SHIVAMOGGA LIVE NEWS | 8 AUGUST 2023
SHANKARAGHATTA : ಐಎಎಸ್ ಅಧಿಕಾರಿಯೊಬ್ಬರಿಗೆ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿ (Registrar) ಹೆಚ್ಚುವರಿ ಜವಾಬ್ದಾರಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಈ ನಡೆ ಕುತೂಹಲ ಮೂಡಿಸಿದೆ.
ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ಲೋಖಂಡೆ ಸ್ನೇಹಲ್ ಸುಧಾಕರ್ ಅವರಿಗೆ ಕುವೆಂಪು ವಿವಿಯ ಕುಲಸಚಿವ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಇವತ್ತು ಮಧ್ಯಾಹ್ನ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಕುವೆಂಪು ವಿವಿಯಲ್ಲಿ ಅಧಿಕಾರ ವಹಿಸಿಕೊಂಡರು.
ಈಚೆಗಷ್ಟೆ ಪ್ರೊ. ಕಣ್ಣನ್ ನೇಮಕವಾಗಿತ್ತು
ಇತ್ತೀಚೆಗಷ್ಟೆ ಕುವೆಂಪು ವಿವಿಯ ಕುಲಸಚಿವರಾಗಿ (Registrar) ಪ್ರೊ. ಪಿ.ಕಣ್ಣನ್ ಅವರು ನೇಮಿಸಲಾಗಿತ್ತು. ಜು.28ರಂದು ಪ್ರೊ. ಕಣ್ಣನ್ ಅವರು ಅಧಿಕಾರ ವಹಿಸಿಕೊಂಡಿದ್ದರು. ಉಪನ್ಯಾಸಕರೊಬ್ಬರನ್ನು ಕುಲಸಚಿವ ಸ್ಥಾನಕ್ಕೆ ನೇಮಕ ಮಾಡಿದ್ದು ಚರ್ಚೆಗೆ ಕಾರಣವಾಗಿತ್ತು. ಈ ಮಧ್ಯೆ ಕುಲಸಚಿವರನ್ನು ದಿಢೀರ್ ಬದಲಾವಣೆ ಮಾಡಿದ್ದು ಕುತೂಹಲ ಮೂಡಿಸಿದೆ. ಸಾಮಾನ್ಯವಾಗಿ ಕೆಎಎಸ್ ಅಧಿಕಾರಿಯನ್ನು ಕುಲುಸಚಿವರನ್ನಾಗಿ ನೇಮಿಸಲಾಗುತ್ತಿತ್ತು.3
ಇದನ್ನೂ ಓದಿ – ವೆರೈಟಿ ಡ್ರೆಸ್, ಬಗೆಬಗೆ ಸ್ಟೈಲ್, ಶಿವಮೊಗ್ಗದಲ್ಲಿ ಜೋರಿತ್ತು ವಿಜ್ಞಾನ ವಿದ್ಯಾರ್ಥಿಗಳ ಟ್ರೆಡೀಷನಲ್ ಡೇ ಸೆಲಬ್ರೇಷನ್