ಭದ್ರಾವತಿ ಶಿವನಿ ಕ್ರಾಸ್‌ ಬಳಿ ಭೀಕರ ಅಪಘಾತ, ಬೈಕ್‌ ನುಜ್ಜುಗುಜ್ಜು, ಚರಂಡಿಗೆ ಇಳಿದ ಕಾರು

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಭದ್ರಾವತಿ: ಇಲ್ಲಿನ ಭದ್ರಾವತಿ – ತರೀಕೆರೆ ಮುಖ್ಯ ರಸ್ತೆಯ ಶಿವನಿ ಕ್ರಾಸ್ ಬಳಿ ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ನಗರದ ಭೂತನಗುಡಿ ನಿವಾಸಿಗಳಾದ ಪನ್ನೀರ ಸೆಲ್ವಂ (70) ಹಾಗೂ ಕುಪ್ಪುರಾಣಿ (65) ಗಾಯಗೊಂಡವರು. ಸ್ಕೂಟರ್‌ನಲ್ಲಿ ಭದ್ರಾವತಿ ನಗರದಿಂದ ಶಿವನಿ ಕ್ರಾಸ್ ಕಡೆಗೆ ಇವರು ತೆರಳುತ್ತಿದ್ದರು. ಬಾರಂದೂರಿನಿಂದ ಭದ್ರಾವತಿ ಕಡೆಗೆ ಬರುತ್ತಿದ್ದ ಕಾರು ಶಿವನಿ ಕ್ರಾಸ್‌ನ ಪೆಟ್ರೋಲ್ ಬಂಕ್ ಬಳಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ಕೂಟರ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಚರಂಡಿಗೆ ಇಳಿದಿದೆ.

Car-and-Bike-accident-near-Shivani-cross-in-Bhadravathi

ಗಾಯಾಳುಗಳನ್ನು ತಕ್ಷಣವೇ ಭದ್ರಾವತಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಭದ್ರಾವತಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.