ಚಪ್ಪಲಿ ಸ್ಟ್ಯಾಂಡ್‌ನ ಮನೆ ಬೀಗ ಇಡ್ತೀರಾ? ಭದ್ರಾವತಿಯಲ್ಲಿ ದಾಖಲಾಯ್ತು ಕೇಸ್‌, ಏನದು?

ಭದ್ರಾವತಿ: ಮನೆ ಬೀಗದ ಕೀಲಿಯನ್ನು ಚಪ್ಪಲಿ ಸ್ಟ್ಯಾಂಡ್‌ನಲ್ಲಿ ಇಟ್ಟು ದೇವಸ್ಥಾನಕ್ಕೆ ತೆರಳಿದ್ದ ವೇಳೆ ಕಳ್ಳರು ಮನೆಗೆ ನುಗ್ಗಿ ₹2.40 ಲಕ್ಷ ಮೌಲ್ಯದ 30 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾರೆ. ಭದ್ರಾವತಿ ನಗರದ ಗಣೇಶ ಕಾಲೋನಿಯಲ್ಲಿ ಘಟನೆ ನಡೆದಿದೆ. (ಈ ಸುದ್ದಿಯನ್ನು ಇನ್ನು 40 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ವಿಜಯ ವಿ. ಪ್ರಭು ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ನವರಾತ್ರಿ ಹಬ್ಬದ ಸಂದರ್ಭ ವಿಜಯ ಅವರು ಸಂಜೆ ವಿಐಎಸ್‌ಎಲ್ ಆಸ್ಪತ್ರೆ ಬಳಿ ಇರುವ ಕರು ಮಾರಿಯಮ್ಮ ದೇವಸ್ಥಾನಕ್ಕೆ ಪೂಜೆಗೆ ತೆರಳಿದ್ದರು. ಈ ವೇಳೆ ಮನೆಗೆ ಬೀಗ ಹಾಕಿ, ಕೀಲಿಯನ್ನು ಚಪ್ಪಲಿ ಸ್ಟ್ಯಾಂಡ್ ಬಳಿ ಇಟ್ಟು ಹೋಗುತ್ತಿದ್ದರು. ಇದನ್ನು ಗಮನಿಸಿದ ಕಳ್ಳರು ಕೀಲಿಕೈ ಬಳಸಿ ಮನೆ ಬಾಗಿಲು ಹಾಗೂ ಮಲಗುವ ಕೋಣೆಯಲ್ಲಿದ್ದ ಬೀರುವು ತೆರೆದು 30 ಗ್ರಾಂ ತೂಕದ ಚಿನ್ನದ ಓಲೆಗಳು ಮತ್ತು ಉಂಗುರವನ್ನು ಕಳವು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

New-Town-Police-Station-Bhadravathi

ನವರಾತ್ರಿ ಸಂದರ್ಭ ಘಟನೆ ನಡೆದಿದ್ದು ತಡವಾಗಿ ದೂರು ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಭದ್ರಾವತಿಯ ನ್ಯೂ ಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.