ಶಿಕಾರಿಪುರದಲ್ಲಿ ಒಂಟಿ ಸಲಗ ಪ್ರತ್ಯಕ್ಷ, ಗ್ರಾಮಸ್ಥರಲ್ಲಿ ಆತಂಕ, ಅರಣ್ಯ ಇಲಾಖೆ ಏನೆಲ್ಲ ಕ್ರಮ ಕೈಗೊಂಡಿದೆ?
ಶಿರಾಳಕೊಪ್ಪ: ಶಿಕಾರಿಪುರ ತಾಲೂಕಿನ ಸುಣ್ಣದಕೊಪ್ಪ, ಕೊರಟಿಕೆರೆ ಮತ್ತು ಮಾಯಿತಮ್ಮನ ಮುಚಡಿ ಗ್ರಾಮಗಳ ಸುತ್ತಮುತ್ತ ಒಂಟಿ ಸಲಗ (lone elephant) ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಸುಣ್ಣದಕೊಪ್ಪದ ಕಡೆಗದ್ದೆಯ ಜೋಳದ ಹೊಲದಲ್ಲಿ ಆನೆಯ ಹೆಜ್ಜೆ ಗುರುತು ಮತ್ತು ಲದ್ದಿಯನ್ನು ಕಂಡ ರೈತರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದರು. ಭದ್ರಾ ವನ್ಯಜೀವಿ ವಲಯದಿಂದ ಬಂದ ಆನೆ ಇದಾಗಿದ್ದು ಶೆಟ್ಟಿಹಳ್ಳಿ, ಅರಸಾಳು, ರಿಪ್ಪನ್ ಪೇಟೆ, ಚೋರಡಿ, ಸೊರಬದ ಉಳವಿ, ಸಾಗದ್ದೆ, ಕೊಡಕಣಿ, ತೊಗರ್ಸಿ ಮೂಲಕ ಬ್ಯಾಡಗಿ ವರೆಗೂ ಸಂಚಾರ ನಡೆಸಿ ರಾತ್ರಿ … Read more