ಭದ್ರಾವತಿಯಲ್ಲಿ ಮಧ್ಯರಾತ್ರಿ ಕಾರ್ಯಾಚರಣೆ, ನಾಡಬಂದೂಕು ಸಹಿತ ಜಿಂಕೆ ಬೇಟೆಗಾರ ವಶಕ್ಕೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 7 ಜುಲೈ 2021

ನಡುರಾತ್ರಿಯಲ್ಲಿ ಜಿಂಕೆ ಬೇಟೆಯಾಡಿ ಕೊಂಡೊಯ್ಯುತ್ತಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ನಾಡಬಂದೂಕು ಸಹಿತ ಒಬ್ಬನನ್ನು ಬಂಧಿಸಿದ್ದಾರೆ.

ತಿಮ್ಲಾಪುರದ ಯೋಗೇಶ್‍ ನಾಯ್ಕ್ (34) ಬಂಧಿತ. ಒಂದು ನಾಡ ಬಂದೂಕು, ಬೈಕನ್ನು ವಶಕ್ಕೆ ಪಡೆಯಲಾಗಿದೆ. ಈತನೊಂದಿಗೆ ಇದ್ದ ರಬ್ಬರ್‍ ಕಾಡು ನಿವಾಸಿ ಷಣ್ಮುಖ ಎಂಬಾತ ಪರಾರಿಯಾಗಿದ್ದು, ಆತನ ಪತ್ತೆ ಕಾರ್ಯ ನಡೆಯುತ್ತಿದೆ.

ಮಧ್ಯರಾತ್ರಿ 3 ಗಂಟೆಗೆ ಕಾರ್ಯಾಚರಣೆ

ಅರಣ್ಯಾಧಿಕಾರಿಗಳು ಮಧ್ಯರಾತ್ರಿ 3 ಗಂಟೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಸಿದ್ದಾಪುರ ಅರಣ್ಯ ವ್ಯಾಪ್ತಿಯಲ್ಲಿ ಜಿಂಕೆ ಬೇಟೆಯಾಡಿ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಬೇಟೆಗೆ ಬಳಕೆ ಮಾಡಿಕೊಂಡಿದ್ದ ನಾಡಬಂದೂರು, ಬೈಕು ಮತ್ತು ಜಿಂಕೆಯ ಮೃತದೇಹವನ್ನು ವಶಕ್ಕೆ ಪಡೆಯಲಾಗಿದೆ.

203044815 1148179448995297 4099900154580379732 n.jpg? nc cat=100&ccb=1 3& nc sid=730e14& nc ohc=EB7AAr6Q0TkAX9CDOlV&tn=XgSJ3kUX1No5RJvs& nc ht=scontent.fblr1 6

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ.ಸುಬ್ರಹ್ಮಣ್ಯ ಮತ್ತು ವಲಯ ಅರಣ್ಯಾಧಿಕಾರಿ ಕೆ.ಹೆಚ್.ಮಂಜುನಾಥ್ ಅವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ವಿಜಯ ಕುಮಾರ್‍ ಮಾಳಗಿ, ಬಿ.ಆರ್.ದಿನೇಶ್ ಕುಮಾರ್, ನವೀನ್ ಕುಮಾರ್, ಅಣ್ಣಾನಾಯ್ಕ್, ಅರಣ್ಯ ರಕ್ಷಕ ನಾಗೇಂದ್ರ, ರಶೀದ್ ಬೇಗ್, ಭಾಸ್ಕರ್, ಅರಣ್ಯ ವೀಕ್ಷಕ ಸಚಿನ್, ಶಿವು, ಸೋನು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : July 7, 2021

Leave a Comment