ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 JANUARY 2024
BHADRAVATHI : ವಿಐಎಸ್‌ಎಲ್ ಕಾರ್ಖಾನೆಯನ್ನು 2023ರ ಜ.16ರಂದು ಕೇಂದ್ರ ಸರ್ಕಾರ ಮುಚ್ಚಲು ಆದೇಶಿಸಿತ್ತು. ಈ ಆದೇಶಕ್ಕೆ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆ ಅಂದು ಭದ್ರಾವತಿಯಲ್ಲಿ ಕರಾಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಂದು ಸಂಜೆ 5ಗಂಟೆಗೆ ನಗರದೆಲ್ಲೆಡೆ ಪಂಜಿನ ಮೆರವಣಿಗೆ ನಡೆಸಲಾಗುತ್ತಿದೆ ಎಂದು ವಿಐಎಸ್ ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್.ಜಿ.ಸುರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗ ನಗರದಲ್ಲಿ ಜ.12ರಂದು ವಾಹನ ಸಂಚಾರ ಮಾರ್ಗ ಬದಲಾವಣೆ, ವಿವಿಧೆಡೆ ಪಾರ್ಕಿಂಗ್ ನಿಷೇಧ, ಎಲ್ಲೆಲ್ಲಿ?
ಅಂದು ಸಂಜೆ ಅಂಡರ್ ಬ್ರಿಡ್ಜ್‌ನಿಂದ ಪಂಜಿನ ಮೆರವಣಿಗೆ ಪ್ರಾರಂಭಿಸಿ ಹೊಸ ಸೇತುವೆ ರಸ್ತೆ, ತಾಲೂಕು ಕಚೇರಿ ರಸ್ತೆ, ರಂಗಪ್ಪ ಸರ್ಕಲ್, ಮಾಧವಾಚಾರ್ ಸರ್ಕಲ್, ಹಾಲಪ್ಪ ಸರ್ಕಲ್ ಮೂಲಕ ಅಂಡರ್ ಬ್ರಿಡ್ಜ್ ತಲುಪಲಿದೆ. ನಂತರ 18ರಂದು ಮಧ್ಯಾಹ್ನ ವಿಐಎಸ್‌ಎಲ್ ಕಾರ್ಖಾನೆಯ ಎದುರು ಬೈಕ್ ಮೂಲಕ ಮೆರವಣಿಗೆ ಹೊರಟು ಶಿವಮೊಗ್ಗದಲ್ಲಿರುವ ಸಂಸದರ ಮನೆಗೆ ಹೋಗಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ – ಭದ್ರಾವತಿಯಲ್ಲಿ ಓ.ಸಿ, ಮಟ್ಕಾ, ಇಸ್ಪೀಟ್ ದಂಧೆ, ಶಿವಮೊಗ್ಗದಲ್ಲಿ ಜೆಡಿಎಸ್, ಬಿಜೆಪಿ ಆಕ್ರೋಶ
ರಾಕೇಶ್, ವಿನೋದ್ ಕುಮಾರ್, ಗುಣಶೇಖರ್, ವಿನಯ್‌ಕುಮಾರ್, ಜಿ.ಆನಂದ್, ಜಾನ್ ಬೆನ್ನಿ ಇತರರಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422