‘ನಮ್ಮ ಸಮುದಾಯದ 85 ಕೋಟಿ ಸಾಲ ಮನ್ನಾ ಮಾಡಿ, ಜಾತಿ ಗಣತಿ ವರದಿ ಬಿಡುಗಡೆ ಮಾಡಿ’, ಸಿಎಂಗೆ ನಂಜುಂಡಿ ಮನವಿ*

160820 KP Nanjundi press Meet in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಆಗಸ್ಟ್ 2020 ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ಸಮುದಾಯದ ಜನರಿಗೆ ಈವರೆಗೂ ಕೊಟ್ಟಿರುವ ಸಾಲ ಮತ್ತು ಅದರ ಬಡ್ಡಿ ಮನ್ನಾ ಮಾಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಮನವಿ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಪಿ.ನಂಜುಂಡಿ, ಕರೋನ ಹಿನ್ನೆಲೆಯಲ್ಲಿ ವಿಶ್ವಕರ್ಮ ಸಮುದಾಯದವರು ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಕೆಲಸ ಮಾಡಲು ಸಮುದಾಯದ ಜನರು ಸಿದ್ಧವಿದ್ದಾರೆ. ಆದರೆ ಕೆಲಸ ತೆಗೆದುಕೊಳ್ಳಲು ಯಾರು ಬರುತ್ತಿಲ್ಲ. ಹಾಗಾಗಿ ಸಾಲ ಮನ್ನಾ … Read more