ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 05 ಜುಲೈ 2019
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತೀವ್ರ ವಿರೋಧದ ನಡುವೆಯೂ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು (VISL) ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಭಾರತೀಯ ಉಕ್ಕು ಪ್ರಾಧಿಕಾರ (SAIL) ಜಾಗತಿಕ ಟೆಂಡರ್ ಕರೆದಿದೆ. ಇದರ ಜಾಹೀರಾತನ್ನು ರಾಷ್ಟ್ರೀಯ ಪತ್ರಿಕೆಗಳು ಮತ್ತು SAIL ವೆಬ್’ಸೈಟ್’ನಲ್ಲಿ ಪ್ರಕಟಿಸಲಾಗಿದೆ.
25 ದಿನದ ಅವಕಾಶ
VISL ಜೊತೆಗೆ ಇನ್ನೆರಡು ಕಾರ್ಖಾನೆಗಳನ್ನು ಮಾರಟ ಮಾಡುತ್ತಿರುವುದಾಗಿ SAIL ಪ್ರಕಟಿಸಿದೆ. ಸೇಲಂ ಮತ್ತು ದುರ್ಗಾಪುರದಲ್ಲಿರುವ ಕಾರ್ಖಾನೆಗಳನ್ನು ಟೆಂಡರ್’ನಲ್ಲಿ ಪ್ರಕಟಿಸಲಾಗಿದೆ. ಕಾರ್ಖಾನೆಗಳ ಖರೀದಿಗೆ SAIL ಕೇವಲ 25 ದಿನದ ಅವಕಾಶ ನೀಡಿದೆ. ಆಗಸ್ಟ್ 1 ಕಡೆಯ ದಿನಾಂಕವಾಗಿದೆ.
ಯಾರು ಖರೀದಿ ಮಾಡಬಹುದು?
VISL ಕಾರ್ಖಾನೆ ಖರೀದಿಯ ಬಿಡ್’ನಲ್ಲಿ ಭಾಗವಹಿಸುವ ಕಂಪೆನಿಗಳಿಗೆ ಕೆಲವು ಷರತ್ತುಗಳಿವೆ. 100 ಕೋಟಿ ರೂ. ಆಸ್ತಿ ಹೊಂದಿರುವ, ಕಳೆದ ಮೂರು ವರ್ಷದಲ್ಲಿ 1600 ಕೋಟಿ ರೂ. ವಹಿವಾಟು ನಡೆಸಿರುವ ಯಾವುದೇ ಕಂಪೆನಿ ಬಿಡ್’ನಲ್ಲಿ ಪಾಲ್ಗೊಳ್ಳಬಹುದು ಎಂದು SAIL ತಿಳಿಸಿದೆ.
ಸಂಸತ್ತಿನಲ್ಲಿ ಧ್ವನಿ ಎತ್ತಿದ ಎರಡೇ ದಿನಕ್ಕೆ..!
VISL ಪುನಶ್ಚೇತನಗೊಳಿಸಬೇಕು ಎಂದು ಸಂಸದ ರಾಘವೇಂದ್ರ, ಎರಡು ದಿನದ ಹಿಂದಷ್ಟೇ ಸಂಸತ್ತಿನಲ್ಲಿ ಮಾತನಾಡಿದ್ದರು. ಇನ್ನು, ಇದಕ್ಕೂ ಮೊದಲು ಬಿಜೆಪಿ ಮುಖಂಡರು, ಯಾವುದೇ ಕಾರಣಕ್ಕೂ VISL ಕಾರ್ಖಾನೆ ಖಾಸಗಿಗೆ ವಹಿಸಲು ಬಿಡುವುದಿಲ್ಲ ಎಂದೂ ಭರವಸೆ ನೀಡಿದ್ದರು. ಅದರೆ ಈಗ ಕೇಂದ್ರ ಸರ್ಕಾರ ಕಾರ್ಖಾನೆ ಮಾರಾಟಕ್ಕೆ ಮುಂದಾಗಿರುವುದು ಕಾರ್ಮಿಕರ ಆಕ್ರೋಶಕ್ಕೆ ತುತ್ತಾಗಿದೆ. ಈಗಾಗಲೇ ಹೋರಾಟಕ್ಕೆ VISL ಕಾರ್ಮಿಕರು ಸಿದ್ಧಗೊಳ್ಳುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]