ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
HOLEHONNURU NEWS, 4 NOVEMBER 2024 : ಪತ್ರಕರ್ತರ ಸೋಗಿನಲ್ಲಿ ಅಡಿಕೆ ತುಂಬಿದ ಲಾರಿ (TRUCK) ಅಡ್ಡಗಟ್ಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರನ್ನು ಬಂಧಿಸಲಾಗಿದೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಶಿವಮೊಗ್ಗ ಮೂಲದ ನವೀನ್ ಹಾಗೂ ಸತೀಶ್ ಬಂಧಿತರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶುಕ್ರವಾರ ರಾತ್ರಿ ಶಿವಮೊಗ್ಗ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ ಅಡಕೆ ತುಂಬಿದ ಲಾರಿ ಅಡ್ಡಗಟ್ಟಿದ ನಾಲ್ವರು, ತಾವು ಪತ್ರಕರ್ತರು ಎಂದು ಹೇಳಿಕೊಂಡು ಲಾರಿ ಚಾಲಕನ ಬಳಿ 30 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡುವಂತೆ ಒಂದು ತಾಸಿಗೂ ಹೆಚ್ಚು ಸಮಯ ಲಾರಿ ಚಾಲಕ, ಕ್ಲೀನರ್ ಬಳಿ ಮಾತಿನ ಚಕಮಕಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಬೆಳಗ್ಗೆ ಶಾಲೆಗೆ ಆಗಮಿಸಿದ ಸಿಬ್ಬಂದಿಗೆ ಕಾದಿತ್ತು ಶಾಕ್, ಆಗಿದ್ದೇನು?
ಲಾರಿ ಮಾಲೀಕನಿಗೆ ಚಾಲಕ ವಿಷಯ ತಿಳಿಸಿದ್ದು, ಕೂಡಲೇ ಅಡಿಕೆಗೆ ಸಂಬಂಧಿಸಿದವರು ಸ್ಥಳಕ್ಕೆ ಬಂದಿದ್ದಾರೆ. ಹೆದ್ದಾರಿ ಗಸ್ತು ವಾಹನ ಸಹ ಸ್ಥಳಕ್ಕೆ ಬಂದಿದೆ. ಅಷ್ಟರಲ್ಲಿ ನಾಲ್ವರ ಗುಂಪು ಚಾಲಕನಿಂದ 12 ಸಾವಿರ ರೂ. ಪಡೆದು ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Two impostor journalists arrested for extortion. They, along with two others, blocked an areca nut-laden lorry on Shivamogga-Chitradurga highway, demanding ₹30 lakh from the driver, claiming to be journalists. The lorry owner informed authorities; two arrested, two absconding. Case filed at Holehonnuru police station.