ದಿಢೀರ್‌ ಬ್ರೇಕ್‌ ಹಾಕಿದ್ದರಿಂದ ನಿಯಂತ್ರಣ ತಪ್ಪಿದ ಟಾಟಾ ಏಸ್‌ ವಾಹನ ಪಲ್ಟಿಯಾಗಿದೆ. ಅದರಲ್ಲಿದ್ದ ರಾಮಚಂದ್ರ ಎಂಬುವವರಿಗೆ ಗಂಭೀರ ಗಾಯವಾಗಿದ್ದು ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಟಾಟಾ ಏಸ್‌ ವಾಹನದ ಚಾಲಕನ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ … Read more

ಕೈಮರ ಸರ್ಕಲ್‌ನಲ್ಲಿ ಅಪಘಾತ, ವ್ಯಕ್ತಿಯ ಎರಡು ಪಾದಗಳು ಅರ್ಧಕ್ಕೆ ಕಟ್‌, ಹೇಗಾಯ್ತು ಘಟನೆ?

ACCIDENT-NEWS-GENERAL-IMAGE.

ಭದ್ರಾವತಿ: ರಸ್ತೆ ದಾಟುವಾಗ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರ ಎರಡು ಪಾದಗಳು (Feet) ಅರ್ಧಕ್ಕೆ ಮುರಿದಿವೆ. ಯಡೇಹಳ್ಳಿ ಮತ್ತು ಕೈಮರ ಗ್ರಾಮಗಳ ಮಧ್ಯದ ಕೈಮರ ಸರ್ಕಲ್‌ನಲ್ಲಿ ಘಟನೆ ಸಂಭವಿಸಿದೆ. ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಿಪ್ಪೇರುದ್ರಸ್ವಾಮಿ ಎಂಬುವವರನ್ನು ಅಶೋಕ ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೇಗಾಯ್ತು ಘಟನೆ? ತಿಪ್ಪೇರುದ್ರಸ್ವಾಮಿ ಅವರು ಕೈಮರ ಸರ್ಕಲ್‌ನಲ್ಲಿರುವ ಅಂಗಡಿಯಲ್ಲಿ ಟೀ ಕುಡಿಯಲು ಬೈಕ್‌ ನಿಲ್ಲಿಸಿದ್ದರು. ಮೂತ್ರ ವಿಸರ್ಜನೆಗೆಂದು ರೆಸ್ತೆ ದಾಟಿ ಹೋಗಿದ್ದರು. ಟೀ ಅಂಗಡಿ ಬಳಿ ಮರಳಿ ಬರುವಾಗ ಶಿವಮೊಗ್ಗದಿಂದ ಚನ್ನಗಿರಿ … Read more

ಶಿವಮೊಗ್ಗದಲ್ಲಿ 9 ವಾಹನಗಳು ಬಹಿರಂಗ ಹರಾಜು

Shimoga-News-update

ಶಿವಮೊಗ್ಗ: ಜಿಲ್ಲಾ ಅಬಕಾರಿ ಇಲಾಖೆಯು ಮುಟ್ಟುಗೋಲು (Auction) ಹಾಕಿಕೊಂಡಿರುವ 9 ದ್ವಿಚಕ್ರ ವಾಹನ ಹಾಗೂ 3 ನಾಲ್ಕು ಚಕ್ರದ ವಾಹನಗಳನ್ನು ಜೂನ್ 4ರಂದು ಬೆಳಿಗ್ಗೆ 11ಕ್ಕೆ ಅಬಕಾರಿ ನಿರೀಕ್ಷಕರ ಕಚೇರಿ, ಶಿವಮೊಗ್ಗ ವಲಯ ನಂ-1 ಕಚೇರಿಯ ಆವರಣದಲ್ಲಿ ಯಥಾಸ್ಥಿತಿಯಲ್ಲಿ ಬಹಿರಂಗ ಹರಾಜು ಮಾಡಲಾಗುತ್ತದೆ. ಆಸಕ್ತರು ನಿಗದಿತ ಅವಧಿಯಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಹಾಗೂ ಕಚೇರಿ ವೇಳೆಯಲ್ಲಿ ವಾಹನ ವೀಕ್ಷಿಸಬಹುದಾಗಿದೆ ಎಂದು ಅಬಕಾರಿ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಟೊಯೋಟ ಸಂಸ್ಥೆಯ ಡೆಮೋ ಕಾರುಗಳ ಮಾರಾಟ, … Read more

ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರ ನಿಷೇಧ, ಬದಲಿ ಮಾರ್ಗ ಸೂಚಿಸಿ ಡಿಸಿ ಆದೇಶ

AGUMBE-GHAT-THIRTHAHALLI.

