ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಭದ್ರಾವತಿ: ಚನ್ನಗಿರಿಯಿಂದ ಭದ್ರಾವತಿಗೆ ತೆರಳುತ್ತಿದ್ದ ಖಾಸಗಿ ಬಸ್ (Private Bus) ಚಾಲಕನ ನಿಯಂತ್ರಣ ತಪ್ಪಿ ಕಾಗೆಹಳ್ಳ ಸೇತುವೆಯಿಂದ ಹಾರಿದೆ. ಘಟನೆಯಲ್ಲಿ ಸುಮಾರು 30 ಪ್ರಯಾಣಿಕಗರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಹೇಗಾಯ್ತು ಘಟನೆ?
ಖಾಸಗಿ ಬಸ್ಸು ಕಾಗೆಹಳ್ಳ ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ಇಂಧನ ಭರ್ತಿ ಮಾಡಿಕೊಂಡು ಭದ್ರಾವತಿ ಕಡೆಗೆ ತೆರಳುತಿತ್ತು. ವೀರಾಪುರ ಬಳಿ ಕಾಗೆಹಳ್ಳದ ಸೇತುವೆಯಿಂದ ಕೆಳಗೆ ಹಾರಿದೆ. ಬಸ್ಸಿನಲ್ಲಿದ್ದ ಮಕ್ಕಳು, ಮಹಿಳೆಯರು, ವೃದ್ಧರು ಸೇರಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೆ ಭದ್ರಾವತಿ ಮತ್ತು ಶಿವಮೊಗ್ಗದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.

‘ಅತಿ ವೇಗವೇ ಘಟನೆಗೆ ಕಾರಣ’
ಇನ್ನು, ಬಸ್ ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಚನ್ನಗಿರಿ ಬಳಿ ಕೆಎಸ್‌ಆರ್‌ಟಿಸಿ ಬಸ್‌ನೊಂದಿಗೆ ಸ್ಪರ್ಧೆಗೆ ಬಿದ್ದಂತೆ ಬಸ್ ಚಲಾಯಿಸಿದ್ದರು. ಅದೃಷ್ಟವಶಾತ್ ಅಲ್ಲಿ ಯಾವುದೇ ಅವಘಡ ಸಂಭವಿಸಿರಲಿಲ್ಲ. ಚನ್ನಗಿರಿಯಿಂದ ಬರುವಾಗಲು ಬಸ್ಸು ವೇಗವಾಗಿಯೇ ಸಾಗಿತ್ತು. ಪೆಟ್ರೋಲ್ ಬಂಕ್‌ಗೆ ಹೋಗಿ ಅಲ್ಲಿಂದ ಹೊರಟಾಗ ಈ ಅವಘಡ ಸಂಭವಿಸಿದೆ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕರಡಿ
ಘಟನೆಯ ಬಳಿಕ ಚಾಲಕ, ನಿರ್ವಾಹಕ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

LATEST NEWS
- ಸೇತುವೆಯಿಂದ ಕೆಳಗೆ ಹಾರಿದ ಖಾಸಗಿ ಬಸ್, ಹೇಗಾಯ್ತು ಘಟನೆ?

- BREAKING NEWS – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕರಡಿ

- ಅಡಿಕೆ ಕಳ್ಳರ ಹಾವಳಿ, ರಾತ್ರೋರಾತ್ರಿ ಲಕ್ಷ ಲಕ್ಷದ ಅಡಿಕೆ ನಾಪತ್ತೆ, ಎಲ್ಲಿ? ಏನಾಯ್ತು?

- ಮಹಿಳೆಯರೆ ಹುಷಾರ್, ಶಿವಮೊಗ್ಗದಲ್ಲಿ ಸಂಘದ ಸಾಲದ ಹೆಸರಲ್ಲಿ ನಡೆಯಿತು ಮಹಾ ವಂಚನೆ, ಆಗಿದ್ದೇನು?

- ಅತ್ತೆ ಮನೆಯಿಂದ ಶಿವಮೊಗ್ಗದ ಮನೆಗೆ ಮರಳಿದ ವ್ಯಕ್ತಿಗೆ ಬಿಗ್ ಶಾಕ್, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು














