ತೀರ್ಥಹಳ್ಳಿ: ದಿಢೀರ್ ಬೆಂಕಿಗೆ ಬಸರಿ ಮರವೊಂದು (tree) ಆಹುತಿಯಾಗಿದೆ. ತೀರ್ಥಹಳ್ಳಿಯ ಕುಡುಮಲ್ಲಿಗೆ ಸಮೀಪ ರಾಷ್ಟ್ರೀಯ ಹೆದ್ದಾರಿ 169ರ ಪಕ್ಕದಲ್ಲಿದ್ದ ಮರದಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.
ಇದೊಂದು ಮುಖ್ಯ ಸುದ್ದಿ⚡ ಮೂವರು ಮಕ್ಕಳೊಂದಿಗೆ ಶಿವಮೊಗ್ಗದಲ್ಲಿ ತುಂಗಾ ನದಿಗೆ ಹಾರಿದ ಚಿತ್ರದುರ್ಗದ ಮಹಿಳೆ, ಆಗಿದ್ದೇನು?
ದಾರಿಯಲ್ಲಿ ಹೋಗುವವರು ಬೀಡಿ, ಸಿಗರೇಟು ಸೇದಿ ಎಸೆದಿರಬಹುದು ಅಥವಾ ಕಿಡಿಗೇಡಿಗಳು ಮರಕ್ಕೆ ಬೆಂಕಿ ಹಚ್ಚಿರಬಹುದು. ಬೇಸಿಗೆಯ ಬಿಸಿಲಿಗೆ ಒಣಗಿರುವ ತರಗೆಲೆಗಳಿಗೆ ಬೆಂಕಿ ತಗುಲಿ, ಅದು ಮರಕ್ಕೆ ವಿಸ್ತರಿಸಿದೆ ಎಂದು ಶಂಕಿಸಲಾಗಿದೆ. ಮರಕ್ಕೆ ಬೆಂಕಿ ಬಿದ್ದ ಪರಿಣಾಮ ಕೆಲ ಸಮಯ ರಸ್ತೆ ಸಂಚಾರ ವ್ಯತ್ಯಯವಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.