SHIVAMOGGA LIVE NEWS | 27 JUNE 2024 THIRTHAHALLI : ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಆಗುಂಬೆಯಲ್ಲಿ (AGUMBE) ಭೂಕುಸಿತ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಜೂನ್‌ 27 ರಿಂದ ಸೆಪ್ಟೆಂಬರ್‌ 15ರವರೆಗೆ ಭಾರಿ ವಾಹನ ಸಂಚಾರ ನಿಷೇಧಿಸಿ, ಬದಲಿ ಮಾರ್ಗವನ್ನು ಗುರುತಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ. ಜಿಲ್ಲಿ ಸೇರಿದಂತೆ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಬದಲಿ ಮಾರ್ಗ 1 ತೀರ್ಥಹಳ್ಳಿ – ಉಡುಪಿ ಮಾರ್ಗದಲ್ಲಿ ಸಂಚರಿಸುವ ಭಾರಿ ವಾಹನಗಳು ತೀರ್ಥಹಳ್ಳಿ … Read more

ಶಿವಮೊಗ್ಗದಲ್ಲಿ ನಂದಿನಿ ಹಾಲಿನ ವಾಹನಕ್ಕೆ 25 ಸಾವಿರ ದಂಡ, ಕಾರಣವೇನು?

Traffic-police-in-Shimoga-city.

SHIVAMOGGA LIVE NEWS | 24 JUNE 2024 SHIMOGA : ಅಪ್ರಾಪ್ತನ ಕೈಗೆ ವಾಹನ ಚಾಲನೆಗೆ ಅವಕಾಶ ನೀಡಿ ನಿಯಮ ಉಲ್ಲಂಘಿಸಿದ ನಂದಿನಿ ಹಾಲಿನ ವಾಹನದ ಮಾಲೀಕನಿಗೆ ನ್ಯಾಯಾಲಯ ದಂಡ (Fine) ವಿಧಿಸಿದೆ. ನಗರದ ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಚಾಲಕನೊಬ್ಬ ಸಮವಸ್ತ್ರ ಧರಿಸದೆ ವಾಹನ ಚಲಾಯಿಸುತ್ತಿದ್ದ. ಸಂಚಾರ ಠಾಣೆ ಎಎಸ್‌ಐ ಮೋಹನ್‌ ಮತ್ತು ಸಿಬ್ಬಂದಿ ಕಿರಣ್‌ ಅವರು ವಾಹನವನ್ನು ತಡೆದು ಪರಿಶೀಲಿಸಿದಾಗ ನಂಬರ್‌ ಪ್ಲೇಟ್‌ ಸಹ ದೋಷದಿಂದ ಕೂಡಿತ್ತು. ವಾಹನ ಚಾಲಕ ಅಪ್ರಾಪ್ತ ಎಂದು ಪೊಲೀಸರಿಗೆ … Read more

ಮಟ ಮಟ ಮಧ್ಯಾಹ್ನ ವ್ಯಕ್ತಿಗೆ ಹೊಡೆದು, ಮೂಟೆಗಟ್ಟೆಲೆ ದಿನಸಿ ರಾಬರಿ, ಗೂಡ್ಸ್‌ ವಾಹನ ಕಳವು

SHIMOGA-APMC-GATE

SHIVAMOGGA LIVE NEWS | 22 JUNE 2024 SHIMOGA : APMCಯಲ್ಲಿ ವ್ಯಕ್ತಿಯೊಬ್ಬರನ್ನು ಹೊಡೆದು, ತಳ್ಳಿ, ಆತನ ಬಳಿಯಿದ್ದ ಬೀಗ ಕಸಿದುಕೊಂಡು ವಾಹನ ಹೊತ್ತೊಯ್ಯಲಾಗಿದೆ. ಘಟನೆ ಸಂಬಂಧ ಎನ್‌.ಆರ್‌.ಪುರದ ಕುಮಾರ್‌ ಎಂಬುವವರು ದೂರು ನೀಡಿದ್ದಾರೆ. ಹೇಗಾಯ್ತು ಘಟನೆ? ಶಿವಮೊಗ್ಗ ಎಪಿಎಂಸಿಯಲ್ಲಿ ಮಧ್ಯಾಹ್ನದ ವೇಳೆಗೆ ಕುಮಾರ್‌ ತಮ್ಮ ಗೂಡ್ಸ್‌ ವಾಹನಕ್ಕೆ ದಿನಸಿ ವಸ್ತುಗಳನ್ನು ಲೋಡ್‌ ಮಾಡಿಸುತ್ತಿದ್ದರು. ಈ ಸಂದರ್ಭ ಅಪರಿಚಿತರು ಕುಮಾರ್‌ ಮೇಲೆ ಏಕಾಏಕಿ ದಾಳಿ ನಡೆಸಿ, ಗೂಡ್ಸ್‌ ವಾಹನದ ಕೀ ಕಸಿದುಕೊಂಡಿದ್ದಾರೆ. ಗೂಡ್ಸ್‌ ವಾಹನವನ್ನು ಹೊತ್ತೊಯ್ದಿದ್ದಾರೆ … Read more

