ಚಿನ್ನದ ಸರ ರಿಪೇರಿಗೆ ಬಂಗಾರದ ಅಂಗಡಿಗೆ ಬಂದ ಮಹಿಳೆ, ಪರ್ಸ್‌ ತೆಗೆದಾಗ ಕಾದಿತ್ತು ಆಘಾತ

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ಹೊಳೆಹೊನ್ನೂರು: ರಿಪೇರಿಗೆಂದು ಕೊಂಡೊಯ್ದಿದ್ದ ಚಿನ್ನದ ಸರ ಕಣ್ಮರೆಯಾಗಿದೆ. ಚಿನ್ನದ ಅಂಗಡಿ ಮುಂದೆ ಪರ್ಸ್‌ (Purse) ತೆಗೆದಾಗ ಸರ ಇಲ್ಲದಿರುವುದು ಗೊತ್ತಾಗಿದೆ.

ಯಡೆಹಳ್ಳಿಯ ರಾಮಲಮ್ಮ ಎಂಬುವವರ ಎರಡು ಎಳೆಯ ಬಂಗಾರದ ಸರದಲ್ಲಿ ಒಂದು ಎಳೆ ತುಂಡಾಗಿತ್ತು. ರಿಪೇರಿಗೆಂದು ಸರವನ್ನು ಪರ್ಸ್‌ನಲ್ಲಿ ಇರಿಸಿಕೊಂಡು, ಅದನ್ನು ಬ್ಯಾಗಿನಲ್ಲಿಟ್ಟುಕೊಂಡು ಬಸ್ಸಿನಲ್ಲಿ ಹೊಳೆಹೊನ್ನೂರಿಗೆ ತೆರಳಿದ್ದರು.

https://chat.whatsapp.com/JPJ0lTQsTKf365Fqu6Q7cd
ಈ ಫೋಟೊ ಮೇಲೆ ಕ್ಲಿಕ್‌ ಮಾಡಿ, ಶಿವಮೊಗ್ಗ ಲೈವ್‌ ವಾಟ್ಸಪ್‌ ಗ್ರೂಪ್‌ ಸೇರಿರಿ.

ಹೊಳೆಹೊನ್ನೂರಿನಲ್ಲಿ ಬಂಗಾರದ ಅಂಗಡಿ ಮುಂಭಾಗ ಪರ್ಸ್‌ ತೆಗೆದಾಗ ಚಿನ್ನದ ಸರ ನಾಪತ್ತೆಯಾಗಿತ್ತು. ಮನೆಗೆ ಹಿಂತಿರುಗಿ ಹುಡುಕಿದರು ಚಿನ್ನದ ಸರ ಸಿಗಲಿಲ್ಲ. 1 ಲಕ್ಷ ರೂ. ಮೌಲ್ಯದ 33 ಗ್ರಾಂನ ಚಿನ್ನದ ಸರ ನಾಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಇದನ್ನೂ ಓದಿ » ಶಿವಮೊಗ್ಗದ ಹವಾಮಾನ ವರದಿ | 3 ಜೂನ್‌ 2025 | ಇವತ್ತು ಎಲ್ಲೆಲ್ಲಿ ಮಳೆ ಮುನ್ಸೂಚನೆ ಇದೆ?

ಹೆಚ್ಚಿನ Shimoga News, Shivamogga News ಮತ್ತು BHADRAVATHI ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಜೂನ್ 3, 2025

Leave a Comment