ರೈತನ ಮೇಲೆ ಕಾಡು ಹಂದಿ ದಾಳಿ, ತೀವ್ರ ಗಾಯ, ಹೇಗಾಯ್ತು ಘಟನೆ?

SAGARA-NEWS-UPDATE

ಸಾಗರ: ತಾಲೂಕಿನ ಬಾರಂಗಿ ಹೋಬಳಿಯ ಕಾನೂರು ಗ್ರಾಮದಲ್ಲಿ ಕೃಷಿಕ ರಾಮಪ್ಪ ಜಟ್ಟನಾಯಕ (60) ಎಂಬುವವರ ಮೇಲೆ ಕಾಡು ಹಂದಿ (Wild Boar) ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದೆ. ಕೊಟ್ಟಿಗೆಗೆ ದರಗು ತರಲು ಕಾಡಿಗೆ ತೆರಳಿದ್ದಾಗ ಹಂದಿಯು ನಾಯಿ ಮೇಲೆ ದಾಳಿಗೆ ಯತ್ನಿಸಿದೆ. ನಾಯಿ ಓಡಿ ಹೋಗುತ್ತಿದ್ದಂತೆ ರಾಮಪ್ಪ ಅವರ ಮೇಲೆ ಎರಗಿ, ಹೊಟ್ಟೆಗೆ ತಿವಿದು, ಕಚ್ಚಿ ಗಾಯಗೊಳಿಸಿದೆ. ಸ್ಥಳೀಯರು ಅವರನ್ನು ರಕ್ಷಿಸಿ ಸಾಗರ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಇದನ್ನೂ ಓದಿ » ಜೋಗದಲ್ಲಿ … Read more