ಹೊಳೆಹೊನ್ನೂರು: ಮನೆಯ ಬೀರುವಿನಲ್ಲಿಟ್ಟಿದ್ದ ಚಿನ್ನದ ಕಿವಿ ಓಲೆ (Ear Ring) ಮತ್ತು ನಗದು ಕಳ್ಳತನವಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಹೊಳೆಹೊನ್ನೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
ಹೊಳೆಹೊನ್ನೂರಿನ ಉಪ್ಪಾರ ಬೀದಿಯ ಪದ್ಮಾ ಎಂಬುವವರ ಮನೆಯ ಬೀರುವಿನಲ್ಲಿಟ್ಟಿದ್ದ ಚಿನ್ನದ ಕಿವಿಯೋಲೆ ಕಳುವಾಗಿದೆ ಎಂದು ಆರೋಪಿಸಲಾಗಿದೆ. ಆಗಸ್ಟ್ 1ರಂದು ಬೀರು ತೆಗೆದು ನೋಡಿದಾಗ 7 ಗ್ರಾಂ ತೂಕದ ₹30 ಸಾವಿರ ಮೌಲ್ಯದ ಕಿವಿಯೋಲೆಗಳು, ₹6 ಸಾವಿರ ನಗದು ಕಾಣೆಯಾಗಿತ್ತು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ » ಜೀವ ವಿಮೆ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಐದು ವಿಧದ ಇನ್ಷುರೆನ್ಸ್‌ಗಳ ವಿವರ
ಇದನ್ನೂ ಓದಿ:
ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ ಅಮಿತ್ ಷಾ
Ear Ring and money theft at Holehonnuru


