SHIVAMOGGA LIVE NEWS | 8 DECEMBER 2022
ಭದ್ರಾವತಿ : ಒಂದು ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯ ಕೈಗಾರಿಕ ಹಬ್ ಆಗಿದ್ದ ಕ್ಷೇತ್ರ, ಭದ್ರಾವತಿ. ಇಲ್ಲಿ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷಗಳ ಹಣಾಹಣಿಗಿಂತಲು ವ್ಯಕ್ತಿ ಪ್ರತಿಷ್ಠೆಯೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಬಾರಿ ತುಸು ವಿಭಿನ್ನ ಚಿತ್ರಣವಿದೆ. ಮಾಜಿ ಶಾಸಕ ಅಪ್ಪಾಜಿ ಗೌಡ ಅವರು ಇಲ್ಲದೆ ಈ ಚುನಾವಣೆ ನಡೆಯುತ್ತಿದೆ. Bhadravathi Legislative Assembly
1957ರಲ್ಲಿ ಭದ್ರಾವತಿ ಕ್ಷೇತ್ರದಲ್ಲಿ ಮೊದಲ ಚುನಾವಣೆ ನಡೆಯಿತು. ಆ ಬಳಿಕ ಕ್ಷೇತ್ರವು 14 ವಿಧಾನ ಸಭೆ ಚುನಾವಣೆ ಕಂಡಿದೆ. 1994ರ ಚುನಾವಣೆ ಬಳಿಕ ಈ ಕ್ಷೇತ್ರದ ರಾಜಕೀಯ ಮತ್ತೊಂದು ಮಜಲು ಪಡೆಯಿತು. ಇಬ್ಬರು ಪ್ರಬಾವಿ ನಾಯಕರ ನಡುವೆ ನೇರಾನೇರ ಕದನ ಏರ್ಪಟ್ಟಿತು.
Bhadravathi Legislative Assembly
ಕಾರ್ಮಿಕ ಕೇಂದ್ರಿತ ರಾಜಕೀಯ
ವಿಐಎಸ್ಎಲ್, ಎಂಪಿಎಂ ಕಾರ್ಖಾನೆಗಳು ಇದ್ದಿದ್ದರಿಂದ ಭದ್ರಾವತಿಯನ್ನು ಶಿವಮೊಗ್ಗ ಜಿಲ್ಲೆಯ ಕೈಗಾರಿಕ ಹಬ್ ಎಂದು ಬಣ್ಣಿಸಲಾಗುತ್ತಿತ್ತು. ಕಾರ್ಮಿಕ ಸಂಘಟನೆಗಳು, ಕಾರ್ಮಿಕರು ನಾಯಕರು ಇಲ್ಲಿ ಅತ್ಯಂತ ಪ್ರಭಾವಶಾಲಿಗಳಾಗಿದ್ದರು. ಈಗ ರಾಜಕೀಯವಾಗಿ ಸಕ್ರಿಯವಾಗಿರುವ ಹಲವರು ಕಾರ್ಮಿಕ ನಾಯಕರಾಗಿ ಹೋರಾಟಗಳು ನಡೆಸಿದವರೆ.
ಭದ್ರಾವತಿ ಕ್ಷೇತ್ರವು 1957ರಲ್ಲಿ ಮೊದಲ ವಿಧಾನಸಭೆ ಚುನಾವಣೆ ಕಂಡಿತು. ಆಗ ಡಿ.ಟಿ.ಸೀತಾರಾಮ ರಾವ್ (ಕಾಂಗ್ರೆಸ್), 1962ರಲ್ಲಿ ಟಿ.ಡಿ.ದೇವೇಂದ್ರಪ್ಪ (ಕಾಂಗ್ರೆಸ್), 1967ರಲ್ಲಿ ಎ.ಕೆ.ಅನ್ವರ್ (ಪ್ರಜಾ ಸೋಷಿಯಲಿಸ್ಟ್ ಪಾರ್ಟಿ), 1972ರಲ್ಲಿ ಎ.ಕೆ.ಅನ್ವರ್ (ಕಾಂಗ್ರೆಸ್), 1978ರಲ್ಲಿ ಜಿ.ರಾಜಶೇಖರ್, 1983ರಲ್ಲಿ ಎಸ್.ಸಿದ್ದಪ್ಪ (ಜನತಾ ಪಕ್ಷ), 1985ರಲ್ಲಿ ಎಸ್.ಸಿದ್ದಪ್ಪ (ಸ್ವತಂತ್ರ), 1989ರಲ್ಲಿ ಇಸಾಮಿಯಾ (ಕಾಂಗ್ರೆಸ್) ಆಯ್ಕೆಯಾಗಿದ್ದರು.
ಇದನ್ನೂ ಓದಿ – ಕ್ಷೇತ್ರ ಪರಿಚಯ | ಶಿವಮೊಗ್ಗ ಗ್ರಾಮಾಂತರ – 2 ಪರ್ಸೆಂಟ್ ಮತಗಳಿಂದ ಗೆಲುವು, ಸೋಲು ನಿರ್ಧಾರವಾಗಿತ್ತು
1994 ಮತ್ತು 1999ರಲ್ಲಿ ಎಂ.ಜೆ.ಅಪ್ಪಾಜಿ ಗೌಡ (ಸ್ವತಂತ್ರ), 2004ರಲ್ಲಿ ಬಿ.ಕೆ.ಸಂಗಮೇಶ್ವರ (ಸ್ವತಂತ್ರ), 2008ರಲ್ಲಿ ಬಿ.ಕೆ.ಸಂಗಮೇಶ್ವರ (ಕಾಂಗ್ರೆಸ್), 2013ರಲ್ಲಿ ಎಂ.ಜೆ.ಅಪ್ಪಾಜಿಗೌಡ (ಜೆಡಿಎಸ್), 2018ರಲ್ಲಿ ಬಿ.ಕೆ.ಸಂಗಮೇಶ್ವರ (ಕಾಂಗ್ರೆಸ್) ಗೆದ್ದಿದ್ದಾರೆ.
