ಕೊಲೆ ಯತ್ನ, ತೊಡೆಯಲ್ಲೆ ಸಿಕ್ಕಿಬಿದ್ದ ಚಾಕು, ಅದೇ ಸ್ಥಿತಿಯಲ್ಲಿ ಯುವಕ ಆಸ್ಪತ್ರೆಗೆ ದಾಖಲು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

BHADRAVATHI | ಹಳೆ ದ್ವೇಷದ ಹಿನ್ನೆಲೆ ವ್ಯಕ್ತಿಯೊಬ್ಬರ (YOUTH) ಹತ್ಯೆಗೆ ಯತ್ನಿಸಲಾಗಿದೆ. ಈ ವೇಳೆ ಆರೋಪಿಗಳು ಚುಚ್ಚಿದ ಚಾಕು ವ್ಯಕ್ತಿಯ ತೊಡೆಯಲ್ಲಿ ಸಿಕ್ಕಿಬಿದ್ದಿದೆ. ನೋವಿನಿಂದ ಒದ್ದಾಡುತ್ತಿದ್ದ ಆತನನ್ನು ಸ್ನೇಹಿತರು ಮತ್ತು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ.

Shimoga Nanjappa Hospital

ಭದ್ರಾವತಿ ಹೊಸಮನೆಯ ಆಶ್ವಥನಗರದ ಕಿರಣ (31) ಎಂಬುವವರ ಹತ್ಯೆಗೆ ಯತ್ನಿಸಲಾಗಿದೆ. ಅಂತರಗಂಗೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ.

ದೇವಸ್ಥಾನಕ್ಕೆ ಹೋಗಿದ್ದರು

ಕಿರಣ ತನ್ನ ಸ್ನೇಹಿತರಾದ ನವೀನ್ ಮತ್ತು ಶ್ರೀಕಾಂತ್ ಎಂಬುವವರ ಜೊತೆಗೆ ಸೆ.20ರ ಸಂಜೆ ಅಂತರಗಂಗೆಯಲ್ಲಿರುವ ಶಿವನ ದೇವಸ್ಥಾನಕ್ಕೆ ತೆರಳಿದ್ದರು. ಪೂಜೆ ಮುಗಿಸಿ ಹೊರಬಂದು ದೇಗುಲದ ಬಳಿ ನಿಂತು ಮಾತನಾಡುತ್ತಿದ್ದರು.

ಇದೆ ವೇಳೆ ದೇಗುಲದ ಬಳಿ ಬಂದ ಮನು ಮತ್ತು ಮಹೇಶ್ ಎಂಬುವವರು ಕಿರಣನ ಕಂಡ ಕೂಡಲೆ ಆಕ್ರೋಶಗೊಂಡು, ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೆ ಚಾಕುವಿನಿಂದ ಕಿರಣನ (YOUTH) ಹೊಟ್ಟೆಗೆ ಚುಚ್ಚಲು ಮುಂದಾಗಿದ್ದಾರೆ. ಕಿರಣ ಎಡಗೈ ಅಡ್ಡ ಹಿಡಿದ್ದಿದ್ದರಿಂದ ಕೈಗೆ ಗಂಭೀರ ಗಾಯವಾಗಿದೆ. ಚಾಕು ಹಿಂದಕ್ಕೆ ಎಳೆದುಕೊಂಡ ಆರೋಪಿಗಳು ಮತ್ತೆ ಚುಚ್ಚಿದಾಗ ಎಡ ತಡೆಯೊಳಗೆ ಸಿಲುಕಿಕೊಂಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಚಾಕು ಚುಚ್ಚಿಕೊಂಡು ನೋವಿನಲ್ಲಿ ಒದ್ದಾಡುತ್ತಿದ್ದ ಕಿರಣನನ್ನು ಕೂಡಲೆ ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗದಲ್ಲಿ ಶಂಕಿತರ ವಿಚಾರಣೆ ತೀವ್ರ, ಗುಪ್ತಚರ ಅಧಿಕಾರಿಗಳು ದೌಡು, ಹೈಟೆಕ್ ಕಂಪ್ಯೂಟರ್ ಆಗಮನ

Shimoga Nanjappa Hospital

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 22, 2022

Leave a Comment