ಎಟಿಎಂನಲ್ಲಿ ದುಡ್ಡು ಬರಲಿಲ್ಲ ಅಂತಾ ಬ್ಯಾಂಕ್‌ಗೆ ತೆರಳಿದ ಭದ್ರಾವತಿಯ ವ್ಯಕ್ತಿಗೆ ಕಾದಿತ್ತು ಶಾಕ್‌, ಆಗಿದ್ದೇನು?

Published On : ಫೆಬ್ರವರಿ 2, 2026

Published By : ನಿತಿನ್‌ ಆರ್‌.ಕೈದೊಟ್ಲು 

ಭದ್ರಾವತಿ: ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಲು ಬಂದಿದ್ದ ವೃದ್ಧರೊಬ್ಬರ ಕಾರ್ಡ್ ಬದಲಿಸಿ (cheated), ಅವರ ಖಾತೆಯಿಂದ ಒಂದು ಲಕ್ಷ ಹಣ ದೋಚಿರುವ ಘಟನೆ ಭದ್ರಾವತಿಯ KSRTC ಬಸ್ ನಿಲ್ದಾಣದ ಮುಂಭಾಗದ ಎಟಿಎಂನಲ್ಲಿ ಜರುಗಿದೆ. ಜನವರಿ 12ರಂದು ಕೃತ್ಯ ನಡೆದಿದ್ದು ತಡವಾಗಿ ದೂರು ದಾಖಲಾಗಿದೆ.

ಸಿದ್ಧಾರೂಢನಗರದ ಸದಾಶಿವಪ್ಪ ಜಿ.ಕೆ ಅವರು ಹಣ ಡ್ರಾ ಮಾಡಲು ಕೆನರಾ ಬ್ಯಾಂಕ್ ಎಟಿಎಂಗೆ ತೆರಳಿದ್ದರು. ಈ ವೇಳೆ ಎಟಿಎಂನಿಂದ ಹಣ ಬಾರದೇ ಇದ್ದಾಗ, ಅಲ್ಲೇ ಇದ್ದ ಸುಮಾರು 25-30 ವರ್ಷದ ಅಪರಿಚಿತ ವ್ಯಕ್ತಿಯ ಸಹಾಯ ಕೇಳಿದ್ದಾರೆ. ಆ ವ್ಯಕ್ತಿಯು ಸದಾಶಿವಪ್ಪ ಅವರ ಎಟಿಎಂ ಕಾರ್ಡ್ ಪಡೆದು, ಪಾಸ್‌ವರ್ಡ್ ಗಮನಿಸಿ ಬಳಿಕ ಕಾರ್ಡ್ ಬದಲಿಸಿ ಬೇರೆ ಕಾರ್ಡ್ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

Shivamogga Live reached 2.8 million views in January-2026 - Editor : Nitin Kaidotlu

ಎಟಿಎಂ ಕಾರ್ಡ್‌ ಬದಲಾಗಿರುವುದನ್ನು ಅರಿಯದ ಸದಾಶಿವಪ್ಪ ಅವರು ಮನೆಗೆ ಹೋಗಿದ್ದಾರೆ. ಬಳಿಕ ಬ್ಯಾಂಕ್‌ನಲ್ಲಿ ಪರಿಶೀಲಿಸಿದಾಗ ಅವರ ಖಾತೆಯಿಂದ ಹಂತ ಹಂತವಾಗಿ ಒಟ್ಟು ₹1,18,700 ಹಣ ಡ್ರಾ ಮಾಡಿಕೊಂಡಿರುವುದು ಗೊತ್ತಾಗಿದೆ. ವಂಚನೆ ಸಂಬಂಧ ಸದಾಶಿವಪ್ಪ ಅವರು ನೀಡಿದ ದೂರಿನ ಮೇರೆಗೆ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಗುಡ್ಡೇಕಲ್‌ನಲ್ಲಿ ತೈಪೂಸಂ ಜಾತ್ರೆ, ಹಾಲಿನ ಕುಂಭ ಹೊತ್ತು ಮಹಿಳೆಯರ ಮೆರವಣಿಗೆ, ಜಾತ್ರೆಯ ವಿಶೇಷವೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಫೆಬ್ರವರಿ 2, 2026

Leave a Comment