Bhadravathi Legislative Assembly
2018ರ ಚುನಾವಣೆ ಫಲಿತಾಂಶ
ಅಭ್ಯರ್ಥಿ | ಪಡೆದ ಮತ |
ಬಿ.ಕೆ.ಸಂಗಮೇಶ್ವರ | 75,722 |
ಎಂ.ಜೆ. ಅಪ್ಪಾಜಿಗೌಡ | 64,155 |
ಗೆಲುವಿನ ಅಂತರ | 11,567 |
2018ರ ಮತದಾರರ ವಿವರ
ಒಟ್ಟು ಮತದಾರರು | 2,07,749 |
ಚಲಾವಣೆಯಾದ ಮತ | 1,51,450 |
ಶೇಕಡವಾರು ಮತದಾನ | 73.67 |
ಜಾತಿವಾರು ಬಲಾಬಲ
ಭದ್ರಾವತಿ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಇದರ ಹೊರತು ಲಿಂಗಾಯತ ಸಮುದಾಯ, ಮುಸ್ಲಿಮರು, ಪರಿಶಿಷ್ಟ ಜಾತಿ, ಪಂಗಡದವರು ನಿರ್ಣಾಯಕರಾಗುತ್ತಾರೆ. ಕುರುಬ ಸಮುದಾಯ, ಬ್ರಾಹ್ಮಣರು, ಈಡಿಗ ಸಮುದಾಯದವರು ಕೂಡ ಇಲ್ಲಿ ಪ್ರಮುಖವಾಗುತ್ತಾರೆ.
ಅಪ್ಪಾಜಿಗೌಡರಿಲ್ಲದ ಮೊದಲ ಚುನಾವಣೆ
ಭದ್ರಾವತಿ ಕ್ಷೇತ್ರದಲ್ಲಿ ಮಾಜಿ ಶಾಸಕ ಅಪ್ಪಾಜಿ ಗೌಡ ಅವರು ಇಲ್ಲದ ಮೊದಲ ಚುನಾವಣೆ ಇದು. ಹಾಗಾಗಿ ಜೆಡಿಎಸ್ ಪಕ್ಷದಿಂದ ಅಪ್ಪಾಜಿ ಗೌಡ ಅವರ ಪತ್ನಿ ಶಾರದಾ ಅಪ್ಪಾಜಿಗೌಡ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಇನ್ನು, ಕಾಂಗ್ರೆಸ್ ಪಕ್ಷದಿಂದ ಬಿ.ಕೆ.ಸಂಗಮೇಶ್ವರ ಅವರು ಪುನರಾಯ್ಕೆ ಬಯಸಿ ಅಖಾಡಕ್ಕೆ ಇಳಿಯಲಿದ್ದಾರೆ.
ಕಳೆದ ಬಾರಿಯಂತೆ ಈ ಬಾರಿಯು ಬಿಜೆಪಿಯಲ್ಲಿ ಹಲವು ಅಪೇಕ್ಷಿತರಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಅಪೇಕ್ಷಿತರನ್ನೆಲ್ಲ ಪಕ್ಕಕ್ಕೆ ಸರಿಸಿ ಅಚ್ಚರಿಯ ಅಭ್ಯರ್ಥಿಯನ್ನು ಪ್ರಕಟಿಸಲಾಗಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಅಂತಹ ನಿರ್ಧಾರ ಪ್ರಟಿಸುವ ಸಾದ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ – ಕ್ಷೇತ್ರ ಪರಿಚಯ | ಶಿವಮೊಗ್ಗ ಕ್ಷೇತ್ರ, ಜಾತಿ ಲೆಕ್ಕಾಚಾರ ತಲೆ ಕೆಳಗಾಗಿಸಿದ ಕ್ಷೇತ್ರ, ಹಿನ್ನೆಲೆ ಏನು?
2023ರ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಅಪ್ಪಾಜಿ ಗೌಡ ಅವರು ಇಲ್ಲ ಎಂಬ ಸಿಂಪಥಿ ಕೆಲಸ ಮಾಡುತ್ತೆದೆಯೋ, ಸಂಗಮೇಶ್ವರ ಅವರು ಪುನರಾಯ್ಕೆ ಆಗುತ್ತಾರೋ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಆದರೆ ಯಾರೆ ಗೆದ್ದರು ‘ವಿಐಎಸ್ಎಲ್, ಎಂಪಿಎಂ ಕಾರ್ಖಾನೆಗಳನ್ನ ಪುನಾರಂಭ ಮಾಡಿ’ ಎಂದು ಜನರು ಬೇಡಿಕೆ ಇಡುತ್ತಿದ್ದಾರೆ. ಕಾರ್ಖಾನೆಗಳು ಪುನಾರಂಭವಾದರೆ ಕ್ಷೇತ್ರ ಆರ್ಥಿಕವಾಗಿ ಸದೃಢವಾಗಲಿದೆ. ಜೊತೆಗೆ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200