ಒಂದೇ ಒಂದು ಮೆಸೇಜ್‌ ಮಾಡಿ ₹3.96 ಲಕ್ಷ ಕಳೆದುಕೊಂಡ ಭದ್ರಾವತಿ ವ್ಯಕ್ತಿ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಭದ್ರಾವತಿ: ಹಣ ಡಬಲ್‌ (Money) ಆಗಲಿದೆ ಎಂದು ಟೆಲಿಗ್ರಾಂ ಅಪ್ಲಿಕೇಷನ್‌ನಲ್ಲಿ ಬಂದ ಮೆಸೇಜ್‌ ನಂಬಿ ಭದ್ರಾವತಿಯ ವ್ಯಕ್ತಿಯೊಬ್ಬರು ₹3.96 ಲಕ್ಷ ಕಳೆದಕೊಂಡಿದ್ದಾರೆ.

ಹೇಗಾಯ್ತು ವಂಚನೆ?

ಭದ್ರಾವತಿ ವ್ಯಕ್ತಿಯೊಬ್ಬರು ಮಗ ಮತ್ತು ಅಳಿಯನ ಜೊತೆಗೆ ಮಾತನಾಡುತ್ತಿದ್ದಾಗ ಜೈದೀಪ್‌ ಭಾರತಿ ಎಂಬ ಹೆಸರಿನಲ್ಲಿ ಟೆಲಿಗ್ರಾಂ ಅಪ್ಲಿಕೇಷನ್‌ಗೆ ಮೆಸೇಜ್‌ ಬಂದಿತ್ತು. ಹಣ ಹೂಡಿಕೆ ಮಾಡಿದರೆ ಡಬಲ್‌ ಆಗಲಿದೆ ಎಂದು ತಿಳಿಸಲಾಗಿತ್ತು. ಇದನ್ನು ನಂಬಿದ ಭದ್ರಾವತಿ ವ್ಯಕ್ತಿ ಆ ಮೆಸೇಜ್‌ಗೆ ರಿಪ್ಲೆ ಮಾಡಿದ್ದರು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಮೂರು ವಿವಿಧ ಅಕೌಂಟ್‌ ಕೊಟ್ಟಿದ್ದರು

ಭದ್ರಾವತಿಯ ವ್ಯಕ್ತಿಗೆ ಜೈದೀಪ್‌ ಭಾರತಿ ಹೆಸರಿನಲ್ಲಿ ಚಾಟ್‌ ಮಾಡುತ್ತಿದ್ದ ವ್ಯಕ್ತಿಯು ಮೂರು ಬಾರಿ ಮೂರು ಪ್ರತ್ಯೇಕ ಬ್ಯಾಂಕ್‌ ಖಾತೆಗಳ ವಿವರ ನೀಡಿದ್ದ. ಅವುಗಳಿಗೆ ಹಣ ವರ್ಗಾವಯಿಸುವಂತೆ ತಿಳಿಸಿದ್ದ. ಭದ್ರಾವತಿ ವ್ಯಕ್ತಿಯು ಅಳಿಯ, ಮಗಳು ಮತ್ತು ತಮ್ಮ ಬ್ಯಾಂಕ್‌ ಖಾತೆಯಿಂದ ಒಟ್ಟು ₹3.96 ಲಕ್ಷ ಹಣ ವರ್ಗಾಯಿಸಿದ್ದರು. ನಂತರ ಲಾಭಾಂಶದ ಹಣ ಕೇಳಿದಾಗ ಜೈದೀಪ್‌ ಭಾರತಿ ಟೆಲಿಗ್ರಾಂ ಅಕೌಂಟ್‌ ಡಿಲೀಟ್‌ ಆಗಿತ್ತು ಎಂದು ಆರೋಪಿಸಲಾಗಿದೆ.

Bhadravathi-Old-Town-Police-Station

ಘಟನೆ ಸಂಬಂಧ ಭದ್ರಾವತಿ ಓಲ್ಡ್‌ ಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಣ್ಣನ ಮನೆ ಅಡ್ರೆಸ್‌ ಕೇಳುತ್ತಲೆ ಮಹಿಳೆ ಕೊರಳಿಗೆ ಕೈ ಹಾಕಿ ಚಿನ್ನದ ಸರ ಕಸಿದು ಪರಾರಿ

Leave a Comment