ಶಿವಮೊಗ್ಗ ಜಿಲ್ಲೆಯಲ್ಲಿ ವಾಹನ ಗಣತಿ, ಚಾಲಕರಿಗೆ ಲೋಕೋಪಯೋಗಿ ಇಲಾಖೆ ಮಹತ್ವದ ಸೂಚನೆ

Kuvempu-Road-Shimoga

SHIVAMOGGA LIVE NEWS | 01 MARCH 2024 SHIMOGA : ಲೋಕೋಪಯೋಗಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಸಾಲಿನ ವಾಹನ ಸಂಚಾರ ಗಣತಿ ನಡೆಸಲಾಗುತ್ತಿದೆ. ಫೆ. 29 ರಿಂದ ಮಾ.2ರವರೆಗೆ ಗಣತಿ ಕಾರ್ಯ ನಡೆಯಲಿದೆ. ಈ ಹಿನ್ನೆಲೆ ವಾಹನ ಚಾಲಕರು ಹಾಗೂ ಸಾರ್ವಜನಿಕರು ವಾಹನಗಳನ್ನು ನಿಧಾನವಾಗಿ ಚಲಾಯಿಸಿ ಸಹಕಾರ ನೀಡುವಂತೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ 2 ಟೋಲ್‌ಗಳಲ್ಲಿ ಯಾವ್ಯಾವ ವಾಹನಕ್ಕೆ ಎಷ್ಟು ನಿಗದಿಯಾಗಿದೆ … Read more

ವಾಹನಗಳಿಗೆ ದುಬಾರಿ ತೆರಿಗೆ, ಸಾಗರದಲ್ಲಿ ಆಕ್ರೋಶ, ಪ್ರತಿಭಟನಾಕಾರರ ಬೇಡಿಕೆ ಏನು?

Vehicle-owners-protest-in-sagara-over-tax-system.webp

SHIVAMOGGA LIVE NEWS | 11 SEPTEMBER 2023 SAGARA : ವಾಹನಗಳ ಮೇಲಿನ ಪೂರ್ಣಾವಧಿ ತೆರಿಗೆ (Vehicle Tax) ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ವಾಹನ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ಸಾಗರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮಹಾ ಗಣಪತಿ ದೇವಸ್ಥಾನದಿಂದ ಪ್ರದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ಹಲವು ಲಘು ವಾಹನಗಳು ಮೆರವಣಿಗೆಯಲ್ಲಿದ್ದವು. ಇದನ್ನೂ ಓದಿ – ಬೆಳ್ಳಂಬೆಳಗ್ಗೆ ಶಿವಮೊಗ್ಗ ಜಿಲ್ಲೆಯಲ್ಲಿ 241 ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ, ಖುದ್ದು … Read more

ಆಗುಂಬೆ ಘಾಟಿ, ಭಾರೀ ವಾಹನ ಸಂಚಾರ ನಿಷೇಧ ತೆರವು, 10 ದಿನ ಮೊದಲು ಆದೇಶ ಹಿಂಪಡೆದಿದ್ದೇಕೆ?

Agumbe-Ghat-Road

SHIVAMOGGA LIVE NEWS | 5 SEPTEMBER 2023 SHIMOGA : ಆಗುಂಬೆ ಘಾಟಿಯಲ್ಲಿ (Agumbe Ghat) ಭಾರಿ ವಾಹನ ಸಂಚಾರ ನಿಷೇಧವನ್ನು ಹಿಂಪಡೆಯಲಾಗಿದೆ. ಈ ಭಾರಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ – ಮಲ್ಪೆ ರಸ್ತೆ ಆಗುಂಬೆ ಘಾಟಿಯಲ್ಲಿ 6, 7 ಮತ್ತು 11 ನೇ ತಿರುವಿನಲ್ಲಿ ಭಾರಿ ಮಳೆಯಿಂದಾಗಿ ಮತ್ತು ಭಾರೀ ವಾಹನಗಳ ಓಡಾಟದಿಂದ ಸಣ್ಣ ಬಿರುಕು ಕಂಡು ಬಂದಿತ್ತು. ಅಲ್ಲಲ್ಲಿ … Read more