ತಾಳಗುಪ್ಪದಲ್ಲಿ ನೂರು ಮನೆ ಇರುವ ರಸ್ತೆ ಸೀಲ್ ಡೌನ್, ಜನ ಹೊರ ಬರುವಂತಿಲ್ಲ, ಗುಂಪುಗೂಡುವಂತಿಲ್ಲ
ಶಿವಮೊಗ್ಗ ಲೈವ್.ಕಾಂ | SAGARA NEWS | 2 MAY 2021 ತಾಳಗುಪ್ಪದ ರಂಗನಾಥ ಬೀದಿಯನ್ನು ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. 13 ಮಂದಿಯಲ್ಲಿ ಕೋರನ ಕಾಣಿಸಿಕೊಂಡ ಹಿನ್ನೆಲೆ, ರಸ್ತೆಗೆ ಬ್ಯಾರಿಕೇಡ್ ಹಾಕಿ, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪೊಲೀಸ್ ಠಾಣೆ ಪಕ್ಕದಿಂದ ಗೌರಿಕೆರೆ ರಸ್ತೆ ಸೇರುವವರಗೆ ಕಂಟೇನ್ಮೆಂಟ್ ಜೋನ್ ಎಂದು ತಹಶೀಲ್ದಾರ್ ಆದೇಶಿಸಿದ್ದಾರೆ. ಈ ರಸ್ತೆಯಲ್ಲಿ ಜನ ಮನೆಯಿಂದ ಹೊರಬರಬಾರದು, ಗುಂಪುಗೂಡಬಾರದು ಎಂದು ಸೂಚಿಸಲಾಗಿದೆ. ನೂರಕ್ಕೂ ಹೆಚ್ಚು ಮನೆಗಳು, ಐನೂರಕ್ಕೂ ಹೆಚ್ಚು ಮಂದಿ ಕಂಟೈನ್ಮೆಂಟ್ ಜೋನ್ ವ್ಯಾಪ್ತಿಯಲ್ಲಿದ್ದಾರೆ. … Read more