ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ
ಶಂಕರಘಟ್ಟ: ಕಳೆದ ವಾರಾಂತ್ಯದಲ್ಲಿ ಮುಕ್ತಾಯಗೊಂಡ ಬಿಆರ್ಪಿ ಲೆಜೆಂಡ್ಸ್ ಆಶ್ರಯದಲ್ಲಿ ನಡೆದ ಮೂರು ದಿನಗಳ 40 ವರ್ಷ ಮೇಲ್ಪಟ್ಟವರ ಕ್ರಿಕೆಟ್ (Cricket) ಪಂದ್ಯಾವಳಿಯು 80-90ರ ದಶಕದ ಹಳೆಯ ಸ್ನೇಹಿತರ ಭಾವನಾತ್ಮಕ ಸಮ್ಮಿಲನಕ್ಕೆ ಸಾಕ್ಷಿಯಾಯಿತು. ರಾಜ್ಯದ ನಾನಾ ಭಾಗಗಳಲ್ಲಿ ನೆಲೆಸಿರುವ ಅಂದಿನ ಚಿಣ್ಣರು, ಹುಡುಗಾಟಿಕೆಯ ದಿನಗಳನ್ನು ಮೆಲುಕು ಹಾಕುತ್ತಾ ಕ್ರಿಕೆಟ್ ಆಡುವ ಮೂಲಕ ತಮ್ಮಲ್ಲಿ ಇನ್ನೂ ಕ್ರೀಡಾ ಸ್ಫೂರ್ತಿ ಮತ್ತು ಚೈತನ್ಯದ ಚಿಲುಮೆ ಹಸಿರಾಗಿರುವುದನ್ನು ಸಾಬೀತುಪಡಿಸಿದರು. ಕಳೆದ 4 ವರ್ಷದಿಂದ ಈ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಕುವೆಂಪು ವಿಶ್ವವಿದ್ಯಾಲಯದ ಡಾ. … Read more