ಶಿವಮೊಗ್ಗದ ಮನೆಯಲ್ಲಿ ಹಚ್ಚಿದ್ದ ದೀಪ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವು

jayanagara police station in shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಸೆಪ್ಟೆಂಬರ್ 2021 ಆಕಸ್ಮಿಕವಾಗಿ ದೀಪ ಬಿದ್ದು ಬೆಂಕಿ ಹೊತ್ತುಕೊಂಡು ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆಯೊಬ್ಬರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಲಕ್ಷ್ಮಮ್ಮ (65) ಮೃತ ದುರ್ದೈವಿ. ವೆಂಕಟೇಶನಗರದ ಮನೆಯಲ್ಲಿ ಘಟನೆ ಸಂಭವಿಸಿದೆ. ಬುಧವಾರ ರಾತ್ರಿ ಮನೆಯಲ್ಲಿ ಕರೆಂಟ್ ಇಲ್ಲದ ಕಾರಣ ದೀಪ ಹಚ್ಚಿಟ್ಟು ನಿದ್ರೆಗೆ ಜಾರಿದ್ದರು. ಆಕಸ್ಮಿಕವಾಗಿ ದೀಪ ಬಿದ್ದು ಲಕ್ಷ್ಮಮ್ಮ ಅವರ ಸೀರೆಗೆ ಬೆಂಕಿ ಹೊತ್ತುಕೊಂಡಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಲಕ್ಷ್ಮಮ್ಮ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. … Read more