BREAKING NEWS – ಭದ್ರಾವತಿ ವಿಐಎಸ್‌ಎಲ್‌ನಲ್ಲಿ ಚಿರತೆ ಸೆರೆ

SHIVAMOGGA LIVE NEWS | 26 SEPTEMBER 2023

BHADRAVATHI : ವಿಐಎಸ್‌ಎಲ್‌ ಕಾರ್ಖಾನೆ ಆವರಣದಲ್ಲಿ ಚಿರತೆ (Leopard) ಸೆರೆಯಾಗಿದೆ. ಅರಣ್ಯ ಇಲಾಖೆ ಇಟ್ಟಿದ್ದ ಬೋನ್‌ನಲ್ಲಿ ಚಿರತೆ ಸೆರೆ ಸಿಕ್ಕಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ವಿಐಎಸ್‌ಎಲ್‌ನ ಪೀಕಾಕ್‌ ಯಾರ್ಡ್‌ನಲ್ಲಿ ಅರಣ್ಯ ಇಲಾಖೆ ಬೋನ್‌ ಇರಿಸಿತ್ತು. ಅಲ್ಲಿ ಚಿರತೆ (Leopard) ಸೆರೆ ಸಿಕ್ಕಿದೆ. ಬೆಳಗ್ಗೆ ಕಾರ್ಮಿಕರು ಪೀಕಾಕ್‌ ಯಾರ್ಡ್‌ ಕಡೆ ಹೋದಾಗ ಚಿರತೆ ಸೆರೆಯಾಗಿರುವುದನ್ನು ಗಮನಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ – ಭದ್ರಾವತಿ VISL ಕಾರ್ಖಾನೆ ಆವರಣದಲ್ಲಿ ಚಿರತೆ ಪ್ರತ್ಯಕ್ಷ, ಕಾರ್ಮಿಕರಲ್ಲಿ ಆತಂಕ

Kalleshwara-Enterprises.webp

ಎರಡು ತಿಂಗಳ ಹಿಂದೆ ವಿಐಎಸ್‌ಎಲ್‌ನ ಬಿಜಿ ವೇಯಿಂಗ್‌ ಬ್ರಿಡ್ಜ್‌ ಸಮೀಪ ಚಿರತೆ ಪ್ರಯತ್ಯಕ್ಷವಾಗಿತ್ತು. ಕಾರ್ಮಿಕರು ಚಿರತೆಯ ವಿಡಿಯೋ ಚಿತ್ರೀಕರಣ ಮಾಡಿದ್ದರು. ಈ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿ ಬೋನ್‌ ಇರಿಸಿದ್ದರು.

Leopard caught at VISL factory in Bhadravathi

Leopard caught at VISL factory in Bhadravathi

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment